RCBಗೆ ಯಶ್ ದಯಾಳ್ ಕನ್ಫ್ಯೂಷನ್ – ರಿಲೀಸ್ ಮಾಡಿದ್ರೂ ಕಷ್ಟ.. ಇದ್ರೂ ಕಷ್ಟ
UPCAನಂತೆ IPLನಲ್ಲೂ ಬ್ಯಾನ್ ಆಗ್ತಾರಾ?

RCBಗೆ ಯಶ್ ದಯಾಳ್ ಕನ್ಫ್ಯೂಷನ್ – ರಿಲೀಸ್ ಮಾಡಿದ್ರೂ ಕಷ್ಟ.. ಇದ್ರೂ ಕಷ್ಟUPCAನಂತೆ IPLನಲ್ಲೂ ಬ್ಯಾನ್ ಆಗ್ತಾರಾ?

ಐಪಿಎಲ್​ನ ಹತ್ತೂ ಫ್ರಾಂಚೈಸಿಗಳಲ್ಲೂ ರಿಟೇನ್ & ರಿಲೀಸ್ ಲಿಸ್ಟ್ ರೆಡಿಯಾಗ್ತಿದೆ. ಶನಿವಾರದೊಳಗೆ ಅದನ್ನ ಅನೌನ್ಸ್ ಕೂಡ ಮಾಡ್ಬೇಕು. ಆದ್ರೆ ಆರ್​ಸಿಬಿಯಲ್ಲಿ ಅದೊಬ್ಬ ಆಟಗಾರ ಮ್ಯಾನೇಜ್​ಮೆಂಟ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ರಿಲೀಸ್ ಮಾಡೋಕೆ ಇಷ್ಟ ಇಲ್ಲ ಹಂಗಂತ ತಂಡದಲ್ಲಿ ಇಟ್ಟುಕೊಳ್ಳೋಕೂ ಆಗಲ್ಲ. ಅದುವೇ ಯಶ್ ದಯಾಳ್.

ಇದನ್ನೂ ಓದಿ : IPL ಎಕ್ಸ್​ ಚೇಂಜ್ ಡೀಲ್ ಸ್ಟಾರ್ಟ್ – 10 ಟೀಂ.. ಪರ್ಸ್ ಬ್ಯಾಲೆನ್ಸ್ ಹೇಗಿದೆ?

18ನೇ ಸೀಸನ್ ಐಪಿಎಲ್​ನ​ ಆರ್​ಸಿಬಿ ಫ್ಯಾನ್ಸ್ ಅಂತೂ​ ಲೈಫ್ ಲಾಂಗ್ ಮರೆಯೋಕೆ ಚಾನ್ಸೇ ಇಲ್ಲ. ಯಾಕಂದ್ರೆ ಸತತ 17 ವರ್ಷಗಳ ಬಳಿಕ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಕ್ಷಣ ಅದು. ಌಂಡ್ ಕೋಟ್ಯಂತರ ಅಭಿಮಾನಿಗಳು ಆರಾಧಿಸೋ ವಿರಾಟ್ ಕೊಹ್ಲಿ ಕೂಡ ಕಣ್ಣೀರಾಗಿದ್ರು. ಇದೇ ಚಾಂಪಿಯನ್ ಟೀಮ್​ನೆ ನೆಕ್ಸ್​ಟ್ ಸೀಸನ್​ಗೂ ಕಂಟಿನ್ಯೂ ಮಾಡಿ. ಬ್ಯಾಟಿಂಗ್ ಬೊಂಬಾಟ್ ಆಗಿದೆ, ಬೌಲಿಂಗ್ ಅಲ್ಟಿಮೇಟ್ ಆಗಿದೆ. ಟೋಟಲಿ ಬ್ಯಾಲೆನ್ಸ್​ಡ್ ಟೀಂ ಅಂತಾ ಸಜೇಷನ್ಸ್ ಕೊಡ್ತಿದ್ದಾರೆ. ಆದ್ರೆ ಯಶ್​ ದಯಾಳ್​ರನ್ನ ಬಿಡುಗಡೆ ಮಾಡ್ಲೇಬೇಕಾದ ಸ್ಥಿತಿ ಬಂದಿದೆ. ಅದಕ್ಕೆ ಕಾರಣ ದಯಾಳ್ ಮಾಡಿಕೊಂಡಿರೋ ಎಡವಟ್ಟು.

ಮದುವೆಯಾಗೋದಾಗಿ ನಂಬಿಕೆ ಮೋಸ.. ದಯಾಳ್ ಬ್ಯಾನ್?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಯಶ್ ದಯಾಳ್ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ ಐಪಿಎಲ್ ಮುಗಿದ್ಮೇಲೆ ಅವ್ರ ಇಮೇಜ್ ಕಂಪ್ಲೀಟ್ ಡ್ಯಾಮೇಜ್ ಆಗಿತ್ತು. ಇದನ್ನ ಮಾಡಿಕೊಂಡಿದ್ದೇ ಅವ್ರು. ಮದುವೆಯಾಗೋದಾಗಿ ನಂಬಿಸಿ ಐದು ವರ್ಷದಿಂದ ಯುವತಿ ಜೊತೆ ರಿಲೇಷನ್​ಶಿಪ್​ನಲ್ಲಿದ್ದು ಆ ನಂತ್ರ ಮೋಸ ಮಾಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಹಾಗೇ ಅಪ್ರಾಪ್ತೆಗೂ ಮೋಸ ಮಾಡಿದ್ದ ಆರೋಪವಿದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದ ಗಾಝಿಯಾಬಾದ್​ ಠಾಣೆಯಲ್ಲಿ ದಯಾಳ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಌಂಡ್ ಅರೆಸ್ಟ್ ಆಗೋ ಭೀತಿಯಲ್ಲೂ ಇದ್ರು.  ಇದೆಲ್ಲಾ ಆದ್ಮೇಲೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯುಪಿ ಟಿ20 ಲೀಗ್​ನಿಂದ ಹೊರಗಿಟ್ಟಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಗೂ ಆಯ್ಕೆ ಮಾಡಿಲ್ಲ. ಹೀಗಾಗಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯಶ್ ದಯಾಳ್ ಮೇಲೆ ನಿಷೇಧ ಹೇರಿರುವ ಕಾರಣ ಅವರು ಮುಂಬರುವ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಎಡಗೈ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡ್ಲೇಬೇಕಾಗುತ್ತೆ. ಸೋ ಇದು ಒಂದು ಌಂಗಲ್. ಬಟ್ ದಯಾಳ್ ಕೈಬಿಟ್ರೆ ಅಂಥದ್ದೇ ವರ್ತ್ ಇರೋ ಪ್ಲೇಯರ್​ನ ರಿಪ್ಲೇಸ್ ಮಾಡ್ಬೇಕಾಗುತ್ತೆ.

ಗುಜರಾತ್ ನಲ್ಲಿ ವಿಲನ್.. ಆರ್ ಸಿಬಿ ಹೀರೋ ಆಗಿದ್ದ ದಯಾಳ್!

ಐಪಿಎಲ್​ ಫ್ಯಾನ್ಸ್​ಗೆ ಯಶ್ ದಯಾಳ್ ಅಂದಾಕ್ಷಣ ಥಟ್ ಅಂತಾ ನೆನಪಾಗೋದೇ ಸತತ ಐದು ಸಿಕ್ಸರ್.  2023ರಲ್ಲಿ ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡಿದ್ದು. ಕೆಕೆಆರ್ ಮತ್ತು ಗುಜರಾತ್ ನಡುವಿನ ಮ್ಯಾಚಲ್ಲಿ ರಿಂಕು ಸಿಂಗ್ ಕೊನೇ ಐದು ಬಾಲ್​ಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನ ಗೆಲ್ಲಿಸಿಕೊಟ್ಟಿದ್ರು. ಕಳಪೆ ಬೌಲಿಂಗ್​ನಿಂದಾಗಿ ಗುಜರಾತ್ ತಂಡ ದಯಾಳ್​ರನ್ನ ಕೈಬಿಟ್ಟಿತ್ತು. ಇಂಥಾ ಟೈಮಲ್ಲಿ ಅವ್ರಿಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದೇ ಆರ್​ಸಿಬಿ. 2024ರ ಐಪಿಎಲ್​ಗೂ ಮುನ್ನ ಆರ್​ಸಿಬಿ ಸೇರಿದ್ದ ದಯಾಳ್ ಅದ್ಭುತ ಪ್ರದರ್ಶನವನ್ನೇ ನೀಡಿದ್ರು. ಹಾಗೇ 15 ವಿಕೆಟ್​​ಗಳನ್ನ ತೆಗೆದಿದ್ರು. ಆ ಬಳಿಕ 2025ರ ಐಪಿಎಲ್​ಗೂ ಮುನ್ನ ಫ್ರಾಂಚೈಸಿ ದಯಾಳ್​ರನ್ನ ರಿಟೇನ್ ಮಾಡ್ಕೊಂಡಿತ್ತು. ಌಂಡ್ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಶ್ ದಯಾಳ್ 18ನೇ ಸೀಸನ್​ನಲ್ಲಿ 15 ಪಂದ್ಯಗಳನ್ನು ಆಡಿದ್ದು, 13 ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಜೋಶ್ ಹೇಜಲ್​ವುಡ್ ಕೆಲ ಪಂದ್ಯಗಳಲ್ಲಿ ಮಿಸ್ ಆದಾಗ ದಯಾಳ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಜೊತೆಗೆ ಪವರ್ ಪ್ಲೇ ಮತ್ತು ಡೆತ್ ಓವರ್​ಗಳಲ್ಲಿ ಟ್ರಸ್ಟ್ ಮಾಡಬಹುದಾದಂತ ಬೌಲರ್ ಕೂಡ ಹೌದು. ಆದ್ರೀಗ ನೆಕ್ಸ್​ಟ್ ಸೀಸನ್​ಗೆ ಐಪಿಎಲ್​ನಿಂದಲೇ ಬ್ಯಾನ್ ಆಗೋ ಚಾನ್ಸಸ್ ಇದೆ. ಯಾಕಂದ್ರೆ ಯುಪಿ ಅಸೋಸಿಯೇಷನ್ ನಿಷೇಧ ಹೇರಿರೋದ್ರಿಂದ ಐಪಿಎಲ್​ನಲ್ಲಿ ಆಡೋಕೂ ಸಾಧ್ಯವಾಗಲ್ಲ. ಅನಿವಾರ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ತಂಡದಿಂದ ರಿಲೀಸ್ ಮಾಡ್ಬೇಕಾಗುತ್ತೆ.

Shantha Kumari