ಕ್ಯಾಪ್ಟನ್ ಆಗ್ತಿದ್ದಂತೆ ಮಾಳು ಖದರ್ ಚೇಂಜ್! – ಹಳ್ಳಿ ಹೈದ ಈಗ ಫುಲ್ ವೈಲೆಂಟ್

ಬಿಗ್ ಬಾಸ್ ಮನೆಯಲ್ಲಿ ಈಗ ಟಾಸ್ಕ್ ತುಂಬಾ ಕಠಿಣವಾಗ್ತಿದೆ. ಬಿಗ್ ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದ್ದಂತೆ ಸ್ಪರ್ಧಿಗಳು ಕೂಡ ಗೇಮ್ ಶುರುಮಡ್ಕೊಂಡಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಳು ಈಗ ಕ್ಯಾಪ್ಟನ್ ಆಗ್ತಿದ್ದಂತೆ ಫುಲ್ ವೈಲೆಂಟ್ ಆಗಿದ್ದಾರೆ. ಇದೀಗ ಸಹ ಸ್ಪರ್ಧಿಗಳು ಮಾಳುವನ್ನ ಟಾರ್ಗೆಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಗ್ಯಾಂಗ್ Target ಗಿಲ್ಲಿ, ರಕ್ಷಿತಾ! – ಗೆಲ್ತಾರೆ ಅನ್ನೋ ಭಯಕ್ಕೇ ಕುಗ್ಗಿಸೋದಾ?
ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳು ಕೆಲವು ವಸ್ತುಗಳನ್ನು ಮನೆಯ ಸದಸ್ಯರ ತಲೆ ಮೇಲೆ ಹಾಕಿ ಕಾರಣವನ್ನು ನೀಡುವ ಟಾಸ್ಕ್ ಅನ್ನ ಬಿಗ್ಬಾಸ್ ಕೊಟ್ಟಿದ್ದಾರೆ. ಈ ಟಾಸ್ಕ್ ವೇಳೆ ಸ್ಪರ್ಧಿಗಳ ಮಧ್ಯೆ ಮಾತಿನಚಕಮಕಿ ನಡೆದಿದೆ. ರಾಶಿಕಾ ಅವರನ್ನು ಕಸ ಎಂದು ಮಾಳು ಕರೆದಿದ್ದಾರೆ. ಅಷ್ಟೇ ಅಲ್ಲ ರಾಶಿಕಾ ಅವರ ಮೇಲೆ ಕಸ ಚೆಲ್ಲಿದ್ದಾರೆ. ಧ್ರುವಂತ್ ಮೇಲೆ ಮಾಳು ಅವರು ಸಗಣಿ ಹಾಕಿದ್ದಾರೆ.
ಈ ಟಾಸ್ಕ್ ಆಗುವ ವೇಳೆ ಸ್ಪರ್ಧಿಗಳು ಒಬ್ಬರಿಗೊಬ್ಬರು ಥೂ ಎಂದೆಲ್ಲ ಹೇಳಿಕೊಂಡಿದ್ದಾರೆ. ಮಾಳು ಅವರು ಧ್ರುವಂತ್ ಅವರಿಗೆ ಸಗಣಿಯನ್ನ ಹಾಕಿದ್ದಾರೆ. ಈ ಬಗ್ಗೆ ಸುಧಿ ಅವರು ಮಾಳು ಅವರಿಗೆ ವ್ಯಂಗ್ಯವಾಗಿ ಮಾತನಾಡಿದರು. ನಿಮ್ಮನ್ನು ಧ್ರುವಂತ್ ಅವರು ಕ್ಯಾಪ್ಟನ್ ಮಾಡಿದ ಪರಿಣಾಮ ಎಂದರು. ಅಷ್ಟೇ ಅಲ್ಲ ಮಾಳು ಅವರಿಗೆ ಆಟವೇ ಅರ್ಥ ಆಗಿಲ್ಲ ಎಂದು ಸುಧಿ ಹೇಳಿದರು. ಅದಕ್ಕೆ ಮಾಳು ಅವರು ಆಟ ಅರ್ಥ ಮಾಡಿಕೊಳ್ಳದಿರುವಷ್ಟು ಹುಚ್ಚ ನಾನಲ್ಲ ಎಂದರು. ಬಳಿಕ ಬಿಗ್ ಬಾಸ್ ಮನೆಯ ಕಸ ಎಂದು ರಾಶಿಕಾ ಅವರಿಗೆ ಹೇಳಿ, ಕಸ ಚೆಲ್ಲಿದ್ದಾರೆ. ಈ ವೇಳೆ ಥೂ ಎಂದೆಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಗಿಲ್ಲಿ ಅವರು, ‘ಥೂ’ ಎಂದಿದ್ದಾರೆ. ಇದರಿಂದ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಸೈಲೆಂಟ್ ಇದ್ದ ಮಾಳು ವೈಲೆಂಟ್ ಆಗ್ತಿದ್ದಂತೆ ಟಾರ್ಗೆಟ್ ಆದ್ರಾ ಅನ್ನೊ ಪ್ರಶ್ನೆ ಕೂಡ ಮೂಡಿದೆ. ಮಾಳು ಒಂದೊಂದು ಕಾರಣ ಹೇಳಿ ಕಸ, ಸೆಗಣಿ ಸುರಿಯುತ್ತಿದ್ದಂತೆ, ಇತ್ತ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಅಶ್ವಿನಿ ಕೂಡ ಮಾಳು ಮೇಲೆ ಕೂಗಾಡಿದ್ದಾರೆ. ಇನ್ನು ಜಾಹ್ನವಿ, ಸುಧಿ ಕೂಡ ಬೆಡ್ರೂಮ್ನಲ್ಲಿ ಕುಳಿತು ಮೀಟಿಂಗ್ ಮಾಡಿದ್ದಾರೆ. ಗಿಲ್ಲಿ ಕೂಡ ಪಕ್ಕದಲ್ಲೇ ಕೂತು ಇಬ್ಬರ ಮಾತನ್ನ ಕೇಳಿಸಿಕೊಂಡಿದ್ದಾರೆ. ಹಳ್ಳಿ ಹುಡುಗನ ಗತ್ತ, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ ಎಂದಿದ್ದ ಮಾಳು ಅಂತೂ ʻಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಿಯಲ್ ಆಟವನ್ನ ತೋರಿಸುತ್ತಿದ್ದಾರೆ.

ನೋಡಿರಿ

