ತುಪ್ಪ ಇಲ್ಲದ ತಿರುಪತಿ ಲಡ್ಡು! – 5 ವರ್ಷ ತಿಮ್ಮಪ್ಪನ ಭಕ್ತರಿಗೆ ನಾಮ
CBI ತನಿಖೆಯಲ್ಲಿ ಸಿಕ್ಕಿದ್ದೇನು?

ತಿರುಪತಿ ಭಕ್ತರಿಗೆ ಶಾಕ್ ನೀಡುವಂತಹ ವಿಚಾರವು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ. ಒಂದಲ್ಲ ಎರಡಲ್ಲೇ ಸರಿಸುಮಾರು 5 ವರ್ಷಗಳ ಕಾಲ ತಿರುಪತಿ ಲಡ್ಡು ತಯಾರಿಕೆ ಟಿಟಿಡಿಗೆ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿರುವುದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ. ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಕೆಲ ತಿಂಗಳ ಹಿಂದೆ ಹುಟ್ಟಿಕೊಂಡಿದ್ದ ಲಡ್ಡು ವಿವಾದವು ಭಕ್ತಾದಿಗಳನ್ನು ಬೆಚ್ಚಿಬೀಳಿಸಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹಿಂದಿನ ಆಡಳಿತದಲ್ಲಿ ಟಿಟಿಡಿ ಲಡ್ಡುಗಳನ್ನು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಲಾಗಿತ್ತು ಎಂದು ಆರೋಪಿಸಿದ್ದರು. ಈಗ ಇದ್ರಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಟಿಟಿಡಿ ಲಡ್ಡು ತುಪ್ಪ ಕಲಬೆರಕೆ ಪ್ರಕರಣದಲ್ಲಿ ದೆಹಲಿ ಮೂಲದ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಎಸ್ಐಟಿ ಒದ್ದು ಜೈಲಿಗೆ ಕಳುಹಿಸಿದೆ
5 ವರ್ಷಗಳಿಗೂ ಹೆಚ್ಚು ಕಾಲ ನಕಲಿ ತುಪ್ಪ ಪೂರೈಕೆ
ಟಿಟಿಡಿ ತುಪ್ಪ ಹಗರಣ ಸಂಪೂರ್ಣ ಬಯಲಾಗಿದೆ. ಜಗನ್ಮೋಹನ್ ರೆಡ್ಡಿ ಆಡಳಿತದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹250 ಕೋಟಿ ನಕಲಿ ಪೂರೈಕೆಯಾಗಿದೆ. ಟಿಟಿಡಿ 5 ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪವನ್ನು ಸ್ವೀಕರಿಸಿರುವುದನ್ನು ಸಿಬಿಐನ ಎಸ್ಐಟಿ ಪತ್ತೆ ಹಚ್ಚಿದೆ. ಭೋಲೆ ಬಾಬಾ ಡೈರಿ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಸಂಗ್ರಹಿಸದೆ ₹250 ಕೋಟಿ ಮೌಲ್ಯದ 68 ಲಕ್ಷ ಕೆಜಿ ನಕಲಿ ತುಪ್ಪವನ್ನು ಪೂರೈಸಿದೆ. ಬಳಸಿದ ಪಾಮ್ ಎಣ್ಣೆ, ಕರ್ನಲ್ ಎಣ್ಣೆ ಮತ್ತು ಅಸಿಟಿಕ್ ಆಸಿಡ್ ಎಸ್ಟರ್ನಂತಹ ರಾಸಾಯನಿಕಗಳು ನಕಲಿ ಗುಣಮಟ್ಟದ್ದು ಎನ್ನಲಾಗಿದೆ. 2022ರಲ್ಲಿ ಕಪ್ಪುಪಟ್ಟಿಗೆ ಸೇರಿಸಿದ ನಂತರವೂ ನಿರಂತರ ಸರಬರಾಜು ನಡೆದಿದ್ದು, ಭಾರತದ ಅತ್ಯಂತ ಪವಿತ್ರ ದೇವಾಲಯದಲ್ಲಿ ನೀಡಲಾಗುವ ನೈವೇದ್ಯಗಳಲ್ಲಿ ಶುದ್ಧತೆ ರಾಜಿ ಮಾಡಿಕೊಂಡ ಹಗರಣ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಸದ್ಯ ತಿರುಮಲ ತಿರುಪತಿ ದೇವಸ್ಥಾನಂ ಲಡ್ಡು ತುಪ್ಪ ಕಲಬೆರಕೆ ಪ್ರಕರಣದ ತನಿಖೆ ವಿಶೇಷ ತನಿಖಾ ತಂಡ ನಡೆಸುತ್ತಿದೆ. ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಎ-16 ಎಂದು ಹೆಸರಿಸಿದೆ. ಎಸ್ಐಟಿಯ ವರದಿ ಪ್ರಕಾರ ಡೇರಿಯನ್ನು ಉತ್ತರಾಖಂಡದ ಭಗವಾನ್ಪುರದಲ್ಲಿ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಗಿಲ್ & ಟೆಂಬಾಗೆ REAL ಟಾಸ್ಕ್ – TEST ಪಾಸಾದ್ರೆ ಟಾಪ್-2 ಫಿಕ್ಸ್
ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ಸಿಬಿಐ ಪ್ರಕಾರ ಆರೋಪಿಗಳು ನಕಲಿ ತುಪ್ಪ ಉತ್ಪಾದನಾ ಘಟಕವನ್ನೇ ಸ್ಥಾಪಿಸಿ, ಹಾಲು ಸಂಗ್ರಹಣೆ ಮತ್ತು ಪಾವತಿ ಮಾಡಿದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಹಾಗೇ ಈ ಡೇರಿಯಿಂದ ಸರಬರಾಜು ಮಾಡಲಾದ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ತುಪ್ಪದ ದಾಸ್ತಾನುಗಳ ನಾಲ್ಕು ಕಂಟೇನರ್ಗಳನ್ನು ಕಳೆದ ವರ್ಷ ಟಿಟಿಡಿ ತಿರಸ್ಕರಿಸಿತ್ತು. ಆದರೆ ಭೋಲೆ ಬಾಬಾ ಡೇರಿಯು ಇದೇ ಕಂಟೇನರ್ ಅನ್ನು ಭೋಲೆ ಬಾಬಾ ಡೇರಿ, ವೈಷ್ಣವಿ ಡೇರಿ ಮೂಲಕ ಟಿಟಿಡಿಗೆ ಹಿಂತಿರುಗಿಸಿತ್ತಂತೆ. ಆಮೇಲೆ ಇವರು ಪ್ಲ್ಯಾನ್ ಮಾಡಿ ಅದೇ ತುಪ್ಪವನ್ನ ಮತ್ತೆ ಟಿಟಿಡಿಗೆ ಕಳುಹಿಸಿದ್ದಾರೆ. ಅದು ಹೇಗಪ್ಪ ಅಂದ್ರೆ ಟಿಟಿಡಿಯಿಂದ ವಾಪಸ್ ಕಳುಹಿಸಿದ್ದ ಕಲಬೆರಕೆ ತುಪ್ಪದ ಕಂಟೇನರ್ಗಳನ್ನು ಒಳಗೊಂಡ ಟ್ಯಾಂಕರ್ಗಳು ಭೋಲೆ ಬಾಬಾ ಡೇರಿ ಬದಲಾಗಿ ನೇರವಾಗಿ ವೈಷ್ಣವಿ ಡೇರಿ ಸ್ಥಾವರಕ್ಕೆ ಸಮೀಪವಿರುವ ಸ್ಥಳೀಯ ಕಲ್ಲುಗಣಿಗಾರಿಕೆ ಘಟಕಕ್ಕೆ ತಲುಪಿಸಲಾಗಿದೆ. ಅದಾದ ಬಳಿಕ ವೈಷ್ಣವಿ ಡೇರಿಯು ಟ್ರಕ್ಗಳ ಮೇಲಿನ ಲೇಬಲ್ಗಳನ್ನು ಬದಲಾಯಿಸಿ ಅದೇ ತುಪ್ಪದ ಗುಣಮಟ್ಟವನ್ನು ಸ್ವಲ್ಪ ಜಾಸ್ತಿ ಮಾಡಿ 2024ರಲ್ಲಿ ತಿರುಪತಿಗೆ ಹಿಂತಿರುಗಿಸಿದೆ. ಸಿಬಿಐ ಪ್ರಕಾರ ತಿರುಪತಿಯಲ್ಲಿ ಭಕ್ತಾದಿಗಳಿಗೆ ನೀಡಲಾಗುವ ಲಡ್ಡು ಪ್ರಸಾದಗಳ ತಯಾರಿಕೆಯಲ್ಲಿ ಅದೇ ತುಪ್ಪವನ್ನು ಬಳಸಲಾಗಿದೆ. ತಿರುಪತಿ ತಿಮ್ಮಪ್ಪನಿಗೆ ಕೋಟಿ ಕೋಟಿ ಭಕ್ತರಿದ್ದಾರೆ.. ತಿರುಪತಿ ಲಡ್ಡು ಪ್ರಸಾದಕ್ಕೆ ದಿನಗಟ್ಟಲೇ ಕಾಯುತ್ತಾರೆ. ಹೀಗೆಲ್ಲಾ ಇರುವಾಗ ಕೋಟಿ ಕೋಟಿ ಭಕ್ತರ ಭಕ್ತಿಗೆ ಮೋಸ ಮಾಡಿ ಪ್ರಾಣಿಯ ಕೊಬ್ಬಿನ ಲಡ್ಡು ಪ್ರಸಾದ ತಿನ್ನಿಸಿದ್ದು ನಿಜಕ್ಕೂ ಘೋರ ಪಾಪ.. ಇದ್ದಕ್ಕೆ ಪೊಲೀಸ್ ಅಧಿಕಾರಿಗಳ ಜೊತೆ ತಿರುಪತಿ ತಿಮ್ಮಪ್ಪನ್ನೂ ತಕ್ಕ ಶಾಸ್ತಿ ಮಾಡಬೇಕಿದೆ.

ನೋಡಿರಿ

