ಪರಪ್ಪನ ಅಗ್ರಹಾರವೇ ಕೈದಿಗಳಿಗೆ ಹೊಸ ರೆಸಾರ್ಟ್! – ಕೈ ಸರ್ಕಾರದ ವಿರುದ್ಧ ವಿಡಿಯೋ ರಿಲೀಸ್ ಮಾಡಿದ ಬಿಜೆಪಿ

ಪರಪ್ಪನ ಅಗ್ರಹಾರ ಜೈಲು ಅನ್ನೋದು ಐಷಾರಾಮಿ ಸೌಲಭ್ಯಗಳ ತಾಣವಾಗಿದೆ. ಇಲ್ಲಿನ ಹೈಫೈ ಲೈಫ್‌ನ ವಿಡಿಯೋಗಳು ದಿನಕ್ಕೊಂದರಂತೆ ರಿವೀಲ್ ಆಗುತ್ತಿವೆ. ಅಷ್ಟೇ ಅಲ್ಲದೆ ಜೈಲಿನ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಇದೀಗ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ವ್ಯಂಗ್ಯವಾದ ವಿಡಿಯೋ ರಿಲೀಸ್ ಮಾಡಿದೆ. ಇದು ಜೈಲಾಧಿಕಾರಿಗಳ ಹೊಣೆಗಾರಿಕೆಯನ್ನ ಪ್ರಶ್ನಿಸುವಂತಿದೆ.
ಇದನ್ನೂ ಓದಿ: ಜೆಡಿಎಸ್ ಕೋರ್ ಕಮಿಟಿ ಸ್ಥಾನದಿಂದ ಜಿಟಿ ದೇವೇಗೌಡ ಔಟ್! – HDK ವಿರುದ್ಧ ಕಿಡಿ ಕಾರಿದ ಜಿಟಿಡಿ
ಪರಪ್ಪನ ಅಗ್ರಹಾರದಲ್ಲಿ ನೀಡುತ್ತಿರುವ ಸೌಲಭ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೆ ಅಸ್ತ್ರವಾಗಿ ಬಳಿಕೊಂಡ ಬಿಜೆಪಿ ತನ್ನ ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ ನಿಮ್ಮ ನಿತ್ಯದ ಜಂಜಾಟದಿಂದ ಒಂದು ಸುಂದರ ವಿರಾಮ ಕಳೆಯಲು ಬನ್ನಿ ಪರಪ್ಪನ ಅಗ್ರಹಾರ ರೆಸಾರ್ಟ್‌ಗೆ ಎಂದು ಜಾಹೀರಾತು ನೀಡುವಂತೆ ಇರುವ ವಿಡಿಯೋವನ್ನ ಶೇರ್ ಮಾಡಿ ಕಾಂಗ್ರೆಸ್ ಆಡಳಿತವನ್ನು ವ್ಯಂಗ್ಯವಾಗಿ ಟೀಕಿಸಿದೆ. ಕಾಂಗ್ರೆಸ್ 420 ಕೋಡ್ ಬಳಿಸಿ ಪರಪ್ಪನ ಅಗ್ರಹಾರದಲ್ಲಿ ರಾಜಾತೀಥ್ಯಕ್ಕೆ ವಿಷೇಶ ರಿಯಾಯಿತಿ ಪಡೆಯಿರಿ ಎಂಬ ಟ್ಯಾಗ್‌ಲೈನ್ ಕೊಟ್ಟು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಕೈದಿಗಳಿಗೆ ರಾಜತಿಥ್ಯ ಸೌಲಭ್ಯಗಳು, ಮೊಬೈಲ್ ಫೋನ್ ಸೌಲಭ್ಯ ಹಾಗೂ ಮದ್ಯಕ್ಕೆ ಅವಕಾಶ ಹೀಗೆ ಎಲ್ಲವೂ ಒಂದೇ ಸೂರಿನಡಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲ ನಿಮ್ಮ ವೆಕೇಷನ್ ಎಂಜಾಯ್ ಮಾಡಲು ನೀವು ಪರಪ್ಪನ ಅಗ್ರಹಾರಕ್ಕೆ ಬನ್ನಿ ಎಂದು ಆಹ್ವಾನಿಸಲಾಗಿದೆ.

ನೋಡಿರಿ

