ಅಶ್ವಿನಿ ಗ್ಯಾಂಗ್ Target ಗಿಲ್ಲಿ, ರಕ್ಷಿತಾ! – ಗೆಲ್ತಾರೆ ಅನ್ನೋ ಭಯಕ್ಕೇ ಕುಗ್ಗಿಸೋದಾ?
ವಾರಕ್ಕೊಬ್ಬರ ಬಣ್ಣ ಬಯಲಾಗ್ತಿದ್ಯಾ?

ಗಿಲ್ಲಿನಟ, ಹಾಗೂ ರಕ್ಷಿತಾ ಶೆಟ್ಟಿ.. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಹೈಲೈಟ್ ಆಗೋದಿಕ್ಕಿಂತ ಜಾಸ್ತಿ ಟಾರ್ಗೆಟ್ ಆಗ್ತಿದ್ದಾರೆ. ಒಂದೊಂದು ವಾರ ಒಬ್ಬೊಬ್ಬರು ಸರದಿಯಲ್ಲಿ ಇವರಿಬ್ಬರನ್ನ ಟಾರ್ಗೆಟ್ ಮಾಡ್ತಿರೋದಂತೂ ಸುಳ್ಳಲ್ಲ. ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿನಟ, ರಕ್ಷಿತಾ ಶೆಟ್ಟಿಯನ್ನ ಯಾರ್ಯಾರು ಟಾರ್ಗೆಟ್ ಮಾಡ್ತಿರೋದು? ಯಾವ ಕಾರಣಕ್ಕೆ ಇವರಿಬ್ಬರನ್ನ ಟಾರ್ಗೆಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೈಫೈ ಸೌಲಭ್ಯ ಕೇಸ್! – ಸೆಂಟ್ರಲ್ ಜೈಲಿಗೆ ಹೊಸ ಮುಖ್ಯ ಅಧೀಕ್ಷರ ನೇಮಕ
ಬಿಗ್‌ಬಾಸ್ ಶೋ ವ್ಯಕ್ತಿತ್ವದ ಆಟ.. ಇಲ್ಲಿ ಆಟ ಗೆಲ್ಲೋದ್ರ ಜೊತೆಗೆ ಸ್ಪರ್ಧಿಗಳು ದೊಡ್ಮನೆಯಲ್ಲಿ ಹೇಗಿರ್ತಾರೆ ಅನ್ನೋದು ಕೂಡ ಇಂಪಾರ್ಟೆಂಟ್ ಆಗಿರುತ್ತೆ. ಕೆಲವರು ಪಾಸಿಟಿವ್ ಆಗಿ ಹೈಲೈಟ್ ಆದ್ರೆ, ಇನ್ನೂ ಕೆಲವರು ನೆಗೆಟಿವ್ ಶೇಡ್‌ನಿಂದಲೇ ಕಾಣಿಸಿಕೊಳ್ತಾರೆ. ಕಿರುಚಾಟಿ, ಕೆಲವರನ್ನ ಟಾರ್ಗೆಟ್ ಮಾಡಿ ವೀಕ್ಷಕರ ಅಟೆನ್ಷನ್ ಗ್ರ್ಯಾಬ್ ಮಾಡ್ತಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿಯನ್ನ ಟಾರ್ಗೆಟ್ ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಬಿಗ್‌ಬಾಸ್ ಮನೆಯಲ್ಲಿ ಇವರಿಬ್ಬರನ್ನ ಆರು ಮಂದಿ ಟಾರ್ಗೆಟ್ ಮಾಡ್ತಿದ್ದಾರೆ. ಅವರ ವ್ಯಕ್ತಿತ್ವ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿ, ಕೆಣಕುತ್ತಿದ್ದಾರೆ ಅಶ್ವಿನಿ ಆಂಡ್ ಗ್ಯಾಂಗ್.
ಗಿಲ್ಲಿ ಹಾಗೂ ರಕ್ಷಿತಾ ದೊಡ್ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ಸ್ ಆಗಿದ್ದಾರೆ. ಹೀಗಾಗೇ ದೊಡ್ಮನೆಯಲ್ಲಿ ಇವರಿಬ್ಬರು ಟಾರ್ಗೆಟ್ ಆಗಿದ್ದಾರೆ. ಇದೀಗ ಅಶ್ವಿನಿ ಟೀಮ್ ದೊಡ್ಡದಾಗ್ತಿದೆ. ಆರಂಭದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ರಕ್ಷಿತಾ ಹಾಗೂ ಗಿಲ್ಲಿಯನ್ನ ಟಾರ್ಗೆಟ್ ಮಾಡಿದ್ರು. ಸುದೀಪ್ ಕ್ಲಾಸ್ ತೆಗೆದುಕೊಂಡ್ಮೇಲೆ ಜಾಹ್ನವಿ ಅಶ್ವಿನಿಯಿಂದ ಗ್ಯಾಪ್ ಮೈಂಟೈನ್ ಮಾಡ್ತಿದ್ದಾರೆ. ಆದ್ರೀಗ ಅಶ್ವಿನಿ ಗ್ಯಾಂಗ್ ವಾರ ಕಳಿತಾ ಇದ್ದಂತೆ ದೊಡ್ಡದಾಗ್ತಿದೆ.. ಅಶ್ವಿನಿ ಗೌಡ ಜೊತೆ ಕ್ರಾಕ್ರೋಚ್ ಸುಧಿ, ರಿಷಾ, ರಾಶಿಕಾ, ಧ್ರುವಂತ್,ಚಂದ್ರಪ್ರಭ ಒಂದಲ್ಲ ಒಂದು ಕಾರಣಕ್ಕೆ ಟಾರ್ಗೆಟ್ ಮಾಡ್ತಾ ಬಂದಿದ್ದಾರೆ.
ಹೌದು.. ಅಶ್ವಿನಿ ಗೌಡ ಆರಂಭದಿಂದಲೇ ಗಿಲ್ಲಿ, ರಕ್ಷಿತಾ ಜೊತೆ ಕಿರಿಕ್ ಮಾಡಿಕೊಂಡು ಬಂದಿದ್ದಾರೆ.. ಈ ಮುಂಚೆ ಕೂಡ ಸರಿಯೋ, ತಪ್ಪೋ ಕಂಟೆಂಟ್ ಕೊಡ್ತಾ ಇರ್ಬೇಕು ಅಂತಾ ಜಾಹ್ನವಿ ಬಳಿ ಹೇಳಿದ್ರು. ಹೀಗಾಗೇ ಗಿಲ್ಲಿ ಜೊತೆ ಬೇಕಂತಲೇ ಜಗಳಕ್ಕೆ ಬರೋದು, ರಕ್ಷಿತಾ ಮೇಲೆ ರೇಗೋದು ಮಾಡ್ತಾ ಬಂದಿದ್ದಾರೆ. ಇದಕ್ಕೆ ಉಳಿದವರು ಕೂಡ ಸಾಥ್ ನೀಡ್ತಿದ್ದಾರೆ. ಆರಂಭದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಗೆಜ್ಜೆ ಸದ್ದು ಮಾಡಿ, ರಕ್ಷಿತಾ ಶೆಟ್ಟಿ ಮೇಲೆ ಅಪವಾದ ಹಾಕಿದ್ರು. ಈ ವೇಳೆ ಗಿಲ್ಲಿ ರಕ್ಷಿತಾ ಪರ ಸ್ಟ್ಯಾಂಡ್ ತೆಗೆದುಕೊಂಡಿದ್ರು. ನೀವೇ ಮಾಡಿದ್ದು ಒಪ್ಪಿಕೊಳ್ಳಿ ಅಂದಿದ್ರು. ಆದ್ರೆ ಇವರಿಬ್ಬರು ಒಪ್ಪಿಕೊಂಡಿರ್ಲಿಲ್ಲ. ಹೀಗಾಗೇ ವಿಕೆಂಡ್‌ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಇಬ್ಬರಿಗೂ ಸರಿಯಾಗೇ ವಾರ್ನ್ ಮಾಡಿದ್ರು.. ಅಷ್ಟೇ ಅಲ್ಲ, ರಕ್ಷಿತಾ ಪರ ಸ್ಟ್ಯಾಂಡ್ ತೆಗೆದುಕೊಂಡ ಗಿಲ್ಲಿನಟನಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತು. ಇದ್ರಿಂದಾಗಿ ಅಶ್ವಿನಿ ಗ್ಯಾಂಗ್ ಸುಮ್ಮನಾಗ್ತಾರೆ ಅಂತಾ ಅಂದ್ಕೊಂಡ್ರೆ, ಕಿಚ್ಚನ ಚಪ್ಪಾಳೆ ವಿಚಾರ ಇಟ್ಕೊಂಡು ಗಿಲ್ಲಿನ ಟಾರ್ಗೆಟ್ ಮಾಡಿದ್ರು. ಆದ್ರೆ ಗಿಲ್ಲಿ ತಮಾಷೆಯಿಂದಲೇ ಟಾಂಗ್ ಕೊಡ್ತಾ ಬಂದಿದ್ದಾರೆ. ಅದಾದ ಮೇಲೆ ರಕ್ಷಿತಾ ಚಪ್ಪಲಿ ತೋರ್ಸಿ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎಂದು ಅಶ್ವಿನಿ ಗೌಡ ಆರೋಪಿಸಿದ್ರು. ಅಶ್ವಿನಿ ಗೌಡ ಸುಳ್ಳು ಆರೋಪ ಮಾಡ್ತಿದ್ದಾರೆ ಅಂತಾ ಗೊತ್ತಿದ್ರೂ ಸಹ ಸ್ಪರ್ಧಿಗಳು ರಕ್ಷಿತಾ ಪರ ಸ್ಟ್ಯಾಂಡ್ ತೆಗೆದುಕೊಳ್ಳೋದು ಬಿಟ್ಟು, ಆಕೆ ಮೇಲೆಯೇ ಕೂಗಾಡಿದ್ದಾರೆ.. ಆದ್ರೆ ರಕ್ಷಿತಾ, ಯಾರು ಎಷ್ಟೇ ಕುಗ್ಗಿಸೋಕೆ ಟ್ರೈ ಮಾಡಿದ್ರೂ ತನ್ನ ಪರ ಸ್ಟ್ಯಾಂಡ್ ತೆಗೆದುಕೊಂಡು ಬಂದಿದ್ದಾರೆ ಕಳೆದ ವೀಕೆಂಡ್‌ನಲ್ಲಿ ಈ ಬಗ್ಗೆ ಸುದೀಪ್ ವಿಟಿ ಪ್ಲೇ ಮಾಡಿ ಜನತೆಗೆ ಕ್ಲಾರಿಟಿ ಕೊಟ್ಟಿದ್ದು, ಮಾತ್ರವಲ್ಲದೇ ಅಶ್ವಿನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ರು..
ಇನ್ನು ರಾಶಿಕಾ ಕೂಡ ರಕ್ಷಿತಾ, ಗಿಲ್ಲಿ ಮೇಲೆ ಅನಾವಶ್ಯಕವಾಗಿ ಕೂಗಾಡ್ತಿದ್ದಾರೆ. ಕಾಕ್ರೋಚ್ ಸುಧಿ ಕೂಡ ರಕ್ಷಿತಾ, ಗಿಲ್ಲಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಬಂದಿದ್ದಾರೆ. ರಾಶಿಕಾ ಅಂತೂ ಕಳೆದ ವಾರ ಗಿಲ್ಲಿಯನ್ನ ಟ್ರಿಗರ್ ಮಾಡಲು ಹೋಗಿ, ಆಕೆಯೇ ಟ್ರಿಗರ್ ಆಗಿದ್ರು. ಗಿಲ್ಲಿ ಮೇಲೆ ಕೈ ಮಾಡಿದ್ರು. ಇನ್ನು ಚಂದ್ರಪ್ರಭ ಗಿಲ್ಲಿಯನ್ನ ಟಾರ್ಗೆಟ್ ಮಾಡಲು ಹೋಗಿ ಇನ್ನೇನೋ ಆಯ್ತು.. ಬಿಗ್‌ಬಾಸ್ ಮನೆಯಿಂದ ಹೊರಗೆ ಬರುವಂತೆ ಆಯ್ತು.. ಇವೆಲ್ಲದ್ರ ಮಧ್ಯೆ ಧ್ರುವಂತ್ ಕೂಡ ಈಗ ಇವರಿಬ್ಬರ ಮೇಲೆ ವಾಯ್ನ್ ರೈಸ್ ಮಾಡ್ತಿದ್ದಾರೆ.. ರಕ್ಷಿತಾ ಭಾಷೆ ಬಗ್ಗೆ ಗಿಲ್ಲಿ ಕಾಮಿಡಿ ಬಗ್ಗೆ ವ್ಯಂಗ್ಯ ಮಾಡ್ತಿದ್ದಾರೆ. ಇದೀಗ ವೀಕ್ಷಕರು ಮಾತ್ರ ಅಶ್ವಿನಿ ಆಂಡ್ ಗ್ಯಾಂಗ್ ವಿರುದ್ಧ ಅಸಮಧಾನ ಹೊರ ಹಾಕ್ತಿದ್ದಾರೆ.
ಗಿಲ್ಲಿ, ರಕ್ಷಿತಾ ಸ್ಟ್ರಾಂಗ್ ಸ್ಪರ್ಧಿಗಳು.. ಅವರನ್ನ ಕೆಣಕಿದ್ರೆ, ಜಗಳ ಮಾಡಿದ್ರೆ, ಕುಗ್ಗಿಸಿದ್ರೆ ಇನ್ನೂ ಒಂದಷ್ಟು ದಿನ ದೊಡ್ಮನೆಯಲ್ಲಿ ಇರ್ಬೋದು ಅಂತಾ ಪ್ಲ್ಯಾನ್ ಮಾಡಿಕೊಂಡು ಬಂದಂತೆ ಕಾಣ್ತಿದೆ. ಕಂಟೆಂಟ್ ಕಂಟೆಂಟ್ ಅಂತಾ ಹೇಳ್ಕೊಂಡು ಗಿಲ್ಲಿ, ರಕ್ಷಿತಾಳನ್ನ ಟಾರ್ಗೆಟ್ ಮಾಡಿ, ತಮ್ಮ ವ್ಯಕ್ತಿತ್ವ ಎಂತದ್ದು ಅನ್ನೋದನ್ನ ಅನಾವರಣ ಮಾಡ್ತಿದ್ದಾರೆ. ಸುದೀಪ್ ಕ್ಲಾಸ್ ತೆಗೆದುಕೊಂಡ್ರೂ ಇವರಿಗೆ ಬುದ್ದಿ ಬರೋತರ ಕಾಣಿಸ್ತಿಲ್ಲ. ರಕ್ಷಿತಾ, ಗಿಲ್ಲಿ ಗೆಲ್ತಾರೆ ಅನ್ನೋ ಭಯಕ್ಕೆ ಇವರನ್ನ ಕುಗ್ಗಿಸೋದಿಕ್ಕೆ ನೋಡ್ತಿದ್ದಾರೆ. ಯಾರು ಏನೇ ಸ್ಟ್ರಾಟರ್ಜಿ ಬಳಸಿದ್ರೂ ನಾವು ಸಪೋರ್ಟ್ ಮಾಡ್ತಿರೋದು ಮಾತ್ರ ಗಿಲ್ಲಿ, ರಕ್ಷಿತಾಗೆ ಅಂತಾ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು. ಈ ಬಗ್ಗೆ ನಿಮ್ಗೆ ಏನ್ ಅನ್ನಿಸ್ತಿದೆ.

ನೋಡಿರಿ

