ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೈಫೈ ಸೌಲಭ್ಯ ಕೇಸ್! – ಸೆಂಟ್ರಲ್ ಜೈಲಿಗೆ ಹೊಸ ಮುಖ್ಯ ಅಧೀಕ್ಷರ ನೇಮಕ

ಪರಪ್ಪನ ಅಗ್ರಹಾರ ಜೈಲು ಅನ್ನೋದು ಐಷಾರಾಮಿ ಸೌಲಭ್ಯಗಳ ತಾಣ ಆಗಿದೆ. ಜೈಲಿನಲ್ಲಿರುವ ಕೈದಿಗಳು ಬಿಂದಾಸ್ ಆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ. ಈಗಾಗಲೇ ಜೈಲಿನ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಮುಖ್ಯ ಅಧೀಕ್ಷರಾಗಿ ಅಂಶುಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ದೆಹಲಿ ಸ್ಫೋ*ಟ ನಂತ್ರ ಫುಲ್ ಅಲರ್ಟ್ – ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದ ಅಮಿತ್ ಶಾ
ಜೈಲಿನಲ್ಲಿ ಕೈದಿಗಳು ಐಶರಾಮಿ ಜೀವನ ನಡೆಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಾರಾಗೃಹ ಇಲಾಖೆ ಎಡಿಜಿಪಿ ಬಿ. ದಯಾನಂದ್ ಅನುಪಸ್ಥಿತಿಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿದ್ದರು. ವೈರಲ್ ಆಗಿರುವ ಫೋಟೋ, ವಿಡಿಯೋಗಳನ್ನೇ ತೋರಿಸಿ ಜೈಲು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರನ್ನ ಸಸ್ಪೆಂಡ್ ಮಾಡಲಾಗಿದೆ. ಕಾರಾಗೃಹ ಮುಖ್ಯ ಅಧೀಕ್ಷಕ ಸುರೇಶ್ರನ್ನ ತಕ್ಷಣಕ್ಕೆ ಎತ್ತಂಗಡಿ ಮಾಡಿರುವ ಸರ್ಕಾರ, ಕಾರಾಗೃಹ ಸೂಪರಿಂಟೆಂಡೆಂಟ್ ಇಮಾಮ್ಸಾಬ್ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿಯನ್ನ ಸಸ್ಪೆಂಡ್ ಮಾಡಲಾಗಿದೆ.
ಮುಖ್ಯ ಅಧೀಕ್ಷಕ ಸುರೇಶ್ರನ್ನ ವರ್ಗಾವಣೆ ಮಾಡಿರುವ ಬೆನ್ನಲ್ಲೇ ಸರ್ಕಾರ, ಆ ಜಾಗಕ್ಕೆ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿತ್ತು. ಇದೀಗ ಹೊಸ ಮುಖ್ಯ ಅಧೀಕ್ಷರ ನೇಮಕವಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಂಶುಕುಮಾರ್ರನ್ನು ನೇಮಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ನೋಡಿರಿ

