ಸ್ಫೋ*ಟದ ಘೋರ ದೃಶ್ಯ ಕಂಡು ದೆಹಲಿ ತತ್ತರ – ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ

ಸ್ಫೋ*ಟದ ಘೋರ ದೃಶ್ಯ ಕಂಡು ದೆಹಲಿ ತತ್ತರ – ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ

ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಹತ್ತಿರ ಭಾನುವಾರ ಸಂಜೆ ಸಂಭವಿಸಿದ ಭಾರೀ ಸ್ಫೋ*ಟದಲ್ಲಿ 10ಮಂದಿ ಮೃತಪಟ್ಟಿದ್ದಾರೆ.  24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಯಾನಕ ಕೃತ್ಯಕ್ಕೆ ಬಲಿಯಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೆಂಪುಕೋಟೆ ಬಳಿ ಭಯಾನಕ ಸ್ಫೋಟ– ಉಗ್ರರ ಅಟ್ಟಹಾಸಕ್ಕೆ10 ಮಂದಿ ಬಲಿ

ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಧೀರ್ಘ ಸಂತಾಪ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಗೆ ಒಳಗಾದ ಸಂತ್ರಸ್ಥರಿಗೆ ಆಡಳಿತ ವರ್ಗ ನೆರವು ನೀಡುತ್ತದೆ ಎಂದು ಹಂಚಿಕೊಂಡಿದ್ದಾರೆ.

ಈ ಘಟನೆ ಬಳಿಕ ಗೃಹ ಸಚಿವ ಅಮಿತ್ ಶಾ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ್ದಾರೆ. ಸ್ಫೋ*ಟದ ಸ್ವರೂಪ ಹಾಗೂ ಹಿನ್ನಲೆಯಲ್ಲಿ ನಡೆಯುತ್ತಿರುವ ತನಿಖೆಯ ಪ್ರಗತಿಯನ್ನು ಅವರು ಪರಿಶೀಲಿಸಿದ್ದು, ಸಂತ್ರಸ್ಥರಿಗೆ ತಕ್ಷಣದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೆಹಲಿಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗೃಹ ಸಚಿವಾಲಯ ಎಲ್ಲಡೆ ಹೈ ಅಲರ್ಟ್​ ಘೋಷಿಸಿದೆ. ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. 15ಕ್ಕೂ ಹೆಚ್ಚು ವಾಹನಗಳು ಭಸ್ಮವಾಗಿವೆ. ಆಟೋ ಹಾಗೂ ಕಾರ್​ ಸೇರಿ 15 ವಾಹನಗಳು ಭಸ್ಮಗೊಂಡಿವೆ. ಇನ್ನು ಕೆಲವು ವಾಹನಗಳು ಜಖಂಗೊಂಡಿವೆ.  24ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

Sulekha