ಕೆಂಪುಕೋಟೆ ಬಳಿ ಭಯಾನಕ ಸ್ಫೋ*ಟ– ಉಗ್ರರ ಅಟ್ಟಹಾಸಕ್ಕೆ10 ಮಂದಿ ಬಲಿ

ಸೋಮವಾರದ ಇಳಿಸಂಜೆ ಹೊತ್ತಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಉಗ್ರರ ಅಟ್ಟಹಾಸಕ್ಕೆ 10 ಮಂದಿ ಬಲಿಯಾಗಿದ್ದಾರೆ. ಇದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಭದ್ರತಾ ಪಡೆ ಭಯೋತ್ಪಾದಕರ ನಡುವೆ ಫೈರಿಂಗ್ – ನಾಲ್ವರು ಕುಕಿ ಉಗ್ರರು ಫಿನಿಷ್
ಸೋಮವಾರ (ನವೆಂಬರ್ 10)ರಂದು ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಸ್ಫೋಟ ಸಂಭವಿಸಿದೆ. ಇದುವರೆಗೆ 10 ಜನರು ಸಾವನ್ನಪ್ಪಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸ್ಫೋಟವು ಇಕೋ ವ್ಯಾನ್ನಲ್ಲಿ ಹುಟ್ಟಿಕೊಂಡಿದ್ದು ಎನ್ನಲಾಗುತ್ತಿದೆ. ಆದರೆ, ಹುಂಡೈ ಐಟ್ವೆಂಟಿ ಕಾರ್ನಲ್ಲಿ ಬಂದವರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕ, ಎನ್ಐಎ ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳದಲ್ಲಿದ್ದು, ಸಂಪೂರ್ಣ ತನಿಖೆ ನಡೆಸುತ್ತಿವೆ. ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪೊಲೀಸರು ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಮಾಡಿದ್ದಾರೆ. ಈ ದಾಳಿಯನ್ನ ಭಯೋತ್ಪಾದಕ ದಾಳಿ ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ.
ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಬೆಳಿಗ್ಗೆಯಷ್ಟೇ, ಫರಿದಾಬಾದ್ನ ಬಾರಿ ಮಾತಾದಲ್ಲಿ ಆರ್ಡಿಎಕ್ಸ್ ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ವರದಿಗಳು ಕೇಳಿಬಂದಿವೆ. ಗುಜರಾತ್ನಿಂದ ಉತ್ತರ ಪ್ರದೇಶದವರೆಗಿನ ಪೊಲೀಸರು ಹೆಚ್ಚಿನ ಸಂಖ್ಯೆಯ ಶಂಕಿತರನ್ನು ಬಂಧಿಸಿದ್ದಾರೆ. ದೆಹಲಿ ಕೆಂಪು ಕೋಟೆ ಸ್ಫೋಟದಲ್ಲಿ ಸ್ಟಿಕಿ ಬಾಂಬ್ ಬಳಕೆಯ ಶಂಕೆ ವ್ಯಕ್ತವಾಗುತ್ತಿದೆ. ಇದು ಚಿಕ್ಕದಾದರೂ ಅತ್ಯಂತ ಅಪಾಯಕಾರಿ ಸ್ಫೋಟಕ ಸಾಧನವಾಗಿದ್ದು, ಇದನ್ನು ಮ್ಯಾಗ್ನೆಟ್ ಅಥವಾ ಗಮ್ ಬಳಸಿ ವಾಹನ, ಬೈಕ್ ಅಥವಾ ಲೋಹದ ಮೇಲ್ಮೈಗೆ ಸುಲಭವಾಗಿ ಜೋಡಿಸಬಹುದು. ಇದನ್ನು ರಿಮೋಟ್ ಕಂಟ್ರೋಲ್ ಅಥವಾ ಟೈಮರ್ ಮೂಲಕ ಸ್ಫೋಟಿಸಲಾಗುತ್ತದೆ. ಅಂತಹ ಬಾಂಬ್ಗಳು ಸಾಮಾನ್ಯ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಪತ್ತೆಹಚ್ಚುವುದು ಕಷ್ಟ.

ನೋಡಿರಿ

