ಕೆಟ್ಟ ಕಮೆಂಟ್ ಮಾಡಿದ ಧ್ರುವಂತ್‌ಗೆ ಗ್ರಹಚಾರ ಬಿಡಿಸಿದ ಕಾವ್ಯ, ರಾಶಿಕಾ!

ಬಿಗ್ ಬಾಸ್ ಕನ್ನಡ ಸೀಸನ್ 12 ಬರೀ ಕಿತ್ತಾಟದಿಂದಲೇ ಸದ್ದು ಮಾಡ್ತಿದೆ. ದೊಡ್ಮನೆಯಲ್ಲಿ ಹೈಲೈಟ್ ಆಗ್ಬೇಕು. ಇನ್ನೊಂದಷ್ಟು ವಾರ ಉಳಿಬೇಕು ಅಂತಾ ಒಬ್ಬರನ್ನ ಟಾರ್ಗೆಟ್ ಮಾಡಿ, ಕೂಗಾಡೋದು ಕಾಮನ್ ಆಗಿದೆ. ರಕ್ಷಿತಾ, ಗಿಲ್ಲಿಯನ್ನ ಟಾರ್ಗೆಟ್ ಮಾಡಿದ ಧ್ರುವಂತ್ ಈಗ ತನ್ನದೇ ಗ್ಯಾಂಗ್‌ನ ರಾಶಿಕಾಳನ್ನ ಟಾರ್ಗೆಟ್ ಮಾಡಿದ್ದಾರೆ. ಏನೋ ಮಾಡಲು ಹೋಗಿ ಈಗ ಅವರೇ ಸಿಕ್ಕಾಕ್ಕೊಂಡಿದ್ದಾರೆ.
ಇದನ್ನೂ ಓದಿ: ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಿದ್ಧತೆ – ಮೊದಲ ಬಾರಿಗೆ 5 ದಿನ ನಡೆಯಲಿದೆ ಜಾತ್ರೆ
ಹೌದು.. ಧ್ರುವಂತ್ ರಾಶಿಕಾ ಬಗ್ಗೆ ಕಾವ್ಯ ಜೊತೆ ಕೆಟ್ಟದಾಗಿ ಮಾತನಾಡಿದ್ದಾರೆ. ಕಾವ್ಯ ಇದನ್ನ ಅಲ್ಲಿಗೆ ಬಿಡದೇ ರಾಶಿಕಾ ಬಳಿ ಹೇಳಿದ್ದಾರೆ. ಕೂಡಲೇ ರಾಶಿಕಾ ಧ್ರುವಂತ್ ಬಳಿ ಪ್ರಶ್ನೆ ಮಾಡಿದ್ದಾರೆ. ಬಳಿಕ ಕಾವ್ಯ ಇಬ್ಬರ ಮುಂದೆ ನಿಂತು, ರಾಶಿಕಾ ಅಭಿ ಹತ್ರ ಹೋದ್ರು ವರ್ಕ್ ಆಗಿಲ್ಲ. ಈಗ ಸೂರಜ್ ಹತ್ರ ಮಾತನಾಡ್ತಿದ್ದಾರೆ ಅಂತಾ ಹೇಳಿದ್ದು ಸತ್ಯ ಅಂತ ಹೇಳಿದ್ದಾರೆ. ಇದು ಜಗಳಕ್ಕೆ ಕಾರಣವಾಗಿದೆ. ಧ್ರುವಂತ್ ವಿರುದ್ಧ ರಾಶಿಕಾ ಶೆಟ್ಟಿ ಮತ್ತು ಕಾವ್ಯ ಶೈವ ಅವರು ತಿರುಗಿ ಬಿದ್ದಿದ್ದಾರೆ. ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ ಎಂದು ಧ್ರುವಂತ್ ಹೇಳಿದ್ದಾರೆ. ಆಗ ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ ಎಂದು ಕಾವ್ಯ ಅವರು ತಿರುಗೇಟು ನೀಡಿದ್ದಾರೆ.
ಮತ್ತೊಂದ್ಕಡೆ ಧ್ರುವಂತ್ ಗಿಲ್ಲಿ ಹಾಗೂ ರಕ್ಷಿತಾಳನ್ನ ಟಾರ್ಗೆಟ್ ಮಾಡಿದ್ದಾರೆ. ಗಿಲ್ಲಿ ಅವರು ಬನಿಯನ್ ಹಾಕ್ಕೊಂಡು ತಾನು ಬಡವನಾಗಿ, ಮುಖವಾಡ ಹಾಕಿಕೊಂಡು, ನನ್ನತ್ರ 100 ಕುರಿ ಇದೆ ಅಂತಾರೆ. ಇರೋರು ಹಾಗೇ ಅನ್ನಲ್ಲ. ನೀವು ಸಿರಿವಂತರು ಸರ್. ಇನ್ನು ಬಟ್ಟೆ ವಾಶ್ ಮಾಡದೇ, ಹಾಕದೇ ಕೆರಕ್ಕೊಂಡು ಪೋಟ್ರೇ ಮಾಡ್ತೀರಾ ಎಂದಿದ್ದಾರೆ.
ಇನ್ನು ರಕ್ಷಿತಾ ವಿರುದ್ಧ ಧ್ರುವಂತ್ ಮಾತನಾಡಿ, ನಾನು ಕೂಡ ಮಂಗಳೂರಿನವನು. ಎಂತ ಗೊತ್ತುಂಟ ಗಾಯ್ಸ್ ಅನ್ನೋದೆಲ್ಲ ನಾಟಕ. ಶನಿವಾರ ಮಾತ್ರ ಅವರಿಗೆ ಕನ್ನಡ ಬರಲ್ಲ. ಅದೇನಾದ್ರೂ ಜಗಳಕ್ಕೆ ನಿಂತರೆ ಯಾವುದೇ ಭಾಷೆಯ ಸಮಸ್ಯೆ ಇರಲ್ಲ. ಇದೇ ರಕ್ಷಿತಾ ಅವರ ನಾಟಕೀಯ ಫೇಕ್ ಮುಖವಾಡ ಎಂದಿದ್ದಾರೆ. ಇನ್ನು ಧ್ರುವಂತ್ ಅವರ ಈ ನಡೆಗೆ ಧೃವಂತ್ ಗೆ ಬುದ್ದಿ ಬರಲ್ಲ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.

ನೋಡಿರಿ

