ರಿಷಭ್ ಪಂತ್ Vs ಧ್ರುವ್ ಜುರೇಲ್ ವಾರ್ – ಯಾರಿಗೆ ವಿಕೆಟ್ ಕೀಪರ್ ಕೋಟಾ?
ಗಂಭೀರ್ & ಗಿಲ್ ಚಾಯ್ಸ್ ಯಾರು?

ರಿಷಭ್ ಪಂತ್ Vs ಧ್ರುವ್ ಜುರೇಲ್ ವಾರ್ – ಯಾರಿಗೆ ವಿಕೆಟ್ ಕೀಪರ್ ಕೋಟಾ?ಗಂಭೀರ್ & ಗಿಲ್ ಚಾಯ್ಸ್ ಯಾರು?

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಇನ್ನೇನು ಜಸ್ಟ್ ಫೋರ್ ಡೇಸ್ ಅಷ್ಟೇ ಬಾಕಿ. ನವೆಂಬರ್ 14 ಅಂದ್ರೆ ಇದೇ ಶುಕ್ರವಾರದಿಂದ ಫಸ್ಟ್ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಬಟ್ ಇಲ್ಲಿ ಬಿಸಿಸಿಐಗೆ ಹೊಸ ತಲೆ ಬಿಸಿ ಶುರುವಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾರನ್ನ ಪ್ಲೇಯಿಂಗ್​ 11ನಲ್ಲಿ ಆಡ್ಸೋದು ಅನ್ನೋದು. ಒಂದ್ಕಡೆ ರಿಷಭ್ ಪಂತ್ ಇನ್ನೊಂದ್ಕಡೆ ಧ್ರುವ್ ಜುರೇಲ್. ಇಬ್ಬರನ್ನೂ ಆಡಿಸಲೇಬೇಕಾದ ಒತ್ತಡನೂ ಇದೆ.

ಇದನ್ನೂ ಓದಿ : IPLನಲ್ಲಿ RO-KO ನಂ-1 ವಾರ್ – RCB, MIನಲ್ಲಿದ್ದೇ ಕೋಟಿ ಕೋಟಿ ಗಳಿಕೆ

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಸ್ಲಾಟ್​ಗಾಗಿ ಧ್ರುವ್ ಜುರೇಲ್ ಮತ್ತು ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಪೈಪೋಟಿಯಲ್ಲಿದ್ದಾರೆ. ರೀಸೆಂಟ್ ಮ್ಯಾಚ್​ಗಳಲ್ಲಿ ಇಬ್ರೂ ಕೂಡ ಟಾಪ್ ಮೋಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಸ್ಟಾಟ್ಸ್ ಕೂಡ ಅಲ್ಟಿಮೇಟ್ ಆಗಿದೆ. ಸೋ ಇಬ್ಬರನ್ನೂ ಸೆಲೆಕ್ಟ್ ಮಾಡ್ಲೇಬೇಕು ಅನ್ನೋ ಒತ್ತಡ ಇದೆ. ಹಾಗೇನಾದ್ರೂ ಇಬ್ರೂ ಅವಕಾಶ ಪಡೆದ್ರೆ ಬೇರೊಬ್ರನ್ನ ಡ್ರಾಪ್ ಮಾಡ್ಬೇಕಾಗುತ್ತೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಸುದರ್ಶನ್ ಅಥವಾ ನಿತೀಶ್ ರೆಡ್ಡಿ ಸ್ಥಾನ ಕಳೆದುಕೊಳ್ತಾರಾ?

ವಿಕೆಟ್ ಕೀಪರ್ ಕೋಟಾದಲ್ಲಿ ತಂಡಕ್ಕೆ ಸೆಲೆಕ್ಟ್ ಆಗಿರೋ ರಿಷಬ್ ಪಂತ್ ಮತ್ತು ಧ್ರುವ್ ಜುರೇಲ್ ಇಬ್ಬರನ್ನೂ ಪ್ಲೇಯಿಂಗ್ 11 ನಲ್ಲಿ ಆಡಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮಾತನಾಡಿರೋ ಮಾಜಿ  ಕ್ರಿಕೆಟಿಗ ಆಕಾಶ್ ಚೋಪ್ರಾ ನಂಬರ್ 3ನಲ್ಲಿ ಬ್ಯಾಟ್ ಬೀಸೋ ಸಾಯಿ ಸುದರ್ಶನ್ ಅಥವಾ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಬ್ಬರಲ್ಲಿ ಒಬ್ಬರನ್ನ ಡ್ರಾಪ್ ಮಾಡಿ ಪಂತ್ & ಜುರೇಲ್ ಇಬ್ಬರಿಗೂ ಚಾನ್ಸ್ ಕೊಡಿ ಅಂತಾ ಸಲಹೆ ನೀಡಿದ್ದಾರೆ. ಹಾಗೇ ಪದೇಪದೆ ಸಾಯಿ ಸುದರ್ಶನ್ ಫೇಲ್ ಆದ್ರೂ ರಾಜಿ ಮಾಡಿಕೊಳ್ಳುತ್ತೀರಾ ಹಾಗೇ ನಿತೀಶ್ ಕುಮಾರ್ ರೆಡ್ಡಿ ಅವರನ್ನು ರಾಜಿ ಮಾಡಿಕೊಳ್ಳುತ್ತೀರಾ. ನಂಬರ್ 3ನಲ್ಲಿ ಸಾಯಿ ಸುದರ್ಶನ್ ಆಡಲು ಬಿಟ್ರೂ ಕೂಡ ನಿತೀಶ್ ರೆಡ್ಡಿ ಸ್ಥಾನವನ್ನ ತ್ಯಾಗ ಮಾಡಿ ಅಲ್ಲಿ ಜುರೇಲ್​ರನ್ನ ಇರಿಸಬಹುದು. ಹಾಗೇ ನಿತೀಶ್ ನಾಲ್ಕರಿಂದ ಐದು ಓವರ್​ಗಳಷ್ಟೇ ಬೌಲ್ ಮಾಡೋದು. ಇದ್ರಿಂದ ಬೌಲಿಂಗ್ ವಿಭಾಗಕ್ಕೂ ಹೊಡೆತ ಬೀಳಲ್ಲ ಎಂದಿದ್ದಾರೆ. ಭಾರತದ ಮಾಜಿ ವೇಗಿ ವರುಣ್ ಆರನ್ ಕೂಡ ಜುರೆಲ್ ಅವರ ಫಾರ್ಮ್ ಅನ್ನು ಶ್ಲಾಘಿಸಿದ್ದು ಜುರೇಲ್ ಕೈಬಿಟ್ರೆ ತಂಡಕ್ಕೆ ಕಷ್ಟವಾಗಬಹುದು ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಜುರೇಲ್ ಪರ ಆ ಮಟ್ಟಿಗೆ ಧ್ವನಿ ಎತ್ತೋಕೆ ಕಾರಣವೂ ಇದೆ.

ಜುರೇಲ್ ಬ್ಯಾಟಿಂಗ್ ಪವರ್.. ಬ್ಯಾಕ್ ಟು ಬ್ಯಾಕ್ ಶತಕ!

ರಿಷಭ್ ಪಂತ್ ಆಬ್ಸೆನ್ಸ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿದ್ದ ಜುರೇಲ್ ಮೊದಲ ಪಂದ್ಯದಲ್ಲಿ 125 ರನ್ಸ್ ಬಾರಿಸಿದ್ರು. ಹಾಗೇ ಎರಡನೇ ಪಂದ್ಯದಲ್ಲಿ 44 ರನ್ ಹೊಡೆದಿದ್ರು. ಇತ್ತೀಚೆಗೆ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಅನ್ ಅಫಿಶಿಯಲ್ ಮ್ಯಾಚಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಮೊದಲನೇ ಇನ್ನಿಂಗ್ಸ್​ನಲ್ಲಿ 132 ರನ್​ಗಳ ಅಜೇಯ ಶತಕ ಬಾರಿಸಿದ್ದ ಜುರೇಲ್ ಎರಡನೇ ಇನ್ನಿಂಗ್ಸ್​ನಲ್ಲೂ 127 ರನ್​ಗಳ ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಅದ್ರ ಜೊತೆಗೆ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ರು. ಅದೂ ಅಲ್ದೇ ಜುರೆಲ್ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 30 ಪಂದ್ಯಗಳಲ್ಲಿ ಐದು ಶತಕಗಳೊಂದಿಗೆ ಸರಾಸರಿ 58.00 ರನ್ ಗಳಿಸಿದ್ದಾರೆ. ಭಾರತಕ್ಕಾಗಿ ಏಳು ಟೆಸ್ಟ್‌ಗಳಲ್ಲಿ  47.77 ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಅವರ ಮೊದಲ ಶತಕ ಬಾರಿಸಿದ್ರು. ಹೀಗಾಗಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಿರೋ ಜುರೇಲ್​ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಕೊಡ್ಲೇಬೇಕು ಅನ್ನೋ ಕೂಗು ಜೋರಾಗ್ತಿದೆ. ಹಾಗಂತ ರಿಷಭ್  ಪಂತ್​ರನ್ನೂ ತಂಡದಿಂದ ಕೈಬಿಡೋಕೆ ಚಾನ್ಸೇ ಇಲ್ಲ.

SENA ರಾಷ್ಟ್ರಗಳ ವಿರುದ್ಧ ಪಂತ್ ಪವರ್ ಶೋ!

ಌಕ್ಚುಲಿ ಇಲ್ಲಿ ರಿಷಭ್ ಪಂತ್ ವೈಸ್ ಕ್ಯಾಪ್ಟನ್ ಅನ್ನೋ ಕಾರಣಕ್ಕೆ ಚಾನ್ಸ್ ಕೊಡ್ಲೇಬೇಕು ಅಂತಾ ಹೇಳ್ತಿಲ್ಲ. ಸೆನಾ ರಾಷ್ಟ್ರಗಳ ವಿರುದ್ಧ ಪಂತ್ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ನೀಡಿದ್ದಾರೆ. SENA ಅಂದ್ರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೇ ಆಸ್ಟ್ರೇಲಿಯಾ ತಂಡಗಳ ವಿರುದ್ಧ. ಇದನ್ನ ಶಾರ್ಟ್ ಫಾರ್ಮ್​ ಆಗಿ ಸೆನಾ ಅಂತಾ ಕರೀತಾರೆ. ಸೋ ಸೆನಾ ದೇಶಗಳ ವಿರುದ್ಧ  41.28 ಸರಾಸರಿಯಲ್ಲಿ 2,023 ರನ್ ಗಳಿಸಿದ್ದಾರೆ.  28 ಟೆಸ್ಟ್ ಪಂದ್ಯಗಳಲ್ಲಿ 6 ಶತಕಗಳು ಮತ್ತು 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ದೇಶಗಳಲ್ಲಿ 2,000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಏಷ್ಯಾದ ವಿಕೆಟ್ ಕೀಪರ್ ಅವರು ಮತ್ತು ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಎಂಬ ದಾಖಲೆ ಇವ್ರ ಹೆಸರಲ್ಲೇ ಇದೆ. ಈ ಮೂಲಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಅದೂ ಅಲ್ದೇ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ  ಪ್ರವಾಸಿ ಬ್ಯಾಟ್ಸ್‌ಮನ್ ಒಬ್ಬರು 24 ಸಿಕ್ಸರ್‌ಗಳನ್ನು ಬಾರಿಸಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ರು. ಹಾಗೇ ಟೆಸ್ಟ್ ಮಾದರಿಯಲ್ಲೂ ಉತ್ತಮ ರೆಕಾರ್ಡ್ಸ್ ಇದೆ. 47 ಪಂದ್ಯಗಳ 82 ಇನ್ನಿಂಗ್ಸ್​ಗಳಲ್ಲಿ 3,427 ಕ್ಕೂ ಹೆಚ್ಚು ರನ್‌ಗಳು ಮತ್ತು 44.50 ಸರಾಸರಿ, ಇದರಲ್ಲಿ 8 ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಪಂತ್ ಅವ್ರ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟ್ರೆಂತ್ ಅವ್ರಲ್ಲಿದೆ. ಮಿಡಲ್ ಆರ್ಡರ್ ನಲ್ಲಿ ಯಾವುದೇ ಕ್ಷಣದಲ್ಲೂ ಪಂದ್ಯದ ದಿಕ್ಕನ್ನೇ ಬದಲಿಸೋ ಪರ್ಫಾಮೆನ್ಸ್ ಕೊಡ್ತಾರೆ. ಹೀಗಾಗಿ ಪಂತ್​ನಂತೂ ತಂಡದಿಂದ ಕೈಬಿಡೋದು ಕಷ್ಟಸಾಧ್ಯ.

ಸದ್ಯಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್​ಮನ್ ಗಿಲ್ ಮೇಲೆ ವಾಟ್ ನೆಕ್ಸ್​ಟ್ ಅನ್ನೋ ಪ್ರಶ್ನೆಯಂತೂ ಇದ್ದೇ ಇದೆ. ಪಂತ್ ಮತ್ತು ಜುರೇಲ್ ಇಬ್ಬರೂ ಫಾರ್ಮ್​ನಲ್ಲಿ ಇರೋದ್ರಿಂದ ನಿತೀಶ್ ರೆಡ್ಡಿ ಬದ್ಲಿಗೆ ಆಡ್ಸೋದು ಬೆಸ್ಟ್ ಅನ್ಸುತ್ತೆ. ಹೌದು ನಿತೀಶ್ ರೆಡ್ಡಿ ಆಲ್​ರೌಂಡರ್.. ಜುರೇಲ್​ರನ್ನ ಆಡ್ಸಿದ್ರೆ ಬ್ಯಾಟರ್​ ಆಗಿ ಮಾತ್ರ ಆಡಿಸ್ಬೇಕು. ನಿತೀಶ್ ಆಡ್ಸಿದ್ರೆ ಬೌಲ್ ಮಾಡ್ತಾರಲ್ಲ ಅನ್ನಿಸ್ಬೋದು. ಆದ್ರೆ ನಿತೀಶ್ ರೆಡ್ಡಿ ಬೌಲ್ ಮಾಡೋದೇ ನಾಲ್ಕರಿಂದ ಐದು ಓವರ್. ಹಾಗಂತ ಬ್ಯಾಟಿಂಗ್​ನಲ್ಲೂ ಇಂಪ್ರೆಸ್ಸಿವ್ ಆಗಿಲ್ಲ.

Shantha Kumari