ಮಹಾನಟಿ ಕಿರೀಟ ಗೆದ್ದ ಮಂಗಳೂರಿನ ವಂಶಿ – ಬೆಳಗಾವಿಯ ವರ್ಷಾ ಮೊದಲ ರನ್ನರ್ ಅಪ್

ಮಹಾನಟಿ ಕಿರೀಟ ಗೆದ್ದ ಮಂಗಳೂರಿನ ವಂಶಿ – ಬೆಳಗಾವಿಯ ವರ್ಷಾ ಮೊದಲ ರನ್ನರ್ ಅಪ್

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಮಹಾನಟಿ ಸೀಸನ್ – 2ನ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ವಂಶಿ ಗೆದ್ದಿದ್ದಾರೆ. ಬೆಳಗಾವಿಯ ವರ್ಷಾ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೃತವರ್ಷಿಣಿ ಖ್ಯಾತಿಯ ರಜಿನಿ – ರೀಲ್ಸ್ ಗೆಳೆಯನ ಜೊತೆ ಮದುವೆ

ಮಹಾನಟಿ ಸೀಸನ್‌ 2ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಮಂಗಳೂರಿನ ವಂಶಿ ವಿನ್ನರ್ ಆಗಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಫೈನಲ್ ನಲ್ಲಿ ಸ್ಪರ್ಧೆಯಲ್ಲಿದ್ದರು. ಐದು ಜನ ಫೈನಲಿಸ್ಟ್‌ಗಳಲ್ಲಿ ಮಂಗಳೂರಿನ ವಂಶಿ ಮಹಾನಟಿ ಸೀಸನ್‌ 2 ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಐದು ಜನ ಫೈನಲಿಸ್ಟ್‌ಗಳಲ್ಲಿ ವರ್ಷಾ ಡಿಗ್ರಜೆ ಮತ್ತು ವಂಶಿ ಮಧ್ಯೆ ಯಾರು ವಿನ್ನರ್‌ ಆಗ್ತಾರೆ ಅನ್ನೋ ಕುತೂಹಲ ಹಲವರಲ್ಲಿತ್ತು. ಫೈನಲ್‌ ಆಗಿ ಮಂಗಳೂರಿನ ವಂಶಿ ವಿನ್ನರ್‌ ಪಟ್ಟ ಗಿಟ್ಟಿಸಿಕೊಂಡಿದ್ದಾರೆ, ಬೆಳಗಾವಿಯ ವರ್ಷಾ ಡಿಗ್ರಜೆ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. ವಿನ್ನರ್‌ ವಂಶಿಗೆ ಟ್ರೋಫಿ ಜೊತೆಗೆ, ವೈಟ್‌ ಗೋಲ್ಡ್‌ ಅವರ ವತಿಯಿಂದ 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಮೊದಲ ರನ್ನರ್‌ ಅಪ್‌ ಆದ ಬೆಳಗಾವಿಯ ವರ್ಷಾ ಡಿಗ್ರಜೆ ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಸಿಕ್ಕಿದೆ.

ಟ್ರೋಫಿ ಮತ್ತು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ಸಂತಸ ಹಂಚಿಕೊಂಡ ವಂಶಿ, ತುಂಬಾ ಖುಷಿಯಾಗ್ತಿದೆ. ಬಿ ಸರೋಜಾದೇವಿ ಅಮ್ಮ ಅವರನ್ನ ನಾನು ರಿಯಲ್‌ ಆಗಿ ನೋಡಿಲ್ಲ. ಆದರೆ, ಅವರ ನಟನೆ ನೋಡಿಕೊಂಡು ನಾನು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನ್ನ ಮೇಲಿದೆ ಅಂತ ನಾನು ಅಂದುಕೊಳ್ತೀನಿ. ನಾನು ಒಳ್ಳೆ ನಟಿಯಾಗಬೇಕು ಅಂತ ಒಂದು ಕನಸು ಹೊತ್ತು ಬಂದಿದ್ದಕ್ಕೆ ಇದು ಸಣ್ಣ ಹೆಜ್ಜೆ. ಇಷ್ಟು ದಿನದ ಹಾರ್ಡ್‌ ವರ್ಕ್‌ಗೆ ಈ ಟ್ರೋಫಿ ನನ್ನ ಕೈಯಲ್ಲಿ ಬಂದಿದೆ. ನನ್ನ ಕನಸು ನನಸಾದ ದಿನವಿದು. ಜೀ ಟೀಂಗೆ ಥ್ಯಾಂಕ್ಸ್.‌ ಇಂತಹ ಒಂದು ವೇದಿಕೆಯನ್ನ ನಮ್ಮಂಥ ನಟಿಯರಿಗೆ ಕಲ್ಪಿಸಿಕೊಟ್ಟಿದ್ದಕ್ಕೆ. ಅಮ್ಮ ನಿನ್ನ ಮಗಳು ಈ ಟ್ರೋಫಿಯನ್ನ ಗೆದ್ದಿದ್ದಾಳೆ ಎಂದು ಹೇಳಿದ್ದಾರೆ.

Sulekha