ಮಳೆಗೆ ಕೊಚ್ಚಿ ಹೋಯ್ತು ಐದನೇ ಪಂದ್ಯ – ಆಸೀಸ್ ವಿರುದ್ಧ ಟಿ-20ಐ ಸರಣಿ ಗೆದ್ದ ಭಾರತ

ಟೀಂ ಇಂಡಿಯಾ ಫ್ಯಾನ್ಸ್ ಅಂತೂ ಇವತ್ತು ಸಿಕ್ಕಾಪಟ್ಟೆ ಹರ್ಟ್ ಆಗಿರ್ತಾರೆ. ಒಂದ್ಕಡೆ ಅಭಿಷೇಕ್ ಶರ್ಮಾ.. ಇನ್ನೊಂದ್ಕಡೆ ಶುಭ್ಮನ್ ಗಿಲ್.. ಯುವರಾಜ್ ಸಿಂಗ್ ಗರಡಿಯ ಈ ಹುಡುಗ್ರು ಆಸೀಸ್ ಬೌಲರ್ಗಳನ್ನ ಅಕ್ಷರಶಃ ಬೆಂಡೆತ್ತುತ್ತಾ ಇದ್ರು. 5ನೇ ಓವರ್ನಲ್ಲೇ 50 ಪ್ಲಸ್ ರನ್ಸ್.. ಲೆಫ್ಟ್ ರೈಟ್ ಕಾಂಬಿನೇಷನ್ ಸಖತ್ತಾಗೇ ವರ್ಕೌಟ್ ಆಗ್ತಿತ್ತು. ಇವತ್ತು ಗ್ಯಾರಂಟಿ ಆಸ್ಟ್ರೇಲಿಯಾ ವಾಶ್ ಔಟ್ ಆಗುತ್ತೆ ಅನ್ಕೊಂಡ್ರೆ ಮಳೆ ಬಂದು ಪಂದ್ಯನೇ ಕೊಚ್ಕೊಂಡು ಹೋಯ್ತು. ಬಟ್ ಫೈನಲಿ ಸರಣಿಯನ್ನ ಭಾರತವೇ ಗೆದ್ಕೊಂಡಿದೆ.
ಇದನ್ನೂ ಓದಿ : ಸುರೇಶ್ ರೈನಾ, ಶಿಖರ್ ಧವನ್‌ಗೆ ಇಡಿ ಬಿಸಿ – 11.4 ಕೋಟಿ ಆಸ್ತಿ ಮುಟ್ಟುಗೋಲು
ಐದು ಪಂದ್ಯಗಳ ಟಿ-20ಐ ಸರಣಿಯ ಕೊನೆ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಳೇಬೇಕು ಅನ್ನೋ ಮೈಂಡ್ಸೆಟ್ನಲ್ಲೇ ಭಾರತ ಕಣಕ್ಕಿಳಿದಿತ್ತು. ಹಾಗೇ ಈ ಪಂದ್ಯಕ್ಕೆ ಬಿಗ್ ಚೇಂಜಸ್ ಅಂತಾ ಏನೂ ಇಲ್ಲದೇ ಇದ್ರೂ ಒಂದು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಕಳೆದ ನಾಲ್ಕು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಎಡಗೈ ದಾಂಡಿಗ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ರಿಂಕು ಸಿಂಗ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳಲಾಗಿತ್ತು. ಇನ್ನು ಆಸ್ಟ್ರೇಲಿಯಾ ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ್ರು. ಹೀಗಾಗಿ ಭಾರತ ಬ್ಯಾಟಿಂಗ್ಗೆ ಬರ್ಬೇಕಾಯ್ತು. ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಇನ್ನಿಂಗ್ಸ್ ಆರಂಭಿಸಿದ್ರು. ಪವರ್ ಪ್ಲೇನಲ್ಲೇ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಶುರು ಮಾಡಿದ್ರು. ಅದ್ರಲ್ಲೂ ಗಿಲ್ ಅಂತೂ ಈ ಮ್ಯಾಚಲ್ಲಿ ತುಂಬಾನೇ ಡಿಫ್ರೆಂಟ್ ಆಗಿದ್ರು.
ಅಭಿಷೇಕ್ 2 ಕ್ಯಾಚ್ ಡ್ರಾಪ್.. ಆಮೇಲೆ ಬೌಲರ್ಸ್ ಶೇಕ್!
ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನ ಸೋತಿದ್ದ ಆಸ್ಟ್ರೇಲಿಯಾ ಪಾಲಿಗೆ ಕೊನೇ ಪಂದ್ಯ ಡು ಆರ್ ಡೈ ಆಗಿತ್ತು. ಯಾಕಂದ್ರೆ ಈ ಮ್ಯಾಚ್ ಗೆದ್ರಷ್ಟೇ ಸರಣಿ ಸಮಬಲ ಆಗ್ತಿತ್ತು. ಇಲ್ಲದೇ ಇದ್ರೆ ತವರಿನಲ್ಲೇ ಸರಣಿ ಸೋತು ಮುಖಭಂಗ ಆಗ್ತಿತ್ತು. ಹೀಗಾಗೇ ಮಸ್ಟ್ ವಿನ್ ಟಾರ್ಗೆಟ್ನಲ್ಲೇ ಕಣಕ್ಕಿಳಿದಿದ್ರು. ಟಾಸ್ ಗೆದ್ದು ಬೌಲಿಂಗ್ ಚೂಸ್ ಮಾಡಿಕೊಂಡಿದ್ರು. ಆದ್ರೆ ಭಾರತದ ಓಪನಿಂಗ್ ಬ್ಯಾಟರ್ಗಳ ಅಬ್ಬರ ನೋಡಿ ಥಂಡಾ ಹೊಡೆದಿದ್ರು. ಌಕ್ಚುಲಿ ಬ್ಯಾಟಿಂಗ್ ಶುರುಮಾಡಿದ ಭಾರತ ಫಸ್ಟ್ ಓವರ್ನಲ್ಲೇ ಅಭಿಷೇಕ್ ವಿಕೆಟ್ ಕಳ್ಕೊಬೇಕಿತ್ತು. ಆದ್ರೆ ಅಭಿಷೇಕ್ ಶರ್ಮಾ ಹೊಡೆದ ಬಾಲ್ನ ಗ್ಲೆನ್ ಮ್ಯಾಕ್ಸ್ವೆಲ್ ಡ್ರಾಪ್ ಮಾಡಿದ್ರು. ಌಂಡ್ 4ನೇ ಓವರ್ ನಲ್ಲಿ ಸೆಕೆಂಡ್ ಕ್ಯಾಚ್ ಡ್ರಾಪ್ ಆಯ್ತು. ಈ ಸಲ ನ್ ದ್ವಾರ್ಶಸ್ ಡ್ರಾಪ್ ಮಾಡಿದ್ರು. ಅಭಿಗೆ ಶಾರ್ಟ್ ಪಿಚ್ ಡೆಲಿವರಿ ಸ್ವಲ್ಪ ಸ್ಟ್ರಗಲ್ಸ್ ಇದ್ದ್ದದ್ದೇ. ಆದ್ರೆ ಎರಡು ಜೀವದಾನ ಸಿಕ್ಕಮೇಲೆ ಇಬ್ಬರು ಆಟಗಾರರು ಅಬ್ಬರ ಶುರು ಮಾಡಿದ್ರು. ಅದ್ರಲ್ಲೂ ಶುಭ್ಮನ್ ಗಿಲ್ ಅಂತೂ 3ನೇ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ್ರು. ಌಂಡ್ ಟೋಟಲ್ಲಾಗಿ 4 ಓವರ್ ಬಾರಿಸಿ 16 ರನ್ ಬಂತು ಆ ಓವರ್ನಲ್ಲಿ. ಹೀಗೆ ಅಭಿಷೇಕ್ 13 ಬಾಲಲ್ಲಿ 1 ಫೋರ್, 1 ಸಿಕ್ಸ್ ನೊಂದಿಗೆ 23 ರನ್ ಬಾರಿಸಿದ್ರೆ ಅತ್ತ ಗಿಲ್ 16 ಬಾಲಲ್ಲಿ 29 ರನ್ ಸಿಡಿಸಿ ಬಿಗ್ ಇನ್ನಿಂಗ್ಸ್ ಹಿಂಟ್ ಕೊಟ್ಟಿದ್ರು. ಬಟ್ ಬ್ಯಾಡ್ಕಲ್ 4.5 ಓವರ್ಗಳಲ್ಲಿ 52 ರನ್ ಇದ್ದಾಗ ಮಳೆ ಶುರುವಾಯ್ತು. ಌಂಡ್ ಸಂಜೆ 4.30 ಆದ್ರೂ ಮಳೆ ನಿಲ್ಲಲೇ ಇಲ್ಲ. ಕೊನೆಗೆ ಮ್ಯಾಚ್ನೇ ಕ್ಯಾನ್ಸಲ್ ಮಾಡಿ್ರು. ಹೀಗಾಗಿ ಭಾರತ ಸರಣಿಯನ್ನ 2-1 ಅಂತರದಿಂದ ಗೆದ್ದುಕೊಳ್ತು. ಏಕದಿನ ಸರಣಿ ಸೋಲಿನ ಸೇಡನ್ನ ಟಿ-20ಐನಲ್ಲಿ ತೀರಿಸಿಕೊಳ್ತು. ಬಟ್ ಮ್ಯಾಚ್ ರದ್ದಾದ್ರೂ ಅಭಿಷೇಕ್ ಶರ್ಮಾ ಅಂತೂ ದಾಖಲೆ ಬರೆದಿದ್ದಾರೆ.
ಅತೀ ವೇಗದ ಸಾವಿರ ರನ್ ವಿಶ್ವದಾಖಲೆ ಬರೆದ ಅಭಿ!
ಬೌಲರ್ಗಳ ಪಾಲಿಗೆ ಸಿಂಹಸ್ವಪ್ನವಾಗಿರೋ ಅಭಿಷೇಕ್ ವಿಶ್ವಕ್ರಿಕೆಟ್ನಲ್ಲಿ ಈಗ ಹೊಸ ದಾಖಲೆ ಬರೆದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 1000 ರನ್ ಪೂರೈಸಿದ ಬ್ಯಾಟರ್ ಎನ್ನುವ ಅಪರೂಪದ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಬಾಲ್ಗಳ ಆಧಾರದಲ್ಲಿ ಅತಿವೇಗವಾಗಿ(528 ಎಸೆತ) ಒಂದು ಸಾವಿರ ರನ್ ಪೂರೈಸಿದ ದಾಖಲೆ ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ. ಅದೂ ಕೂಡ 189 ಪ್ಲಸ್ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಲಿಸ್ಟ್ನಲ್ಲಿ ಟಿಮ್ ಡೇವಿಡ್ ಸೆಕೆಂಡ್ ಪ್ಲೇಸ್ನಲ್ಲಿದ್ದು 175 ಸ್ಟ್ರೈಕ್ ರೇಟ್ನಲ್ಲಿ 569 ಬಾಲ್ಗಳಲ್ಲಿ ಸಾವಿರ ರನ್ಸ್ ಕಂಪ್ಲೀಟ್ ಮಾಡಿದ್ದಾರೆ.
ಸದ್ಯ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಮೊದಲ ಹಾಗೇ ಕೊನೆಯ ಪಂದ್ಯಗಳು ಮಳೆಯಿಂದಾಗಿ ವಾಶ್ ಔಟ್ ಆಗಿವೆ. ಹೀಗಿದ್ರೂ ಎರಡು ಪಂದ್ಯಗಳನ್ನ ಗೆದ್ದು ಭಾರತ ಸರಣಿ ಕೈವಶ ಮಾಡಿಕೊಂಡಿದೆ. ಆದ್ರೆ ಬ್ಯಾಡ್ ಲಕ್ ಅಂದ್ರೆ ವಾಶ್ ಔಟ್ ಆಗಿರೋ ಎರಡೂ ಪಂದ್ಯಗಳೂ ಕೂಡ ಭಾರತದ ಬ್ಯಾಟಿಂಗ್ ಪರ್ಫಾಮೆನ್ಸ್ ಎಕ್ಸ್ಟ್ರಾರ್ಡಿನರಿ ಅನ್ನುವಾಗ್ಲೇ ಪಂದ್ಯ ರದ್ದಾಗಿರೋದು ಕೊಂಚ ಬೇಸರ ಮೂಡಿಸಿದೆ. ಅದ್ರಲ್ಲೂ ಐದನೇ ಮ್ಯಾಚ್ ಅಂತೂ ತುಂಬಾನೇ ಬೇಜರಾಗಿದೆ. ಬಹುಶಃ ಪಂದ್ಯ ಕಂಪ್ಲೀಟ್ ಆಗಿದ್ರೆ ಭಾರತವೇ ಗೆಲ್ಲುತ್ತಿತ್ತು ಅನ್ನೋದ್ರಲ್ಲಿ ಡೌಟೇ ಬೇಡ.

ನೋಡಿರಿ

