ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ರಿಷಬ್ ಪಂತ್ ಮುಂಬೈಗೆ ಶಿಫ್ಟ್ – ಏರ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ
ಭೀಕರ ಆ್ಯಕ್ಸಿಡೆಂಟ್ಗೊಳಗಾಗಿದ್ದ ಕ್ರಿಕೆಟಿಗ ರಿಷಬ್ ಪಂತ್ರನ್ನ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಮುಂಬೈಗೆ ಶಿಫ್ಟ್ ಮಾಡಲಾಗಿದೆ. ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್ರನ್ನ ಇಂದು ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈಗೆ ರವಾನಿಸಲಾಗಿದೆ. ರಿಷಬ್ ಪಂತ್ಗೆ ಇನ್ನೂ ಕೂಡ ಸರಿಯಾಗಿ ನಡೆಯೋಕೆ ಸಾಧ್ಯವಾಗ್ತಿಲ್ಲ. ಬಿಸಿಸಿಐನ ವೈದ್ಯರ ತಂಡವೇ ಮುಂಬೈ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಪಂತ್ಗೆ ಚಿಕಿತ್ಸೆ ನೀಡಲಿದೆ. ಅಷ್ಟೇ ಅಗತ್ಯ ಬಿದ್ದಲ್ಲಿ ರಿಷಬ್ ಪಂತ್ರನ್ನ ಇಂಗ್ಲೆಂಡ್ಗೆ ಕೂಡ ಕರೆದೊಯ್ಯಲಾಗುವುದು ಅಂತಾ ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ರಿಷಭ್ ಪಂತ್ ಎಂಟು ತಿಂಗಳು ಕ್ರಿಕೆಟ್‌ನಿಂದ ದೂರವಿರುವುದು ಅನಿವಾರ್ಯ’ – ವೈದ್ಯರ ಸೂಚನೆ
ಕಳೆದ ವಾರ ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟಿಗನ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಪಂತ್ ಬಲಗೈ ಮಣಿಕಟ್ಟು, ಪಾದ, ಕಾಲಿನ ಹೆಬ್ಬೆರಳು ಮತ್ತು ಪಂತ್ ಬೆನ್ನಿನ ಹಿಂಭಾಗಕ್ಕೆ ಗಾಯವಾಗಿದೆ.