ಅಯ್ಯೋ.. ನಾಗವಲ್ಲಿ ವೇಷ ಧರಿಸಿ ಆಫೀಸ್‌ಗೆ ಬಂದ ಯುವತಿ!

ಅಯ್ಯೋ.. ನಾಗವಲ್ಲಿ ವೇಷ ಧರಿಸಿ ಆಫೀಸ್‌ಗೆ ಬಂದ ಯುವತಿ!

ನಮ್ಮಲ್ಲಿ ಪಿತೃಪಕ್ಷ ಹೇಗೋ, ಹಾಗೇ ವಿದೇಶಗಳಲ್ಲಿ ಹ್ಯಾಲೋವೀನ್ ನ್‌ ಆಚರಣೆ ಮಾಡುತ್ತಾರೆ. ಈ ಆಚರಣೆ ದಿನದಂದು, ಅಲ್ಲಿನ ನಿವಾಸಿಗಳು ಮನೆಯನ್ನ ಸ್ಕೇರಿಹೌಸ್‌ ಹಾಗೇ ಕಾಣುವಂತೆ ಡೆಕೊರೇಷನ್‌ ಮಾಡುತ್ತಾರೆ. ಅಷ್ಟೇ ಅಲ್ಲ ಪ್ರೇತಗಳ ವೇಷ ಧರಿಸಿ, ಮನೆ ಮನೆಗೆ ಹೋಗುತ್ತಾರೆ. ಆದ್ರೀಗ ಹ್ಯಾಲೋವೀನ್ ಆಚರಣೆಯನ್ನ ಆಫೀಸ್‌ಗಳಲ್ಲೂ ಆಚರಿಸಲಾಗುತ್ತಿದೆ. ಇದೀಗ ಇಲ್ಲೊಬ್ಬಳು ಯುವತಿ ಆಫೀಸ್‌ಗೆ ನಾಗವಲ್ಲಿ ವೇಷ ಧರಿಸಿ ಬಂದಿದ್ದಾಳೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ಮತ್ತೆ ಮುಂದೂಡಿಕೆ! – ಸಿಎಂ ಮಾತಿಗೂ ಬೆಲೆ ಇಲ್ವಾ?

ಹ್ಯಾಲೋವೀನ್ ಆಚರಣೆ ದಿನ ಪ್ರೇತಗಳ ವೇಷ ಹಾಕಿಕೊಂಡು ತಿರುಗಾಡುತ್ತಾರೆ. ಭಾರತದಲ್ಲೂ ಈಗ ಈ  ಆಚರಣೆ ಶುರುವಾಗಿದೆ. ಈ ವರ್ಷ ಹ್ಯಾಲೋವೀನ್ ಆಚರಣೆ ಪ್ರಯುಕ್ತ ಇಲ್ಲೊಬ್ಬಳು ಯುವತಿ ಆಫೀಸ್‌ಗೆ ನಾಗವಲ್ಲಿ ಅವತಾರದಲ್ಲಿ ಹೋಗಿದ್ದಾಳೆ. ಸುಶ್ಮಿತಾ ಎಂಬ ಯುವತಿ ತನ್ನ ಕಚೇರಿಗೆ ನಾಗವಲ್ಲಿ ವೇಷ ಹಾಕಿಕೊಂಡು ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ವಿಡಿಯೋಗೆ ಹ್ಯಾಲೋವೀನ್‌ ಪ್ರಯುಕ್ತ ನಾನು ಭಾರತದ ಭೂತ ನಾಗವಲ್ಲಿ ವೇಷದಲ್ಲಿ ಆಫೀಸ್​​​ಗೆ ಹೋಗಿದ್ದೆ ಎಂದು ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸುಶ್ಮಿತಾ ಅವರು ನಾಗವಲ್ಲಿ ವೇಷದಲ್ಲಿ ಕಚೇರಿಗೆ ಬರುವುದನ್ನು ನೋಡಬಹುದು, ನಡಿಗೆ, ನಟನೆ ಎಲ್ಲವೂ ಕೂಡ ನಾಗವಲ್ಲಿಯಂತೆ ಇದೆ. ಅವರ ನಟನೆಗೆ ಅಲ್ಲಿದ್ದ ಸಹೋದ್ಯೋಗಿಗಳು ಚಪ್ಪಾಳೆ, ಶಿಳ್ಳೆಯನ್ನು ಹಾಕುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಜತೆಗೆ ಅಲ್ಲಿದ್ದ ಇತರ ಉದ್ಯೋಗಿಗಳು ಕೂಡ ಹ್ಯಾಲೋವೀನ್ ವೇಷಭೂಷಣಗಳನ್ನು ಧರಿಸಿದ್ದರು. ಇನ್ನುಸುಶ್ಮಿತಾ ಅವರು ನಾಗವಲ್ಲಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಪಾತ್ರಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ಬಂದಿದೆ.

Shwetha M