IPLನಲ್ಲಿ RO-KO ನಂ-1 ವಾರ್ – RCB, MIನಲ್ಲಿದ್ದೇ ಕೋಟಿ ಕೋಟಿ ಗಳಿಕೆ
TOP-10 ಲಿಸ್ಟ್.. ABD, DKಗೆಷ್ಟು?

IPLನಲ್ಲಿ RO-KO ನಂ-1 ವಾರ್ – RCB, MIನಲ್ಲಿದ್ದೇ ಕೋಟಿ ಕೋಟಿ ಗಳಿಕೆTOP-10 ಲಿಸ್ಟ್.. ABD, DKಗೆಷ್ಟು?

2026ರ ಐಪಿಎಲ್​ಗೆ ಸಿದ್ಧವಾಗ್ತಿರೋ ಫ್ರಾಂಚೈಸಿಗಳಿಗೆ ಮೆನ್ಸ್ & ವುಮೆನ್ಸ್ ಟೀಂ ಫಾರ್ಮ್ ಮಾಡೋದೇ ದೊಡ್ಡ ಸವಾಲಾಗಿದೆ. ಒಂದ್ಕಡೆ ಡಬ್ಲ್ಯೂಪಿಎಲ್​ನಲ್ಲಿ ಮೆಗಾ ಹರಾಜು ಇದೆ ಌಂಡ್ ಮೆನ್ಸ್ ಟೀಂನಲ್ಲಿ ಮಿನಿ ಆಕ್ಷನ್ ನಡೆಯಲಿದೆ. ಯಾರ್ಯಾರ ಮೇಲೆ ಹೈಯೆಸ್ಟ್ ಬಿಡ್ ಮಾಡ್ಬೋದು, ಯಾರೆಲ್ಲಾ ಅತೀ ಹೆಚ್ಚು ಸಂಭಾವನೆ ಪಡೀಬೋದು ಅನ್ನೋ ಕ್ಯೂರಿಯಾಸಿಟಿ ಅಂತೂ ಇದ್ದೇ ಇದೆ.

ಇದನ್ನೂ ಓದಿ : ಭಾರತಕ್ಕೆ SLOT ಚೇಂಜ್ ಗುಮ್ಮ – ನಂ.3 ದುಬೆ.. ಟಾಪ್ ಆರ್ಡರ್ ಕಥೆ?

ಇಂಡಿಯನ್ ಪ್ರೀಮಿಯರ್ ಲೀಗ್.. ಜಗತ್ತಿನ ಅತ್ಯಂತ ಶ್ರೀಮಂತ ಲೀಗ್. ಇಲ್ಲಿ ಹಣದ ಹೊಳೆಯೇ ಹರಿಯುತ್ತೆ. ಌಂಡ್ ದಿ ಟಾಪ್ ಮೋಸ್ಟ್ ಪ್ಲೇಯರ್ಸ್ ಅಂತಾ ಕರೆಸಿಕೊಳ್ಳೋ ವಿಶ್ವದ ಅದೆಷ್ಟೋ ಕ್ರಿಕೆಟಿಗರಿಗೆ ಐಪಿಎಲ್​ನಲ್ಲಿ ಆಡೋದೂ ಕೂಡ ಪ್ರತಿಷ್ಠೆಯೇ. ಅದ್ರಲ್ಲೂ 2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜಿನಲ್ಲಿ ನಡೆದ ಬಿಡ್ ಅಂತೂ ಚರಿತ್ರೆಯನ್ನೇ ಸೃಷ್ಟಿಸಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ದಾಖಲೆ ಮಟ್ಟದ ಸಂಭಾವನೆ ಪಡೆದಿದ್ದಾರೆ. ಹಾ ಡೇ ಒನ್ ನಿಂದ ಆಡ್ತಿರೋ ಆಟಗಾರರಂತೂ ವರ್ಷದಿಂದ ವರ್ಷಕ್ಕೆ ಸ್ಯಾಲರಿ ಇನ್​ಕ್ರೀಸ್ ಮಾಡಿಕೊಳ್ತಾನೇ ಹೋಗಿದ್ದಾರೆ. ಹೀಗೆ ಐಪಿಎಲ್​ನಿಂದಲೇ ಅತಿಹೆಚ್ಚು ಸಂಭಾವನೆ ಪಡೆದಿರೋ ಆಟಗಾರರ ಮಾಹಿತಿ ಇಲ್ಲಿದೆ

ಐಪಿಎಲ್ ಕುಬೇರರು!

ಆಟಗಾರ                               ತಂಡ             ಸಂಭಾವನೆ (2025)        ಒಟ್ಟು ಸಂಪಾದನೆ

ರೋಹಿತ್ ಶರ್ಮಾ              ಮುಂಬೈ              16.3 ಕೋಟಿ                178.6 ಕೋಟಿ

ಮಹೇಂದ್ರ ಸಿಂಗ್ ಧೋನಿ       ಚೆನ್ನೈ                  4 ಕೋಟಿ                  176.84 ಕೋಟಿ

ವಿರಾಟ್ ಕೊಹ್ಲಿ                 ಬೆಂಗಳೂರು            21 ಕೋಟಿ                  173.2 ಕೋಟಿ

ಸುರೇಶ್ ರೈನಾ                    ಚೆನ್ನೈ                    ನಿವೃತ್ತಿ               110.74 ಕೋಟಿ

ರವೀಂದ್ರ ಜಡೇಜಾ                ಚೆನ್ನೈ                   18 ಕೋಟಿ              109 ಕೋಟಿ

ಸುನಿಲ್ ನರೈನ್                  ಕೊಲ್ಕತ್ತಾ                12 ಕೋಟಿ              107.25 ಕೋಟಿ

ಎಬಿ ಡಿವಿಲಿಯರ್ಸ್             ಬೆಂಗಳೂರು                ನಿವೃತ್ತಿ                  102.52 ಕೋಟಿ

ಗೌತಮ್ ಗಂಭೀರ್             ಕೊಲ್ಕತ್ತಾ                   ನಿವೃತ್ತಿ                   94.62 ಕೋಟಿ

ಶಿಖರ್ ಧವನ್                 ಪಂಜಾಬ್                   ನಿವೃತ್ತಿ                    91.8 ಕೋಟಿ

ದಿನೇಶ್ ಕಾರ್ತಿಕ್                 ಬೆಂಗಳೂರು               ನಿವೃತ್ತಿ                    86.92 ಕೋಟಿ

ಹೀಗೆ ಈ ಟಾಪ್ 10ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂವರು ಪ್ಳೇಯರ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಪ್ಲೇಯರ್ಸ್ ಲಿಸ್ಟ್​ನಲ್ಲಿದ್ದಾರೆ. ಅದ್ರಲ್ಲೂ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ವಿರಾಟ್ ಕೊಹ್ಲಿ 200 ಕ್ರೋರ್​ಗೆ ಹತ್ತಿರ ಇದ್ದಾರೆ. ನೆಕ್ಸ್​ಟ್ ಸೀಸನ್ ಮುಗಿದ್ರೂ ರೋಹಿತ್ ರೋಹಿತ್​ ಫಸ್ಟ್ ಪ್ಲೇಸ್​ನಲ್ಲೇ ಇರ್ತಾರೆ. ಌಂಡ್ ಕೊಹ್ಲಿ ಸೆಕೆಂಡ್ ಪ್ಳೇಸ್​ಗೆ ಬರ್ತಾರೆ. ಮಾಹಿ ಮೂರನೇ ಸ್ಥಾನದಲ್ಲಿ ಇರ್ತಾರೆ. ಌಂಡ್ ಐವರು ಆಲ್ರೆಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಟ್ನಲ್ಲಿ ಐಪಿಎಲ್ ಮೂಲಕವೇ ಕೋಟ್ಯಧಿಪತಿಗಳಾಗಿರೋ ಅನೇಕ ಆಟಗಾರರಿದ್ದಾರೆ. ರಾಷ್ಟ್ರೀಯ ತಂಡಕ್ಕಿಂತ ಜಾಸ್ತಿ ಈ ಲೀಗ್​ನಲ್ಲಿ ಹಣ ಸಂಪಾದನೆ ಮಾಡಿದ್ದಾರೆ.

Shantha Kumari