ಸೌತ್ ಆಫ್ರಿಕಾ ಬೇಟೆಗೆ RO-KO ರೆಡಿ – ಇದೇ ತಿಂಗಳಲ್ಲೇ ODI ವಾರ್
ಭಾರತಕ್ಕೆ ಜೋಡೆತ್ತು ಎಷ್ಟು ಮುಖ್ಯ?

ಆಸ್ಟ್ರೇಲಿಯಾ ವಿರುದ್ಧದ ವೈಟ್ ಬಾಲ್ ಸಿರೀಸ್ ಮುಗೀತು. ಌಂಡ್ ನೆಕ್ಸ್ಟ್ ಮತ್ತೆ ರೆಡ್ ಬಾಲ್ ಫಾರ್ಮೆಟ್ ಗೆ ಇನ್ನೊಂದೇ ವಾರ ಬಾಕಿ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಇದೆ ನವೆಂಬರ್ 14 ರಿಂದ ಆರಂಭವಾಗಲಿದೆ. ಇನ್ನು ಎರಡನೇ ಪಂದ್ಯ ನವೆಂಬರ್ 22ರಿಂದ ಸ್ಟಾರ್ಟ್ ಆಗುತ್ತೆ. ಆದ್ರೆ ಟೆಸ್ಟ್ ಸರಣಿಗಿಂತ ಕೋಟ್ಯಂತರ ಭಾರತೀಯರು ಕಾಯ್ತಾ ಇರೋದು ರೋ-ಕೋ ಜೋಡಿ ಮತ್ತೆ ಯಾವಾಗ ಮೈದಾನಕ್ಕೆ ಇಳೀತಾರೆ ಅಂತಾ. ಹಾಗಂತ ಈ ಸಲ ಜಾಸ್ತಿ ಟೈಂ ವೇಯ್ಟ್ ಮಾಡೋದು ಬೇಕಿಲ್ಲ. ಯಾಕಂದ್ರೆ ಇದೇ ತಿಂಗಳಲ್ಲೇ ಈ ಜೋಡೆತ್ತು ಮತ್ತೊಮ್ಮೆ ಕ್ರೀಡಾಂಗಣಕ್ಕೆ ಇಳೀತಾರೆ.
ಇದನ್ನೂ ಓದಿ : IND Vs AUS ಕ್ಲೈಮ್ಯಾಕ್ಸ್ ಫೈಟ್ – 5ನೇ ಮ್ಯಾಚ್ ಗೆದ್ದೇ ಗೆಲ್ಲುತ್ತಾ ಭಾರತ?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಸ್. ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರೋ ಸೂಪರ್ ಸ್ಟಾರ್ಸ್. ಇವ್ರಿಬ್ಬರು ಇದ್ದಾರೆ ಅಂತಾನೇ ಪಂದ್ಯಗಳನ್ನ ನೋಡೋ ಫ್ಯಾನ್ಬೇಸ್ ಕೂಡ ಇದ್ದಾರೆ. ಬಟ್ ಅನ್ಫಾರ್ಚುನೇಟ್ಲಿ ಏಕದಿನ ಪಂದ್ಯಗಳಲ್ಲಿ ಮಾತ್ರ ಇವ್ರ ಆಟವನ್ನ ನೋಡೋಕಷ್ಟೇ ಚಾನ್ಸ್ ಇದೆ. ಟಿ-20ಐ ಹಾಗೇ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿರೋದ್ರಿಂದ ಒಡಿಐ ಪಂದ್ಯಗಳಿಗಾಗೇ ಕಾಯ್ಬೇಕಾಗುತ್ತೆ. ಚಾಂಪಿಯನ್ಸ್ ಟ್ರೋಫಿ ಆದ್ಮೇಲೆ ಬರೋಬ್ಬರಿ 7 ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಜೆರ್ಸಿ ತೊಟ್ಟೇ ಇರಲಿಲ್ಲ. ಕೊನೆಗೂ ಆಸೀಸ್ ಸರಣಿ ಮೂಲಕ ಕಮ್ ಬ್ಯಾಕ್ ಮಾಡಿದ್ರು. ಇದೀಗ ಇದೇ ತಿಂಗಳಲ್ಲೇ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿಯೋಕೆ ರೆಡಿಯಾಗ್ತಿದ್ದಾರೆ. ಅದ್ರಲ್ಲೂ ಭಾರತದಲ್ಲೇ ಈ ಸರಣಿ ನಡೆಯೋದ್ರಿಂದ ಕತೂಹಲ ಮತ್ತಷ್ಟು ಹೆಚ್ಚಾಗಿದೆ.
ನವೆಂಬರ್ ಅಂತ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆರಂಭ!
ನವೆಂಬರ್ 14 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ಆ ನಂತ್ರ ಮೂರು ಪಂದ್ಯಗಳನ್ನ ಏಕದಿನ ಸರಣಿ ನಡೆಯಲಿದೆ. ನವೆಂಬರ್ ತಿಂಗಳಾಂತ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ಶುರುವಾಗಲಿದೆ. ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಅದರಂತೆ ನವೆಂಬರ್ 30 ರಂದು ನಡೆಯಲಿರುವ ಮೊದಲ ಪಂದ್ಯದ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯವು ನವೆಂಬರ್ 30 ರಂದು ರಾಂಚಿಯಲ್ಲಿ ನಡೆದರೆ, ದ್ವಿತೀಯ ಮ್ಯಾಚ್ ಡಿಸೆಂಬರ್ 3 ರಂದು ರಾಯ್ಪುರದಲ್ಲಿ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಸೋಕೆ ಶೆಡ್ಯೂಲ್ ಫಿಕ್ಸ್ ಆಗಿದೆ. ಆದ್ರೆ ಸೌತ್ ಆಫ್ರಿಕಾ ವಿರುದ್ಧ ಈ ಸರಣಿ ಭಾರತದ ಪಾಲಿಗೆ ತುಂಬಾನೇ ಮುಖ್ಯ ಆಗುತ್ತೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಎಷ್ಟು ಮುಖ್ಯ|
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯು 2025 ರಲ್ಲಿ ಭಾರತದ ಕೊನೆಯ ಏಕದಿನ ಸರಣಿಯಾಗಲಿದೆ. ಭಾರತದ ಮಿಡಲ್ ಆರ್ಡರ್ ಕ್ರಮಾಂಕವನ್ನು ಬಲಪಡಿಸಲು, ಹೊಸ ಸಂಯೋಜನೆಗಳನ್ನು ಪ್ರಯೋಗಿಸಲು ಮತ್ತು 2026 ಕ್ಕಿಂತ ಮೊದಲು ತಂಡದ ಸಮತೋಲನವನ್ನು ಪರಿಷ್ಕರಿಸಲು ಇದು ಒಂದು ಪ್ರಮುಖ ಸರಣಿ ಆಗಲಿದೆ. ಕೊಹ್ಲಿ ಮತ್ತು ರೋಹಿತ್ ತಂಡಕ್ಕೆ ಸೇರ್ಪಡೆಯಾಗಿರುವುದು ಭಾರತದ ಬ್ಯಾಟಿಂಗ್ ಕ್ರಮಾಂಕಕ್ಕೆ ಕನ್ಸಿಸ್ಟೆನ್ಸಿ, ಎಕ್ಸ್್ಪೀರಿಯೆನ್ಸ್ ಹಾಗೇ ಕ್ಯಾಪ್ಸನ್ಸಿ ಪ್ರಾಮುಖ್ಯತೆ ಗೊತ್ತಾಗುತ್ತೆ. ಈ ಇಬ್ಬರು ಆಟಗಾರರ ಪ್ರಸೆನ್ಸ್ ಯಂಗ್ ಪ್ಲೇಯರ್ಸ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ನ ಪ್ರೆಶರ್ನ ಹ್ಯಾಂಡಲ್ ಮಾಡೋಕೆ ಒಂದು ರೀತಿಯ ಆತ್ಮಸ್ಥೈರ್ಯ ನೀಡುತ್ತೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ನಂತರ, ಕೊಹ್ಲಿ ಮತ್ತು ರೋಹಿತ್ ಅವರ ಮುಂದಿನ ಅಂತರರಾಷ್ಟ್ರೀಯ ಪಂದ್ಯ 2026 ರ ಆರಂಭದಲ್ಲಿ ನಡೆಯುವ ಸಾಧ್ಯತೆಯಿದೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಸೀಮಿತ ಓವರ್ಗಳ ಸರಣಿಯನ್ನು ಆಡಲಿದೆ. ಇನ್ನು ಆಸ್ಟ್ರೇಲಿಯಾ ವಿರುದ್ದದ್ಧ ಕೊನೇ ಮ್ಯಾಚಲ್ಲಿ ರೋಹಿತ್-ಕೊಹ್ಲಿ ಜೋಡೆತ್ತಿನಂತೆ ನಿಂತು ಭಾರತವನ್ನ ಗೆಲ್ಲಿಸಿಕೊಟ್ಟಿದ್ರು. 150 ಪ್ಲಸ್ ಪಾಟ್ನರ್ ಶಿಪ್, ರೋಹಿತ್ ಅಜೇಯ ಶತಕ, ವಿರಾಟ್ ಅಜೇಯ ಅರ್ಧ ಶತಕ ಸಿಡಿಸಿ ಮಿಂಚಿದ್ರು. ಹೀಗಾಗಿ ಸೌತ್ ಆಫ್ರಿಕಾ ಸಿರೀಸ್ನಲ್ಲೂ ಈ ಇಬ್ಬರು ಆಟಗಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈ ಇಬ್ಬರು ಲೆಜೆಂಡರಿ ಪ್ಲೇಯರ್ಸ್ 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲೀವರೆಗೂ ತಂಡದಲ್ಲಿ ಮುಂದುವರಿಯೋ ನಿರ್ಧಾರ ಮಾಡಿದ್ದಾರೆ. ಫಿಟ್ನೆಸ್ & ಫಾರ್ಮ್ನಲ್ಲೂ ಬೆಸ್ಟ್ ರಿಸಲ್ಟ್ ಕೊಡ್ತಿದ್ದಾರೆ. ಯಂಗ್ಸ್ಟರ್ಸ್ನೂ ನಾಚಿಸುವಂತೆ ಪರ್ಫಾಮ್ ಮಾಡ್ತಿದ್ದಾರೆ. ಸೋ ಮ್ಯಾನೇಜ್ಮೆಂಟ್ ಇಬ್ಬರನ್ನೂ ಮುಂದಿನ 2 ವರ್ಷಗಳ ಕಾಲ ಉಳಿಸಿಕೊಳ್ಳುತ್ತಾ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

