ಮೋದಿ ಗ್ರೌಂಡಲ್ಲಿ T-20WC ಫೈನಲ್ – 5 ನಗರ.. ಬೆಂಗಳೂರು ಕೈ ಬಿಟ್ಟಿದ್ದೇಕೆ?
PAK ಫೈನಲ್ ಗೆ ಬಂದ್ರೆ ಕಷ್ಟ ಕಷ್ಟ!

ಟೀಂ ಇಂಡಿಯಾ ಸದ್ಯ ವೈಟ್ ಬಾಲ್ ಌಂಡ್ ರೆಡ್ ಬಾಲ್ ಫಾರ್ಮೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಬ್ಯುಸಿ ಇದೆ. ಬಟ್ ನೆಕ್ಸ್ಟ್ ಬಿಗ್ ಟಾರ್ಗೆಟ್ ಇಇರೋದು 2026ರ ಟಿ-20 ವಿಶ್ವಕಪ್ ಮೇಲೆ. ಹಾಗಂತ ಈ ಟೂರ್ನಿಯೇನು ನೆಕ್ಸ್ಟ್ ಇಯರ್ ಮಿಡ್ಲಲ್ಲೋ ಅಥವಾ ಇಯರ್ ಎಂಡ್ನಲ್ಲೋ ಅಲ್ಲ. ವರ್ಷದ ಆರಂಭದಲ್ಲೇ ಮಿನಿಸಮರಕ್ಕೆ ಶೆಡ್ಯೂಲ್ ಫಿಕ್ಸ್ ಆಗಿದೆ. ಅಂದ್ರೆ ನೆಕ್ಸ್ಟ್ ಫೆಬ್ರವರಿ ಌಂಡ್ ಮಾರ್ಚ್ನಲ್ಲೇ ಟೂರ್ನಮೆಂಟ್ ನಡೆಯಲಿದೆ. ಒನ್ ಮೋರ್ ಥಿಂಗ್ ಈ ಟೂರ್ನಿ ಭಾರತ & ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಇನ್ನೇನು ಚುಟುಕು ಸಮರಕ್ಕೆ ಮೂರು ತಿಂಗಳಷ್ಟೇ ಉಳಿದಿದ್ದು ಬಿಸಿಸಿಐ ಪಂದ್ಯಗಳು ನಡೆಯೋ ನಗರಗಳನ್ನ ಫೈನಲ್ ಮಾಡ್ತಿದೆ.
ಇದನ್ನೂ ಓದಿ : ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ಮತ್ತೆ ಮುಂದೂಡಿಕೆ! – ಸಿಎಂ ಮಾತಿಗೂ ಬೆಲೆ ಇಲ್ವಾ?
ಟೀಂ ಇಂಡಿಯಾ ಟಿ-20ಐ ಜರ್ನಿ ಸದ್ಯ ಅಲ್ಟಿಮೇಟ್ ಆಗಿದೆ. 2024ರ ಹಾಲಿ ಚಾಂಪಿಯನ್ಗಳು ಚುಟುಕು ಫಾರ್ಮೆಟ್ನಲ್ಲಿ ನೋ ಲಾಸ್ ಜರ್ನಿ ಕಂಟಿನ್ಯೂ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ವಿಜಯಯಾತ್ರೆಯನ್ನ ಕಟ್ಟಿಹಾಕೋಕೆ ಜಗತ್ತಿನ ಯಾರಿಂದಲೂ ಸಾಧ್ಯವಾಗಿಲ್ಲ. ಅದ್ರಲ್ಲೂ ಏಷ್ಯಾಕಪ್ನಲ್ಲೂ ಚಾಂಪಿಯನ್ ಪಟ್ಟಕ್ಕೇರಿರೋದ್ರಿಂದ ಕಾನ್ಫಿಡೆನ್ಸ್ ಲೆವೆಲ್ ನೆಕ್ಸ್ಟ್ ರೇಂಜ್ನಲ್ಲಿವೆ. ಇದೀಗ ಇದೇ ಮೈಂಡ್ಸೆಟ್ನಲ್ಲೇ 2026ರ ಟಿ-20 ವಿಶ್ವಕಪ್ನೂ ಗೆದ್ದು ಪಾರುಪತ್ಯ ಮೆರೆಯೋ ಲೆಕ್ಕಾಚಾರದಲ್ಲಿದ್ದಾರೆ. ಮತ್ತೊಂದೆಡೆ ಬಿಸಿಸಿಐ ಕೂಡ ಹೋಸ್ಟಿಂಗ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸೋಕೆ ಸನ್ನದ್ಧವಾಗ್ತಿದೆ.
ಸತತ ನಾಲ್ಕನೇ ಐಸಿಸಿ ಕಪ್ ಮೇಲೆ ಕಣ್ಣಿಟ್ಟ ಭಾರತ!
ಭಾರತ ಕಳೆದೊಂದು ವರ್ಷದಲ್ಲಿ ಎಕ್ಸ್ಟ್ರಾರ್ಡಿನರಿ ಪರ್ಪಾಮೆನ್ಸ್ ನೀಡ್ತಿದೆ. ಐಸಿಸಿ ಕಪ್ಗಳನ್ನ ಬೇಟೆಯಾಡ್ತಿದೆ. 2024 ರಲ್ಲಿ, ಭಾರತ ತಂಡವು ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಗೆದ್ದಿತ್ತು. 2025ರಲ್ಲಿ ಒಡಿಐ ಫಾರ್ಮೆಟ್ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದ್ರು. ಅಲ್ದೇ ಇತ್ತೀಚೆಗಷ್ಟೇ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ 2026ರ ಟಿ20 ವಿಶ್ವಕಪ್ ಕೂಡ ತವರಿನಲ್ಲೇ ನಡೆಯಲಿದೆ. ಹಾಗಾಗಿ ಭಾರತಕ್ಕೆ ಸತತ 4ನೇ ಐಸಿಸಿ ಪ್ರಶಸ್ತಿ ಗೆಲ್ಲುವ ಅವಕಾಶ ಸಿಕ್ಕಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳು ಜಂಟಿಯಾಗಿ ಫೆಬ್ರವರಿ-ಮಾರ್ಚ್‌ನಲ್ಲಿ 2026ರ ಟಿ 20 ವಿಶ್ವಕಪ್ ಅನ್ನು ಆಯೋಜಿಸಲಿವೆ. ಇನ್ನು ವೇಳಾಪಟ್ಟಿಯನ್ನ ಐಸಿಸಿ ಶೀಘ್ರದಲ್ಲೇ ರಿಲೀಸ್ ಮಾಡೋ ಸಾಧ್ಯತೆಗಳಿವೆ. ಇದಕ್ಕಾಗಿ ಪಂದ್ಯಗಳು ನಡೆಯುವ ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
5 ನಗರಗಳಲ್ಲಿ 2026ರ ವಿಶ್ವಕಪ್ ನಡೆಸಲು ಚಿಂತನೆ!
ಬಿಸಿಸಿಐ ಅಧಿಕಾರಿಗಳ ಸಭೆಯು 5 ನಗರಗಳಲ್ಲಿ ವಿಶ್ವಕಪ್ ನಡೆಸೋದು ಹಾಗೇ ಪ್ರತಿ ಮೈದಾನದಲ್ಲಿ ಆರು ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿದೆ. ಅಹಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈಗಳನ್ನು ಟಿ20 ವಿಶ್ವಕಪ್ ಸ್ಥಳಗಳಾಗಿ ಶಾರ್ಟ್‌ಲಿಸ್ಟ್ ಮಾಡಿದೆ. ಇನ್ನು ಭಾರತದ ಜೊತೆಗೆ, ಶ್ರೀಲಂಕಾ 2026 ರ ಟಿ 20 ವಿಶ್ವಕಪ್ ಅನ್ನು ಸಹ ಆಯೋಜಿಸಲಿದೆ. ಶ್ರೀಲಂಕಾದ ಕೊಲಂಬೊ ಮೈದಾನದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತೆ. ಒಂದು ಸೆಮೀಸ್ ಭಾರತದಲ್ಲಿ ನಡೆದ್ರೆ ಇನ್ನೊಂದನ್ನ ಪಾಕಿಸ್ತಾನದ ಪರ್ಪಾಮೆನ್ಸ್ ಮೇಲೆ ನಿರ್ಧರಿಸಲಾಗುತ್ತದೆ. ಪಾಕಿಸ್ತಾನ ಸೆಮಿಫೈನಲ್ ತಲುಪಿದರೆ ಆ ಪಂದ್ಯವನ್ನ ಲಂಕಾದಲ್ಲೇ ಆಯೋಜನೆ ಮಾಡ್ಬೇಕಾಗುತ್ತೆ. ಇಲ್ಲಿ ಇನ್ನೊಂಧು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಇತ್ತೀಚೆಗೆ 2025 ರ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸಿದ್ದ ಮೈದಾನಗಳಿಗೆ 2026 ರ ಟಿ 20 ವಿಶ್ವಕಪ್ ಆಯೋಜನೆ ಮಾಡೋದಿಲ್ಲ. ಗುವಾಹಟಿ, ವಿಶಾಖಪಟ್ಟಣಂ, ಇಂದೋರ್ ಮತ್ತು ನವಿ ಮುಂಬೈ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಪಂದ್ಯಗಳನ್ನು ಆಯೋಜಿಸಿರುವ ಭಾರತದ ನಾಲ್ಕು ಸ್ಥಳಗಳಾಗಿವೆ. ಇವುಗಳನ್ನ ಹೊರೆತುಪಡಿಸಿ ಉಳಿದ ಕ್ರೀಡಾಂಗಣಗಳನ್ನ ಬಳಸಿಕೊಳ್ಳಲಿದೆ. ಆದ್ರೆ ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣದಿಂದಾಗಿ ಚಿನ್ನಸ್ವಾಮಿ ಮೈದಾನವನ್ನ ಪರಿಗಣಿಸೋ ಸಾಧ್ಯತೆ ಕಡಿಮೆ ಇದೆ. ಹಾಗೇ ಪಾಕಿಸ್ತಾನ ಫೈನಲ್ ತಲುಪಿಲ್ಲ ಅಂದ್ರೆ 2026ರ ಟಿ-20 ವಿಶ್ವಕಪ್ ಫೈನಲ್ ಗೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಸಾಕ್ಷಿಯಾಗಲಿದೆ.

ನೋಡಿರಿ

