ಒಳಗೆ ನೆಗೆಟಿವ್, ಹೊರಗೆ ಪಾಸಿಟಿವ್ – ಗೆಲ್ಲೋ ಗಿಲ್ಲಿ ಟಾರ್ಗೆಟ್ ಆದ್ನಾ?
ಅಶ್ವಿನಿ, ಧ್ರುವಂತ್, ರಿಷಾಗೆ ಉರಿ ಯಾಕೆ?

ಗಿಲ್ಲಿ.. ಮಂಡ್ಯದಲ್ಲಿ ಈ ಗಿಲ್ಲಿ ಈಗ ಕರ್ನಾಟಕದ ಗಲ್ಲಿಗಲ್ಲಿಗೂ ಗೊತ್ತು.. ಬಿಗ್ ಬಾಸ್ನ್ನ ನೋಡದೇ ಇರೋರು ಕೂಡ ಗಿಲ್ಲಿನಟನ ಆಟಕ್ಕೆ ನೋಡ್ತಾ ಇದ್ದಾರೆ. ಅವರ ಕಾಮಿಡಿಗೆ ಪಿದಾ ಆಗಿದ್ದಾರೆ.. ಆದ್ರೆ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ದೊಡ್ಡ ಟಾರ್ಗೆಟ್ ಆಗಿದ್ದಾರೆ. ಗಿಲ್ಲಿ ಬಿಗ್ಬಾಸ್ ಮನೆಯಲ್ಲಿ ಟಾಂಗ್ ಕೊಡ್ತಾನೆ,ಇನ್ನೊಬ್ಬರ ತೇಜೋವಧೆ ಮಾಡಿ ಕಾಮಿಡಿ ಮಾಡ್ತಾ ಇದ್ದಾನೆ ಅಂತ ಅವನ ಎದುರಾಳಿಗಳು ಹೇಳ್ತಾ ಇದ್ದಾರೆ.. ಇದ್ರಲ್ಲಿ ಅಶ್ವಿನಿ ಗೌಡ ನಂಬರ್ 1 ಸ್ಥಾನದಲ್ಲಿದ್ರೆ ನಂತ್ರ ಬರೋದ್ ಅವರದ್ದೇ ಟೀಂನಂ ಸದಸ್ಯರು. ರಿಷಾ ರಾಷಿಕಾ ಈಗ ಧ್ರವಂತ್ ಗಿಲ್ಲಿ ಆಟದ ಬಗ್ಗೆ ನೆಗೆಟಿವ್ ಮಾಡ್ತಾ ಇದ್ದಾರೆ.. ಗಿಲ್ಲಿ ಬೇರೆಯವರ ವಿಷ್ಯವನ್ನ ಇಟ್ಕೊಂಡು ಅಸಹ್ಯವಾಗಿ ಕಾಮಿಡಿ ಮಾಡ್ತಾ ಇದ್ದಾನೆ. ಅದ್ರಿಂದ ಬಿಗ್ಬಾಸ್ ಮನೆಯಲ್ಲಿ ಇದ್ದಾನೆ ಅನ್ನೋದು ಇವರ ಅಭಿಪ್ರಾಯ.
ಆದ್ರೆ ಎಲ್ಲೂ ಕೂಡ ಗಿಲ್ಲಿ ಕಾಮಿಡಿ ಪ್ರೇಕ್ಷಕರಿಗೆ ನೋವು ಮಾಡಿಲ್ಲ.. ಗಿಲ್ಲಿ ತೆೇಜೋವಧೆ ಮಾಡ್ತಾ ಇದ್ದಾನೆ ಅಂತ ಎಲ್ಲಿ ಕೂಡ ಅನ್ಸಲ್ಲ. ಆದ್ರೆ ಇಲ್ಲಿ ಅಶ್ವಿನಿ ಗೌಡ, ರಿಷಾ, ರಾಶಿಕಾ ಮತ್ತು ಧ್ರವಂತ್ಗೆ ಗಿಲ್ಲಿ ಟಾರ್ಗೆಟ್ ಆಗಿದ್ದಾನೆ ಅಷ್ಟೇ.. ನನಗೂ ಕೂಡ ಗಿಲ್ಲಿ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಯಾಕಂದ್ರೆ ಈ ಸಲ ಬಿಗ್ ಬಾಸ್ ನೋಡಬೇಕು ಅನ್ಸುತ್ತಾ ಇರೋದ್ ಗಿಲ್ಲಿ ನಟನಿದೆ.. ಯಾಕಂದ್ರೆ ಅವನಿಂದ ಪ್ರೇಕ್ಷಕರಿಗೆ ಸಖತ್ ಮನೋರಂಜನೆ ಸಿಗ್ತಾ ಇದೆ. ಕೇವಲ ಒಂದೂವರೆ ಗಂಟೆ ಶೋನಲ್ಲಿ ಮಾತ್ರ ಅಲ್ಲ.. ಲೈವ್ನಲ್ಲೂ ಕೂಡ ಗಿಲ್ಲಿ ತಮಾಷೆ ಮಾಡ್ತಿದ್ದಾನೆ.. ಆಟ ಚೆನ್ನಾಗಿ ಆಡ್ತಾ ಇದ್ದಾನೆ.. ಇಲ್ಲಿ ಗಿಲ್ಲಿ ಎಲ್ಲೂ ಕೂಡ ಸಿಟ್ಟು ಮಾಡಿಕೊಳ್ತಾ ಇಲ್ಲ..
ಕೇವಲ ಅಶ್ವಿನಿ ಗೌಡ ಟೀಂ ಜೊತೆ ಮಾತ್ರ ತಮಾಷೆ ಮಾತು ಕಾಲೆಳೆಯೋ ಮಾತು ಆಡ್ತಾ ಇಲ್ಲ. ಬಿಗ್ ಬಾಸ್ಮನೆಯ ಪ್ರತಿ ಸ್ಪರ್ಧಿಗಳ ಜೊತೆ ಗಿಲ್ಲಿ ಅದೇ ತರ ಇದ್ದಾನೆ.. ನೀವು ನೋಡಿ ಗಿಲ್ಲಿ ತಮಾಷೆ ಮಾಡ್ತಾ, ಬೇರೆಯವರ ಕಾಳೆಯುತ್ತಾ ಇರ್ತಾ ಎಲ್ಲರೂ ಕೂಡ ಬಿದ್ದು ಬಿದ್ದು ನಗಾಡ್ತಾರೆ.. ಚೆನ್ನಾಗಿ ಇರ್ತಾರೆ.. ಆದ್ರೆ ಅವರಿಗೆ ತಮಾಷೆ ಮಾಡಿದಾಗ ಸಿರಿಯಸ್ ಆಗ್ತಾರೆ.. ಗಿಲ್ಲಿ ಹಾಗೇ ಹೀಗೆ ಅಂತ ಕಥೆ ಹೇಳ್ತಾರೆ. ಬಟ್ ಇಲ್ಲಿ ಗಿಲ್ಲಿ ಯಾರ ಬಗ್ಗೆ ತಮಾಷೆ ಮಾಡ್ತಾ ನೆೆಗೆಟಿವ್ ಮಾಡಲ್ಲ.. ಹಾಗೇ ಸಿರಿಯಸ್ ಆಗಿರೋ ವಿಷ್ಯವನ್ನ ತಮಾಷೆ ಆಗಿ ಹೇಳಿ ಅವರಿಗೆ ಮುಟ್ಟಿಸೋ ಕೆಲಸವನ್ನ ಗಿಲ್ಲಿ ಮಾಡ್ತಾ ಇದ್ದಾನೆ ಫ್ರೆಂಡ್ಸ್.. ಇನ್ನೂ ಮೊದ್ಲಿಂದ ಗಿಲ್ಲಿ ಮತ್ತು ಅಶ್ವಿನಿಗೆ ಆಗಲ್ಲ.. ಇಬ್ಬರು ಕೂಡ ಒಂದು ರೀತಿಯ ಎದುರಾಳಿ ಅಂತ ಹೇಳಬಹುದು.. ಇಲ್ಲಿ ಅಶ್ವಿನಿಗೆ ಗಿಲ್ಲಿ ಚೆನ್ನಾಗಿ ಆಡ್ತಾ ಇದ್ದಾನೆ, ಹೊರಗೆ ಒಳ್ಳೆಯ ಹೆಸರು ಮಾಡ್ತಾ ಇದ್ದಾನೆ ಅಂತ ಅನ್ಸಿದೆ. ಅದ್ದಕ್ಕೆ ಏನ್ ಎಲ್ಲಾ ನೋಡಿದ್ರೂ ಗಿಲ್ಲಿಗಿಲ್ಲಿ ಅಂತಾರೆ, ಅವನ್ ಏನ್ ಮಾಡ್ತಾ ಇದ್ದಾನೆ ಹೇಳ್ತಾ ಇದ್ದಾರೆ. ಇಲ್ಲಿ ಅಶ್ವಿನಿ ಗೌಡ ಸ್ಟ್ರಾಂಗ್ ಆಗಿದ್ದಾರೆ. ಬಟ್ ಫುಲ್ ನೆಗೆಟಿವ್ ಆಗಿದ್ದಾರೆ. ಈಗೋ ಅನ್ನೋದು ಇವರ ಹೆಸರನ್ನ ಹಾಳು ಮಾಡ್ತಾ ಇದೆ.. ನೋಡಿ ರಕ್ಷಿತಾ ಶೆಟ್ಟಿ ಜೊತೆ ಜಗಳ ಆಗಿತ್ತು ಅದ್ದನ್ನ ಸರಿ ಮಾಡ್ಕೊಂಡು ಹೋಗಬಹುದಿತ್ತು. ಪಾಪ ಆ ಹುಡುಗಿಗೆ ಲೇಟರ್ ಸಿಗೋ ತರ ಮಾಡಬಹುದಿತ್ತು.. ಜಾನ್ವಿ ವಿಷ್ಯ ಬಂದಾಗ ಕಣ್ಣೀರು ಹಾಕ್ತಾ ಲೇಟರ್ ಅವರಿಗೆ ಸಿಗ್ಲಿ ಅಂತ ಡವ್ ಮಾಡ್ತಾರೆ.. ಜಾನ್ವಿ ಜೊತೆ ಆಗಿರೋ ಜಗಳನ್ನ ಸರಿ ಮಾಡ್ಕೊಂಡಿರೋ ಅಶ್ವಿನಿಗೆ ರಕ್ಷಿತಾ ಜೊತೆ ಯಾಕೆ ಸರಿ ಆಗಿಲ್ಲ.. ಅಲ್ಲದೇ ರಕ್ಷಿತಾ ಇವರಿಗಿಂತ 20 ವರ್ಷ ಚಿಕ್ಕವಳು ಅವಳಿಗಿರೋ ಬುದ್ದಿ ಇವರಿಗೆ ಯಾಕಿಲ್ಲ ಅನ್ನೋದು ಪ್ರೇಕ್ಷಕರ ಪ್ರಶ್ನೆ.. ಇಲ್ಲಿ ಅಶ್ವಿನಿ ಗೌಡ ಮಾಡ್ತಾ ಇರೋ ತಪ್ಪನ್ನ ಸುದೀಪ್ ಅವರು ಕೂಡ ಹೇಳ್ತಾ ಇಲ್ಲ, ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿಲ್ಲ. ಯಾಕಂದ್ರೆ ಒಂದು ನೆಗೆಟಿವ್ ಕ್ಯಾರೆಕ್ಟರ್ ಮನೆಯಲ್ಲಿ ಇರಬೇಕು ಅನ್ನೋದು ಕೂಡ ಶೋ ಆಯೋಜಕರ ಪ್ಲ್ಯಾನ್ ಆಗಿರುತ್ತೆ.

ಇನ್ನು ಧ್ರುವಂತ್ ಕೂಡ ಈಗ ಗಿಲ್ಲಿಯನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ. ಇಷ್ಟು ದಿನ ಮಲ್ಲಮ್ಮ ಮಲ್ಲಮ್ಮ ಅಂತ ಸೆಂಟಿಮೆಂಟ್ ಕ್ರಿಯೇಟ್ ಮಡ್ತಾ ಇದ್ದ ಈ ಧ್ರುವಂತ್ ಮಲ್ಲಮ್ಮ ಹೋದ್ ಮೇಲೆ ಗಿಲ್ಲಿ ಜೊತೆ ಜಗಳ ಶುರುಮಾಡಿದ್ದಾನೆ.. ಗಿಲ್ಲಿಗೆ ಧ್ರವಂತ್ ಒಂದು ಮಾತು ಹೇಳ್ತಾನೆ ಕಾಮಿಡಿ ಮಾಡೋದ್ ಬೇರೆ, ನಿಮ್ಮ ಚೀಪ್ ಮಾಡೋದ್ ಕಂಡಮ್ಮ ಮಾಡೋದ್ ಬೇರೆ ಅಂತ.. ಬಟ್ ಇಲ್ಲಿ ಗಿಲ್ಲಿ ಧ್ರುವಂತ್ ಹೇಳಿದ್ದಂಕೆ ಎಲ್ಲಿ ಕೂಡ ಯಾರನ್ನ ಚೀಪ್ ಮಾಡಿಲ್ಲ.. ಅದ್ರಿಂದ ಕಾಮಿಡಿ ಮಾಡಿಲ್ಲ.. ಅವ್ನ್ ಇರೋದ್ ಹಾಗ್ ಗುರು.. ಕಾವ್ಯ, ರಕ್ಷಿತಾ, ಚಂದ್ರಪ್ರಭ, ಧನುಷ್, ಮಾಳು ಜೊತೆ ಕೂಡ ಹಾಗೇ ಕಾಮಿಡಿ ಮಾಡ್ತಾನೆ ಕಾಲೆಳೆಯುತ್ತಾನೆ. ಆದ್ರೆ ಅವರು ಯಾರು ಕೂಡ ಹಾಗೇ ಹೇಳಿಲ್ಲ.. ಬಟ್ ಗಿಲ್ಲಿಗೆ ಕೊಟ್ಟ ಹಾಗೇ ಬೇರೆಯವರಿಗೆ ಇವರೆಲ್ಲಾ ಮಾಡಿದ್ರೆ ಸುಮ್ನೇ ಇರ್ತಾ ಇರಲಿಲ್ಲ.. ಗಿಲ್ಲಿ ಬಿಟ್ಟಿದ್ದ ಕೆೇಂಪೇಗೌಡ ಮೀಸೆಯನ್ನ ಇವರು ಎಳ್ಕೊಂಡ್ ಹೋಗಿ ಬೋಳಿಸಿದ್ರು. ಆದ್ರೆ ಗಿಲ್ಲಿ ಅದ್ದನ್ನ ತಮಾಷೆಯಾಗಿ ತಗೊಂಡ.. ಯಾರ ಮೇಲೆ ಕೂಡ ಕೋಪ ಮಾಡಿಕೊಂಡಿಲ್ಲ.
ಆಮೇಲೆ ಬಟ್ಟೆ ವಿಷ್ಯದಲ್ಲಿ ರಿಷಾ ಗಿಲ್ಲಿ ಮೇಲೆ ಕೈ ಮಾಡಿದಾಗ ಗಿಲ್ಲಿ ಸುಮ್ಮನೆ ಕಾಲಳೆದ ಬಿಟ್ರೆ ಕೈ ಮಾಡಿಲ್ಲ.. ಇಲ್ಲಿ ಗಿಲ್ಲಿಗೆ ಯಾರ ಮನಸ್ಸನ್ನ ಕೂಡ ವೈಯಕ್ತಿವಾಗಿ ಹರ್ಟ್ ಮಾಡಬೇಕು ಅಂತ ಅವನು ಕಾಮಿಡಿ ಮಾಡಲ್ಲ.. ಬಟ್ ಇಲ್ಲಿ ಗಿಲ್ಲಿ ಬೇರ ಸ್ಪರ್ಥಿಗಳು ಮನೆಯಲ್ಲಿ ಮಾಡಿರೋ ತಪ್ಪುಗಳನ್ನ ಇಡ್ಕೊಂಡು ಟಾಂಗ್ ಕೊಡ್ತಾರೆ. ವೈಯಕ್ತಿ ವಿಚಾರಕ್ಕೆ ಹೋಗಲ್ಲ.. ಈ ಅಶ್ವಿನಿ ತರ ನಾನು ನೂರು ಸಿನಿಮಾ ಮಾಡಿದ್ದೇನೆ, ನೀನು ಯೂಟ್ಯೂಬ್ನಿಂದ ಬಂದಿದ್ದು ನೀನ್ ಮಾಡಿ ತೋರಿಸು ಅನ್ನೋ ರೀತಿ ವರ್ತನೆ ಗಿಲ್ಲಿ ಮಾಡಿಲ್ಲ. ಗಿಲ್ಲ ಒಳ್ಳೆಯ ವಿಷ್ಯದಲ್ಲೂ ತರ್ಲೆ ಮಾಡ್ತಾ ಇದ್ದಾನೆ. ಗಿಲ್ಲಿ ಹೀಗಾಗಿಯೇ ಕನ್ನಡಿಗರ ಮನಸ್ಸು ಗೆದ್ದಿದ್ದಾನೆ. ಬಟ್ ಮನೆಯೊಳಗೆ ಗಿಲ್ಲಿಯ ಯಶಸ್ಸು ಅವನಿಗಿರೋ ಬೆಂಬಲನ್ನನ ಸಹಿಸಿಕೊಳ್ಳದ ಅಶ್ವಿನಿಗೌಡ, ರಿಷಾ, ರಾಶಿಕಾ , ಧ್ರುವಂತ್ ಮತ್ತು ಸುಧಿ ಗಿಲ್ಲಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ. ಗಿಲ್ಲಿಗೆ ಒಳಗೆ ನೆಗೆಟಿವ್ ಇದ್ರೆ ಹೊರಗೆ ತುಂಬಾ ಪಾಸಿಟಿವ್ ಇದೆ.

ನೋಡಿರಿ

