ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕಾಂತಾರ ಕನಕವತಿ! – ರುಕ್ಮಿಣಿ ವಸಂತ್‌ ಕೇಸ್‌ ಕೊಟ್ಟಿದ್ದು ಯಾರ ಮೇಲೆ?

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕಾಂತಾರ ಕನಕವತಿ! – ರುಕ್ಮಿಣಿ ವಸಂತ್‌ ಕೇಸ್‌ ಕೊಟ್ಟಿದ್ದು ಯಾರ ಮೇಲೆ?

ನಟಿ ರುಕ್ಮಿಣಿ ವಸಂತ್‌ ಕಾಂತಾರ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಕಾಂತಾರದ ಕನಕವತಿ ಈಗ ನ್ಯಾಷನಲ್‌ ಕ್ರಶ್‌ ಆಗಿ ಮಿಂಚುತ್ತಿದ್ದಾರೆ. ಈ ಹೊತ್ತಲ್ಲೇ ನಟಿ ಕೆಲ ಕಿಡಿಗೇಡಿಗಳು ನಟಿ ನೆಮ್ಮದಿ ಹಾಳು ಮಾಡಲು ಹೊರಟಿದ್ದಾರೆ. ನಟಿ ರುಕ್ಮಿಣಿ ವಸಂತ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: 6 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಜೀವ ಹೋಯ್ತು! – ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ವ್ಯಕ್ತಿ!

ಏನಿದು ಕೇಸ್?‌

ನಟಿ ರುಕ್ಮಿಣಿ ವಂಸತ್‌ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ, ಕರೆ ಮಾಡುತ್ತಿರುವ ಸಂಖ್ಯೆಯನ್ನ ಬಹಿರಂಗವಾಗಿ ಪೋಸ್ಟ್ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಕರೆ ಮತ್ತು ಮಸೇಜ್ ಮಾಡುತ್ತಿದ್ದಾರೆ. ಅದಕ್ಕೆ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಹೆಸರಿನಲ್ಲಿ 9445893273 ಸಂಖ್ಯೆಯಿಂದ ಇತರರಿಗೆ ಕರೆ ಮತ್ತು ಮೆಸೇಜ್ ಮಾಡಲಾಗುತ್ತಿದೆ. ಈ ಮೊಬೈಲ್ ಸಂಖ್ಯೆಯಿಂದ ಬರುವ ಕರೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬೇಡಿ. ಏನೇ ವಿಷಯವಿದ್ದರೂ ನನ್ನದೊಂದಿಗೆ ಮಾತಾಡಿ, ಮೋಸ ಹೋಗಬೇಡಿ. ನನ್ನ ಹೆಸರಿನಲ್ಲಿ ಕರೆ ಮತ್ತು ಸಂದೇಶ ಕಳುಹಿಸುವವರು ಸೈಬರ್ ಅಪರಾಧಿಗಳು, ಅವರಿಗೆ ಕಂಡಿತಾ ಶಿಕ್ಷೆ ಇದ್ದೇ ಇರುತ್ತದೆ. ಅವರ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತನ್ನ ಹೆಸರಲಿನಲ್ಲಿ ಕರೆ, ಸಂದೇಶ ಕಳುಹಿಸುತ್ತಿರುವವರ ವಿರುದ್ದ  ರುಕ್ಮಿಣಿ ವಸಂತ್ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನ ಆದಷ್ಟು ಬೇಗ ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

Shwetha M