ಕುಂಭನಾಗಿ ಪೃಥ್ವಿರಾಜ್ ಸುಕುಮಾರನ್ ಮಾಸ್ ಲುಕ್ – ರಾಜಮೌಳಿ ಸಿನಿಮಾದಲ್ಲಿ ಸಲಾರ್ ನಟನ ಖದರ್

ಟಾಲಿವುಡ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಸೂಪರ್ ಸಿನಿಮಾದೊಂದಿಗೆ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈಗಾಗಲೇ ಈ ಸಿನಿಮಾ ಹೀರೋ ಪ್ರಿನ್ಸ್ ಮಹೇಶ್ ಬಾಬು ಅನ್ನೋದು ರಿವೀಲ್ ಆಗಿತ್ತು. ಇದೀಗ ಈ ಸಿನಿಮಾದ ಖಡಕ್ ವಿಲನ್ ಪೃಥ್ವಿರಾಜ್ ಸುಕುಮಾರನ್ ಅನ್ನೋ ವಿಚಾರ ರಿವೀಲ್ ಆಗಿದೆ. ಅದರಲ್ಲೂ ಮಾಲಿವುಡ್ ಹೀರೋನ ವಿಲನ್ ಗೆಟಪ್ಗೆ ಸ್ವತಃ ಎಸ್.ಎಸ್.ರಾಜಮೌಳಿಯೇ ಕಳೆದುಹೋಗಿದ್ದಾರೆ. ಪೃಥ್ವಿರಾಜ್ ಸುಕುಮಾರ್ನ ಮಾಸ್ ಲುಕ್ ನೋಡಿ ಖುಷಿಪಟ್ಟಿದ್ದಾರೆ ರಾಜಮೌಳಿ.
ಇದನ್ನೂ ಓದಿ:ರಕ್ಷಿತಾ OUT ರಚಿತಾರಾಮ್ IN – ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9ರಲ್ಲಿ ಏನೇನು ವಿಶೇಷತೆ ಇದೆ ಗೊತ್ತಾ?
ಪ್ರಿನ್ಸ್ ಮಹೇಶ್ ಬಾಬು ಹಾಗೂ ಎಸ್.ಎಸ್.ರಾಜಮೌಳಿ ಕಾಂಬಿನೇಷನ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. SSMB29 ಅಂತ ಹೆಸರಿಟ್ಟ ಚಿತ್ರಗದಲ್ಲಿ ಮಹೇಶ್ ಬಾಬು ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸುವುದು ಈಗಾಗಲೇ ಗೊತ್ತಾಗಿದೆ. ಇದೀಗ ಜಕ್ಕಣ್ಣ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಅದು ಪೃಥ್ವಿರಾಜ್ ಸುಕುಮಾರನ್ ಅವರದ್ದು. ಈ ಪೋಸ್ಟರ್ ನಿಜಕ್ಕೂ ಇಂಟ್ರಸ್ಟಿಂಗ್ ಆಗಿದೆ. ಗಾಲಿ ಕುರ್ಚಿ ಮೇಲೆ ಕುಳಿತ ಪೃಥ್ವಿರಾಜ್ ಸುಕುಮಾರನ್ ಇಲ್ಲಿ ಬೇರೆ ರೀತಿನೇ ಕಾಣಿಸುತ್ತಾರೆ. SSMB29 ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್ ಅನ್ನೋ ವಿಚಾರ ರಿವೀಲ್ ಆಗಿದೆ.
ಕಣ್ಣಲ್ಲಿ ಕೆಣಕುವ ಕೆಚ್ಚಿದೆ. ಗಾಲಿಯ ಚೇರ್ ಅಡ್ವಾನ್ಸ್ ಆಗಿದೆ. ಬಟನ್ ಒತ್ತಿದರೆ ಸಾಕು. ಮುಂದೆ ಹೋಗುವಂತೆ ಇದೆ. ಆದರೆ, ಈ ಕುರ್ಚಿಯ ಹಿಂದೆ ಏಲಿಯನ್ಸ್ ತರದ ಕೈಗಳೂ ಇವೆ. ಇಷ್ಟೆಲ್ಲ ಇರೋ ಈ ಒಂದು ಪಾತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಜೀವ ತುಂಬಿದ್ದಾರೆ. ಈ ಪಾತ್ರವನ್ನ ಸೃಷ್ಟಿ ಮಾಡಿರೋ ಎಸ್.ಎಸ್.ರಾಜಮೌಳಿ ಇಲ್ಲಿ ಪೃಥ್ವಿರಾಜ್ ಸುಕುಮಾರನ್ ಅಭಿನಯ ಕಂಡು ಕಳೆದೇ ಹೋಗಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಮೊದಲ ದೃಶ್ಯ ಕಂಡೇ ರಾಜಮೌಳಿ ಮಂತ್ರಮುಗ್ಧರಾಗಿದ್ದಾರೆ. ತಮ್ಮ ಚಿತ್ರದ ಪಾತ್ರಗಳನ್ನ ತಾವೇ ಕಂಡು ಕರಗಿ ಹೋಗಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರ ಅಭಿನಯವನ್ನ ಕಂಡು ಬೆರಗಾಗಿದ್ದಾರೆ. ನಾನು ಇಲ್ಲಿವರೆಗೂ ಕಂಡಿರೋ ಅತ್ಯುತ್ತಮ ನಟರಲ್ಲಿ ನೀವೂ ಒಬ್ಬರು ಅಂತಲೂ ಹೇಳಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರದ ಒಂದು ಪೋಸ್ಟರ್ ಹಂಚಿಕೊಂಡು ತಮಗೆ ಅನಿಸಿರೋದನ್ನ ಬರೆದುಕೊಂಡಿದ್ದಾರೆ. ಈಗಾಗಲೇ ಹೇಳಿದಂತೆ ಪೃಥ್ವಿರಾಜ್ ಸುಕುಮಾರನ್ ಪಾತ್ರ ಪವರ್ ಫುಲ್ ಆಗಿದೆ. ಪೃಥ್ವಿರಾಜ್ ಸುಕುಮಾರ್ನ ಪಾತ್ರಕ್ಕೆ ಕುಂಭ ಅನ್ನೋ ಹೆಸರಿಡಲಾಗಿದೆ. ಇದೀಗ ಅಭಿಮಾನಿಗಳು ಕೂಡಾ ಈ ಚಿತ್ರಕ್ಕಾಗಿ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ನೋಡಿರಿ

