ಗೆಳೆಯ ಗೆಳೆಯ ಅಂತಾ ನೈಸ್ ಆಗಿಯೇ ಗಿಲ್ಲಿಗೆ ಕಳಪೆ ಕೊಟ್ಟ ಚಂದ್ರಪ್ರಭ – ಅಶ್ವಿನಿ, ಧ್ರುವಂತ್ ಪ್ಲ್ಯಾನ್ ಸಕ್ಸಸ್
ಕಳಪೆ ಕೊಟ್ಟ ಮಾತ್ರಕ್ಕೆ ಗಿಲ್ಲಿ ಆಟ ನಿಲ್ಲುತ್ತಾ? - ಕಾಮಿಡಿ ಮಾಡೋದೇ ತಪ್ಪಾ?

ಗೆಳೆಯ ಗೆಳೆಯ ಅಂತಾ ನೈಸ್ ಆಗಿಯೇ ಗಿಲ್ಲಿಗೆ ಕಳಪೆ ಕೊಟ್ಟ ಚಂದ್ರಪ್ರಭ – ಅಶ್ವಿನಿ, ಧ್ರುವಂತ್ ಪ್ಲ್ಯಾನ್ ಸಕ್ಸಸ್ಕಳಪೆ ಕೊಟ್ಟ ಮಾತ್ರಕ್ಕೆ ಗಿಲ್ಲಿ ಆಟ ನಿಲ್ಲುತ್ತಾ? - ಕಾಮಿಡಿ ಮಾಡೋದೇ ತಪ್ಪಾ?

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ವ್ಯಕ್ತಿತ್ವದ ಆಟದಲ್ಲಿ ಯಾರಿಗೆಲ್ಲಾ ಯಾವ ರೀತಿ ವ್ಯಕ್ತಿತ್ವ ಇದೆ ಅನ್ನೋದನ್ನು ನೀವೆಲ್ಲಾ ನೋಡಿದ್ದೀರಾ. ಇಲ್ಲಿ ಒಬ್ಬರನ್ನ ಬೀಳಿಸಲು ಮತ್ತೊಬ್ಬರನ್ನು ವಿನಾ ಕಾರಣ ಮೆರೆಸುತ್ತಾರೆ. ಇದೀಗ ಕಾಮಿಡಿ ಕಲಾವಿದ ಗಿಲ್ಲಿಗೆ ಕಳಪೆ ಕೊಡಲಾಗಿದೆ. ಚಂದ್ರಪ್ರಭ ಈ ವಾರದ ಉತ್ತಮ ಪಡೆದಿದ್ದಾರೆ. ಇಲ್ಲಿ ನಿಜವಾಗಿ ಗೆದ್ದಿದ್ದು ಅಶ್ವಿನಿಗೌಡ, ಧ್ರುವಂತ್, ರಿಷಾ ಮತ್ತು ಜಾಹ್ನವಿ.

ಇದನ್ನೂ ಓದಿ:ಬಿಗ್ ಮನೆಗೆ ಮಾಳು ಬಾಸ್! – ಕಾವು, ರಘುನ ಹಿಂದಿಕ್ಕಿದ್ದೇಗೆ?

ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ವಲ್ಪವಾದರೂ ಮನರಂಜನೆ ಸಿಗುತ್ತಿದೆ ಅನ್ನೋದಕ್ಕೆ ಕಾರಣವೇ ಗಿಲ್ಲಿ ನಟನ ಹಾಸ್ಯಭರಿತ ಮಾತು. ಇದರಿಂದ ಗಿಲ್ಲಿಯನ್ನ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ ಅನ್ನೋದು ಕೂಡಾ ಸ್ಪರ್ಧಿಗಳಿಗೆ ಗೊತ್ತಿದೆ. ಹೀಗಾಗಿ ಏನಾದರೂ ನೆಪ ಮಾಡಿಕೊಂಡು ಗಿಲ್ಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಾರಿ ಪ್ಲ್ಯಾನ್‌ ಮಾಡಿ ಗಿಲ್ಲಿ ನಟ ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಗಿಲ್ಲಿ ನಟ ಹಾಗೂ ಕಾವ್ಯ ಶೈವ ಆಟದ ಬಗ್ಗೆ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಮಾತನಾಡಿಕೊಂಡಿದ್ದಾರೆ. ಗಿಲ್ಲಿ ನಟ ಹೊರಗಡೆ ಹಾಗೆ, ಹೀಗೆ ಎಂದು ಇಲ್ಲಿಯವರೇ ಮಾತಾಡ್ತಾರೆ. ಕಾವ್ಯ ಶೈವ ಅವನಿಗೆ ಟ್ರಂಪ್‌ ಕಾರ್ಡ್.‌ ಎಲ್ಲಿ ಫೂಟೇಜ್‌ ಸಿಗತ್ತೋ ಅಲ್ಲಿಗೆ ಬರ್ತಾನೆ. ಏನೂ ಮಾಡೋದಿಲ್ಲ, ಯಾವ ವಿಷಯಕ್ಕೂ ಸ್ಟ್ಯಾಂಡ್‌ ತಗೊಳೋದಿಲ್ಲ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಕಾಕ್ರೋಚ್‌ ಸುಧಿ ಕೂಡ ಮಾತನಾಡಿ, ಕಳಪೆ ಪಟ್ಟ ಸಿಗಬೇಕು ಎಂದು ಇಂದು ಆಟ ಹಾಳು ಮಾಡಿದ್ದಾನೆ, ಫೂಟೇಜ್‌ ಸಿಗತ್ತೆ ಎಂದು ಹೇಳಿದ್ದಾರೆ. ಇದಕ್ಕೆ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಕೂಡ ಸಹಮತ ನೀಡಿದ್ದಾರೆ.

ಮತ್ತೊಂದೆಡೆ ಗಿಲ್ಲಿ ನಟನ ಕಂಡರೆ ಅಶ್ವಿನಿ ಗೌಡ ಟೀಮ್ ಗೆ ಆಗುವುದಿಲ್ಲ. ಇನ್ನೊಂದೆಡೆ ಗೆಳೆಯ ಗೆಳೆಯ ಎಂದುಕೊಂಡೇ ಚಂದ್ರಪ್ರಭಾ ಕೂಡಾ ಗಿಲ್ಲಿ ವಿರುದ್ಧ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಆದರೆ, ವೀಕ್ಷಕರು ಮಾತ್ರ ಗಿಲ್ಲಿಯ ಓವರ್ ಕಾನ್ಫಿಡೆನ್ಸ್ ಗೆ ಕಳಪೆ ಪಟ್ಟ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ.

ಗಿಲ್ಲಿ ನಟ ಅವರು ಸಾಕಷ್ಟು ಹಾಸ್ಯ ಶೋಗಳನ್ನು ಮಾಡಿ ಬಂದವರು. ಬಿಗ್ ಬಾಸ್​ನಲ್ಲಿ ಏ1 ಮನರಂಜನೆ ನೀಡುತ್ತಿದ್ದಾರೆ. ಅವರ ಆಟ ಯಾವಾಗಲೂ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರ ಕಾಮಡಿ, ಮಾತು ಮತ್ತಷ್ಟು ಹೆಚ್ಚಿದೆ. ಅವರು ಮತ್ತಷ್ಟು ಕಾನ್ಫಿಡೆನ್ಸ್​ನಿಂದ ಆಟ ಆಡುತ್ತಿದ್ದಾರೆ. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿದೆ. ಗಿಲ್ಲಿ ನಟ ಅವರು ಕೆಲವು ಗಂಭೀರ ಸಮಯದಲ್ಲೂ ಕೀಟಲೆ ಮಾಡಲು ಹೋಗುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಪದೇ ಪದೇ ಅವರ ಮೇಲೆ ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಗುತ್ತಿದೆ.

Sulekha