IND Vs AUS ಕ್ಲೈಮ್ಯಾಕ್ಸ್ ಫೈಟ್ – 5ನೇ ಮ್ಯಾಚ್ ಗೆದ್ದೇ ಗೆಲ್ಲುತ್ತಾ ಭಾರತ?
ಬ್ರಿಸ್ಬೇನ್ ಪಿಚ್ ಯಾರಿಗೆ ಪ್ಲಸ್?

IND Vs AUS ಕ್ಲೈಮ್ಯಾಕ್ಸ್ ಫೈಟ್ – 5ನೇ ಮ್ಯಾಚ್ ಗೆದ್ದೇ ಗೆಲ್ಲುತ್ತಾ ಭಾರತ?ಬ್ರಿಸ್ಬೇನ್ ಪಿಚ್ ಯಾರಿಗೆ ಪ್ಲಸ್?

ಇಂಡೋ-ಆಸೀಸ್ ಟಿ-20ಐ ಸರಣಿ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನಾಲ್ಕು ಪಂದ್ಯಗಳು ಮುಗಿದಿದ್ದು ಭಾರತ 2-1ರಿಂದ ಲೀಡ್ ಪಡ್ಕೊಂಡಿದೆ. ನಾಳೆ ನಡೆಯೋ ಕೊನೇ ಮ್ಯಾಚಲ್ಲಿ ಗೆದ್ದು ಭಾರತ ಸರಣಿ ಕೈವಶ ಮಾಡಿಕೊಳ್ಳೋ ಟಾರ್ಗೆಟ್​ನಲ್ಲಿದೆ. ಅತ್ತ ಆಸ್ಟ್ರೇಲಿಯಾ ತಂಡ ಶತಾಯ ಗತಾಯ ಸರಣಿ ಸಮಬಲಕ್ಕೆ ಸರ್ವ ತಂತ್ರಗಳನ್ನೂ ರೆಡಿ ಮಾಡ್ಕೊಳ್ತಿದೆ.   ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟಿ-20ಐ ಪಂದ್ಯ ಶನಿವಾರ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಉಭಯ ತಂಡಗಳ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ನಂತರದ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಆ ಬಳಿಕ ನಡೆದಿರುವ ಎರಡೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಇದೀಗ ಮುಂದಿನ ಪಂದ್ಯವನ್ನೂ ಗೆಲ್ಲೋ ಮೂಲಕ ಭಾರತ ತಂಡ  ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ಲ್ಯಾನ್ ನಲ್ಲಿದೆ. ಇನ್ನು ನಾಳಿನ ಪಂದ್ಯ ಭಾರತಕ್ಕೆ ಮಸ್ಟ್ ವಿನ್ ಮ್ಯಾಚ್ ಆಗಿದ್ರೆ ಆಸ್ಟ್ರೇಲಿಯಾ ಪಾಲಿಗೆ ಡು ಆರ್ ಡೈ ಸಿಚುಯೇಷನ್ ಇದೆ.

ಇದನ್ನೂ ಓದಿ : ಶಾಂಭವಿ ನದಿಯಲ್ಲಿ ಕಂಬಳ ಸಂಘಟಕ, ಯುವ ಉದ್ಯಮಿ ಅಭಿಷೇಕ್ ಆಳ್ವ ಶವವಾಗಿ ಪತ್ತೆ!

ಭಾರತ ಗೆದ್ರೆ ಸರಣಿ ಕೈವಶ.. ಆಸೀಸ್ ಗೆದ್ರೆ ಸಮಬಲ!

ಇಲ್ಲೇ ನೋಡಿ ಇರೋದು ಟ್ವಿಸ್ಟ್. ಪ್ರಸ್ತುತ ಭಾರತ ಸರಣಿಯಲ್ಲಿ ಲೀಡ್ ಪಡ್ಕೊಂಡಿದೆ. ಅತ್ತ ಆಸ್ಟ್ರೇಲಿಯಾ ಹಿನ್ನಡೆಯಲ್ಲಿದೆ. ಆದ್ರೆ ಈ ಟಿ-20ಐ ಸರಣಿಯನ್ನ ಕೈವಶ ಮಾಡಿಕೊಳ್ಳೋಕೆ ಭಾರತಕ್ಕೆ ಮಾತ್ರನೇ ಅವಕಾಶ ಇರೋದು. ಆಸ್ಟ್ರೇಲಿಯಾ ಗೆದ್ರೂ ಸರಣಿ ಅವ್ರ ಪಾಲಾಗಲ್ಲ. ಯಾಕಂದ್ರೆ 2-1 ಅಂತರ ಇರೋದ್ರಿಂದ ಭಾರತ ಗೆದ್ರೆ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ತಾರೆ. ಅಕಸ್ಮಾತ್ ಆಸೀಸ್ ತಂಡ ವಿನ್ ಆದ್ರೆ 2-2ರ ಸಮಬಲದೊಂದಿಗೆ ಸರಣಿ ಮುಗಿಯುತ್ತೆ. ಹೀಗಾಗಿ ಈ ಪಂದ್ಯವನ್ನ ಗೆಲ್ಲೋಕೆ ಭಾರತಕ್ಕೆ ಅಡ್ವಾಂಟೇಜಸ್ ಜಾಸ್ತಿ ಇದೆ.

ಭಾರತದ ಗೆಲುವಿನ ಸೂತ್ರಗಳು!

  1. ಭಾರತದ ಪ್ಲೇಯಿಂಗ್ 11 ಮೋಸ್ಟ್ ಇಂಪಾರ್ಟೆಂಟ್
  2. ಟಾಪ್ ಆರ್ಡರ್ ಬ್ಯಾಟಿಂಗ್ ನಲ್ಲಿ ಮಿನಿಮಂ ಸ್ಕೋರ್
  3. ವಿಕೆಟ್ ಕೀಪರ್ ಸಂಜುನಾ & ಜಿತೇಶ್ ಶರ್ಮಾನಾ?
  4. 4ನೇ ಪಂದ್ಯದಂತೆ ಬೌಲರ್ ಗಳಿಂದ ಬೆಸ್ಟ್ ಪರ್ಫಾಮೆನ್ಸ್
  5. ಆಲ್ ರೌಂಡ್ ಪ್ರದರ್ಶನ, ಫೀಲ್ಡಿಂಗ್ ಪ್ರಾಮುಖ್ಯತೆ

ಹೀಗೆ ಇಡೀ ತಂಡ ಒಗ್ಗಟ್ಟಿನಿಂದ ಪರ್ಫಾಮ್ ಮಾಡಿದ್ರೆ ರಿಸಲ್ಟ್ ಕೂಡ ನಾವಂದುಕೊಂಡ ಹಾಗೇ ಬರುತ್ತೆ. ಹೀಗಾಗಿ ನಾಳಿನ ಮ್ಯಾಚಲ್ಲಿ ಎಲ್ರಿಂದಲೂ ಬೆಸ್ಟ್ ಪರ್ಫಾಮೆನ್ಸ್ ಬರಲೇಬೇಕು. 2024ರ ಟಿ-20 ವಿಶ್ವಕಪ್ ಬಳಿಕ ಭಾರತ ಟಿ-20ಐ ಸರಣಿ ಸೋತೇ ಇಲ್ಲ ಎನ್ನುವ ದಾಖಲೆ ಹಾಗೇ ಕಂಟಿನ್ಯೂ ಆಗ್ಬೇಕು.

ಬಿಸ್ಬೇನ್ ಪಿಚ್ ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ!

ಇನ್ನು ಐದನೇ ಪಂದ್ಯ ನಡೆಯಲಿರುವ ಬ್ರಿಸ್ಬೇನ್ ನ ಗಬ್ಬಾದಲ್ಲಿ ಆಸ್ಟ್ರೇಲಿಯಾದ ರೆಕಾರ್ಡ್ಸ್ ತುಂಬಾ ಚೆನ್ನಾಗಿದೆ.  ಈ ಮೈದಾನದಲ್ಲಿ ಭಾರತ ಒಂದೇ ಒಂದು ಟಿ-20ಐ ಪಂದ್ಯವನ್ನ ಮಾತ್ರ ಆಡಿದೆ. ಹಾಗೇ ಅದ್ರಲ್ಲಿ ಸೋಲನ್ನ ಕಂಡಿದೆ. 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಮೆನ್ ಇನ್ ಬ್ಲೂ ತಂಡ  ನಾಲ್ಕು ರನ್‌ಗಳ ಸೋಲನ್ನು ಅನುಭವಿಸಿತು. ಇನ್ನು ಆಸ್ಟ್ರೇಲಿಯಾ ತಂಡ ಈ ಗ್ರೌಂಡಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಇಲ್ಲಿ ಆಡಿದ ಎಂಟು T20I ಗಳಲ್ಲಿ ಏಳರಲ್ಲಿ ಗೆದ್ದು ಬೀಗಿದೆ. ಈ ಮೈದಾನದ ಇನ್ನೊಂದು ಸ್ಪೆಷಾಲಿಟಿ ಏನಂದ್ರೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚು ಗೆದ್ದಿದೆ. ಶೇ.73ರಷ್ಟು ಗೆಲುವಿನ ದಾಖಲೆ ಹೊಂದಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತೆ. ಇನ್ನು ಇಲ್ಲೀವರೆಗೆ ಇಂಡೋ ಆಸೀಸ್ ನಡುವೆ ಒಟ್ಟಾರೆ 34 ಟಿ-20ಐ ಪಂದ್ಯಗಳು ನಡೆದಿವೆ. ಇದ್ರಲ್ಲಿ ಭಾರತ 20 ಸಲ ಗೆದ್ರೆ ಆಸ್ಟ್ರೇಲಿಯಾ 12 ಬಾರಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳು ರಿಸಲ್ಟ್ ಕಂಡಿಲ್ಲ.

Shantha Kumari