ಕಾಗೆಗಳು ಮನೆಗೆ ಬರುವುದು ಶುಭ ಸೂಚನೆಯೇ.? ಅಶುಭ ಸೂಚನೆಯೇ.?

ಕಾಗೆಗಳು ನಮಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಶುಭ ಅಥವಾ ಅಶುಭ ಸೂಚನೆಗಳನ್ನು ನೀಡುವಂತಹ ಪಕ್ಷಿಯಾಗಿದೆ. ಕಾಗೆಗಳು ಮನೆಗೆ ಬಂದರೆ ಅದು ಯಾವೆಲ್ಲಾ ಸೂಚನೆಗಳು ನೀಡುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮನೆಗೆ ಕಾಗೆಗಳು ಬಂದರೆ ಯಾವ ಅರ್ಥವನ್ನು ನೀಡುತ್ತದೆ.? ಕಾಗೆಗಳು ಮನೆಗೆ ಬರುವುದು ಶುಭ ಸೂಚನೆಯೇ.? ಅಶುಭ ಸೂಚನೆಯೇ.?
ಭಾರತೀಯ ಸಂಸ್ಕೃತಿಯಲ್ಲಿ ಕಾಗೆಗೆ ವಿಶೇಷವಾದ ಸ್ಥಾನವಿದೆ. ಕಾಗೆಗಳು ನಮಗೆ ನಮ್ಮ ಭವಿಷ್ಯದಲ್ಲಿ ಎದುರಾಗಬಹುದಾದ ಶುಭ ಹಾಗೂ ಅಶುಭ ಘಟನೆಗಳ ಕುರಿತು ಸೂಚನೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಾಗಿ ನೋಡುವ ಪಕ್ಷಿಯೆಂದರೆ ಅದು ಕಾಗೆ. ನಾವು ಎಲ್ಲಿಗೆ ಹೋದರೂ ಕಾಗೆಯನ್ನು ನೋಡಬಹುದು. ಕಾಗೆಗಳು ತಾವಾಗಿಯೇ ನಿಮ್ಮ ಮನೆಯನ್ನು ಪ್ರವೇಶಿಸಿದರೆ ಅದು ನಿಮಗೆ ಮುಂದಿನ ದಿನಗಳ ಬಗ್ಗೆ ಅನೇಕ ರೀತಿಯಾದ ಅರ್ಥವನ್ನು ನೀಡುತ್ತದೆ. ಕೆಲವೊಮ್ಮೆ ಈ ಘಟನೆಯು ನಿಮಗೆ ಶುಭ ಸೂಚನೆಯನ್ನು ನೀಡಿದರೆ, ಇನ್ನು ಕೆಲವೊಮ್ಮೆ ಅಶುಭ ಸೂಚನೆಯನ್ನು ನೀಡುತ್ತದೆ.
ಮುಂಜಾನೆ ಸಮಯದಲ್ಲಿ ನೀವು ಎದ್ದು ಮನೆಯಿಂದ ಹೊರಗಡೆ ಬರುವಂತಹ ಸಂದರ್ಭದಲ್ಲಿ ಕಾಗೆಯೊಂದು ನಿಮ್ಮ ಮನೆಯ ಉತ್ತರ ದಿಕ್ಕಿನಿಂದ ಪೂರ್ವ ದಿಕ್ಕಿಗೆ ಹಾರಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಗೆ ಯಾವುದೋ ಓರ್ವ ಅತಿಥಿ ಆಗಮಿಸಲಿದ್ದಾರೆ ಎನ್ನುವ ಸೂಚನೆಯನ್ನು ನೀಡುತ್ತದೆ. ಅತಿಥಿಯ ಆಗಮನದ ಸೂಚನೆ ಇದಾಗಿದೆ. ಅತಿಥಿಯಾಗದೇ ಇದ್ದರೂ ನಿಮ್ಮ ಯಾವುದೋ ಓರ್ವ ಆಪ್ತ ಮಿತ್ರ ನಿಮ್ಮ ಮನೆಗೆ ಬರಲಿದ್ದಾರೆ ಎಂಬುದನ್ನು ಇದು ಹೇಳುತ್ತದೆ.
ನೀವು ಯಾವುದೋ ಒಂದು ಉದ್ಯೋಗದ ಸಂದರ್ಶನಕ್ಕಾಗಿ ಹೋಗಲು ಮನೆಯಿಂದ ಹೊರಗಡೆ ಬರುವಾಗ ಅಥವಾ ಯಾವುದೋ ಒಂದು ಶುಭ ಕಾರ್ಯಕ್ರಮಕ್ಕಾಗಿ ಮನೆಯಿಂದ ಹೊರಡುವಾಗ ಕಾಗೆಗಳು ಪಶ್ಚಿಮ ದಿಕ್ಕಿನತ್ತ ಹಾರಿದರೆ ಅದನ್ನು ಶುಭ ಸಂಕೇತವೆಂದು ಹೇಳಲಾಗುತ್ತದೆ. ಕಾಗೆಗಳು ಈ ದಿಕ್ಕಿಗೆ ಹಾರುವುದರಿಂದ ನೀವು ಹೋಗುತ್ತಿರುವ ಕೆಲಸದಲ್ಲಿ ಯಶಸ್ಸು ಪ್ರಾಪ್ತವಾಗುವುದು. ಇದಲ್ಲದೆ, ವರ್ಷಗಳ ಕಾಲ ಬಾಕಿ ಇರುವ ಕೆಲಸವೂ ಪೂರ್ಣಗೊಳ್ಳಬಹುದು.
ನಿಮ್ಮ ಮನೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾಗೆಗಳು ಒಟ್ಟುಗೂಡಿ ಜೋರಾಗಿ ಕಿರುಚಲು ಪ್ರಾರಂಭಿಸಿದರೆ, ನೀವು ಜಾಗರೂಕರಾಗಿರಬೇಕು. ಯಾಕೆಂದರೆ ಇದು ನಿಮಗೆ ಶುಭ ಸೂಚನೆಯನ್ನು ನೀಡುವುದಿಲ್ಲ. ವಾಸ್ತವವಾಗಿ, ಈ ಕಾಗೆಗಳು ಕೆಲವು ಅಹಿತಕರ ಘಟನೆಗಳನ್ನು ಸೂಚಿಸುತ್ತವೆ. ಇದು ನಿಮ್ಮ ಕುಟುಂಬಕ್ಕೆ ದೊಡ್ಡ ಬಿಕ್ಕಟ್ಟು ಅಥವಾ ಅಪಾಯ ಸಂಭವಿಸಲಿದೆ ಎಂಬುದರ ಸಂಕೇತವೂ ಆಗಿರಬಹುದು. ಹಾಗಾಗಿ ಇದರ ಬಗ್ಗೆ ಎಚ್ಚರಿಕೆಯಿಂದಿರಿ.
ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಕಾಗೆ ಬಂದು ಕುಳಿತರೆ, ಅದು ಅಶುಭವೂ ಆಗಿರಬಹುದು. ಈ ಚಿಹ್ನೆಯು ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂಬುದರ ಸೂಚನೆಯಾಗಿದೆ. ಅಂತಹ ಸಂದರ್ಭದಲ್ಲಿ, ನೀವು ಪಿತೃ ದೋಷವನ್ನು ಸಹ ಎದುರಿಸಬೇಕಾಗಬಹುದು. ಅದೇ ಕಾಗೆಗಳು ನೀವು ನೀಡಿದ ಆಹಾರವನ್ನು ತಿಂದರೆ ಅದು ಪಿತೃಗಳು ನಿಮ್ಮ ಮೇಲೆ ಸಂತುಷ್ಟರಾಗಿದ್ದಾರೆ ಎಂಬುದನ್ನು ಹೇಳುತ್ತದೆ. ಇದಲ್ಲದೆ, ನೀವು ನಿಮ್ಮ ಮನೆಯ ಛಾವಣಿ ಅಥವಾ ಬಾಲ್ಕನಿಯಲ್ಲಿ ನೀರನ್ನು ಇಟ್ಟರೆ ಮತ್ತು ಕಾಗೆಗಳು ಬಂದು ಅದನ್ನು ಕುಡಿದರೆ, ನೀವು ಶೀಘ್ರದಲ್ಲೇ ಶ್ರೀಮಂತರಾಗಲಿದ್ದೀರಿ ಎಂಬುದರ ಸಂಕೇತವಾಗಿದೆ.

ನೋಡಿರಿ

