ಈ ಐದು ಪಾನೀಯಗಳನ್ನ ಕುಡಿದ್ರೆ ಬೇಗನೆ ಹೊಟ್ಟೆ ಕರಗುತ್ತೆ! – ಮನೆಯಲ್ಲೇ ತಯಾರಿಸಬಹುದು ಸೂಪರ್‌ ಡ್ರಿಂಕ್!

ಈ ಐದು ಪಾನೀಯಗಳನ್ನ ಕುಡಿದ್ರೆ ಬೇಗನೆ ಹೊಟ್ಟೆ ಕರಗುತ್ತೆ! – ಮನೆಯಲ್ಲೇ ತಯಾರಿಸಬಹುದು ಸೂಪರ್‌ ಡ್ರಿಂಕ್!

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಹೊಟ್ಟೆಯದ್ದೇ ಚಿಂತೆ. ದಿನ ಕಳೆದಂತೆ ಹೊಟ್ಟೆ ಮುಂದೆ ಬರ್ತಾನೆ ಇದೆ. ಏನ್‌ ಮಾಡಿದ್ರೂ ಹೊಟ್ಟೆ ಕರಗುತ್ತಿಲ್ಲ ಅನ್ನೋದು ಎಲ್ಲರ ಗೋಳು. ಆದ್ರೆ ಮನೆಯಲ್ಲಿಯೇ ಈ ಪಾನೀಯಗಳನ್ನ ನೀವು ಸೇವಿಸಿದ್ರೆ, ಹೊಟ್ಟೆ ಬೇಗ ಕರಗುತ್ತಿದೆ. ಮನೆಯಲ್ಲೇ ತಯಾರಿಸಬಹುದಾದ ಕೆಲವು ಪಾನೀಯಗಳ ಸಹಾಯದಿಂದ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.

ಇದನ್ನೂ ಓದಿ: ಶುಂಠಿ ಟೀ ಕುಡಿದ್ರೆ ಈ ಸಮಸ್ಯೆ ಮಾಯ! – ಟೀ ಬೆಳಗ್ಗೆ ಕುಡಿಬೇಕಾ? ಸಂಜೆ ಕುಡಿಬೇಕಾ?

ಕಠಿಣ ಆಹಾರ ಪದ್ಧತಿ ಅನುಸರಿಸುವುದು, ಜಿಮ್, ವ್ಯಾಯಾಮ ಮಾಡಿದರೂ ತೂಕ ಇಳಿಕೆ ಆಗುತ್ತಲೇ ಇಲ್ಲ. ಹೊಟ್ಟೆಯ ಬೊಜ್ಜು ಕರಗುತ್ತಲೇ ಇಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಪ್ರತಿದಿನ ಈ ರೀತಿಯ ಪಾನೀಯಗಳನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು. ಅಂತಹ ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಜೀರಿಗೆ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಸ್ವಲ್ಪ ಬಿಸಿ ಮಾಡಿ ಶೋಧಿಸಿ ಕುಡಿಯಿರಿ. ಇದು ಹೊಟ್ಟೆಯಲ್ಲಿ ಜಟಿಲವಾಗಿರುವ ಕೊಬ್ಬನ್ನು ಕರಗಿಸಿ ಚಪ್ಪಟೆಯಾದ ಬೆಲ್ಲಿ ಪಡೆಯಲು ಸಹಕಾರವಾಗಿದೆ.

ಒಂದು ಸ್ಪೂನ್ ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹಾಗೆಯೇ ಜಗಿದು ತಿನ್ನುವುದರಿಂದ ಕೆಲವೇ ದಿನಗಳಲ್ಲಿ ತೂಕ ಕಡಿಮೆಯಾಗುತ್ತದೆ.

ಪ್ರತಿದಿನ ಮಧ್ಯಾಹ್ನ ಊಟ ಮಾಡಿದ ಬಳಿಕ ಮಜ್ಜಿಗೆಯಲ್ಲಿ ಸ್ವಲ್ಪ ಇಂಗು ಸೇರಿಸಿ ಅದನ್ನು ಹೆಚ್ಚಾಗಿ ಕಡೆದು ಕುಡಿಯಿರಿ. ಇದು ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.

ಸಂಜೆ ವೇಳೆ ನಾರ್ಮಲ್ ಕಾಫಿ, ಟೀ ಕುಡಿಯುವ ಬದಲಿಗೆ ಗ್ರೀನ್ ಟೀ ಕುಡಿಯುವುದರಿಂದ ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಮುಖ್ಯವಾಗಿ ತೂಕ ಇಳಿಸಿಕೊಳ್ಳು ಬಯಸುವವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ.

ರಾತ್ರಿ ಮಲಗುವ ಮೊದಲು ದಾಲ್ಚಿನ್ನಿ ಚಹಾ ತಯಾರಿಸಿ ಕುಡಿಯುವುದರಿಂದ ದೇಹದಲ್ಲಿ ಬೇಡದ ಹೆಚ್ಚುವರಿಯಾಗಿ ಶೇಖರವಾಗಿರುವ ಕೊಬ್ಬನ್ನು ಸುಡಲು ಇದು ಪರಿಣಾಮಕಾರಿ ಆಗಿದೆ.

Shwetha M