ಏಕದಿನ ಸರಣಿಯಿಂದ ಹೊರಗುಳಿದ ಕೇನ್ ವಿಲಿಯಮ್ಸನ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಮುಂದಿನ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ನಿಮಿತ್ತ ಟೆಸ್ಟ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಲು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ನವೆಂಬರ್ 16 ರಂದು ಕ್ರೈಸ್ಟ್ ಚರ್ಚ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಮಿಚೆಲ್ ಸ್ಯಾಂಟ್ನರ್ ಅವರು ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದಿದ್ದ ಅನುಭವಿ ಹಾಗೂ ಯುವ ಆಟಗಾರರನ್ನು ಕೂಡ ಈ ಸರಣಿಗೂ ಪರಿಗಣಿಸಲಾಗಿದೆ.
ಇದನ್ನೂ ಓದಿ: ಬಿಗ್ ಮನೆಗೆ ಮಾಳು ಬಾಸ್! – ಕಾವು, ರಘುನ ಹಿಂದಿಕ್ಕಿದ್ದೇಗೆ?
ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರು ನ್ಯೂಜಿಲೆಂಡ್ ತಂಡಕ್ಕೆ ಮರಳಿದ್ದಾರೆ. ಗಾಯದ ಕಾರಣ ಫಿನ್ ಆಲೆನ್ ಹಾಗೂ ಲಾಕಿ ಫರ್ಗ್ಯೂಸನ್ ಅವರು ವಿಂಡೀಸ್ ಏಕದಿನ ಸರಣಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ. ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಆಯ್ಕೆ ಮಾಡಿರುವ ಸಂಯೋಜನೆಯ ಬಗ್ಗೆ ಹೆಡ್ ಕೋಚ್ ರಾಬ್ ವಾಲ್ಟರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. “ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ನಾವು ಜಾಸ್ತಿ ಬಾಕ್ಸ್‌ಗಳನ್ನು ಟಿಕ್ ಮಾಡಿರಲಿಲ್ಲ. ಆದರೆ, ವಿಶ್ವದ ಅತ್ಯಂತ ಹೆಚ್ಚಿನ ವೇಗ ಹಾಗೂ ಬೌನ್ಸರ್ ಹೊಂದಿರುವ ಪಿಚ್‌ಗಳಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ರೈತರ ಪರವಾಗಿ ನಿಲ್ಲುತ್ತೇವೆ, ರೈತರ ಸಮಸ್ಯೆ ಬಗೆಹರಿಸಲು ನೀವೂ ಸಿದ್ಧರಿರಬೇಕು – ಸಿಎಂ ಸಿದ್ದರಾಮಯ್ಯ
“ಅವರು ಅಲ್ಪಾವಧಿಯಲ್ಲಿಯೇ ತಂಡಕ್ಕೆ ಬಂದು ಆ ಮಟ್ಟದಲ್ಲಿ ಪ್ರದರ್ಶನ ನೀಡುವುದನ್ನು ನೋಡುವುದು ಸಂತೋಷ ತಂದಿದೆ. ಗುಂಪಿನಿಂದ ದೂರವಿದ್ದು ಅವರು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ಇದು ಸಾಕ್ಷಿಯಾಗಿದೆ,” ಎಂದು ಹೇಳಿದ ಅವರು, “ಅವಕಾಶ ಸಿಕ್ಕಾಗ ಕಷ್ಟಪಟ್ಟು ಕೆಲಸ ಮಾಡುವ ಮತ್ತು ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪ್ರತಿಫಲ ನೀಡುತ್ತಲೇ ಇರುವುದು ಅದ್ಭುತವಾಗಿದೆ ಮತ್ತು ಮತ್ತೊಂದು ಪ್ರಮುಖ ಸರಣಿಯಲ್ಲಿ ಅವರು ನಮಗೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ನಮಗೆ ತಿಳಿದಿದೆ,” ಎಂದು ತಿಳಿಸಿದ್ದಾರೆ.
“ವೆಸ್ಟ್ ಇಂಡೀಸ್ ತಂಡದ ಆಟಗಾರರೆಲ್ಲರೂ ಅಪಾಯಕಾರಿ ಆಟಗಾರರು ಹಾಗೂ ಮ್ಯಾಚ್ ವಿಲ್ಲರ್‌ಗಳು. ಅವರು ಯಾವುದೇ ಸ್ವರೂಪದ ಪಂದ್ಯವನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಈ ಸರಣಿಯಲ್ಲಿ ನಮಗೆ ಕಠಿಣ ಪೈಪೋಟಿ ಎದುರಾಗಲಿದೆ,” ಎಂದು ರಾಬ್ ವಾಲ್ಟರ್ ತಿಳಿಸಿದ್ದಾರೆ.

ನೋಡಿರಿ

