ಕರ್ನಾಟಕದಲ್ಲಿ ಪದೇ ಪದೇ ಕಾಡು ಪ್ರಾಣಿಗಳ ಅಟ್ಯಾಕ್ – ಮೈಸೂರಿನಲ್ಲಿ ಹುಲಿ ದಾಳಿಗೆ ಮೊತ್ತೊಬ್ಬ ರೈತ ಬಲಿ

ಕರ್ನಾಟಕದಲ್ಲಿ ಪದೇ ಪದೇ ಕಾಡು ಪ್ರಾಣಿಗಳ ಅಟ್ಯಾಕ್ – ಮೈಸೂರಿನಲ್ಲಿ ಹುಲಿ ದಾಳಿಗೆ ಮೊತ್ತೊಬ್ಬ ರೈತ ಬಲಿ

ರಾಜ್ಯದಲ್ಲಿ ಕಾಡು ಪ್ರಾಣಿಗಳಿಗೆ ಹವಾಳಿ ಹೆಚ್ಚಾಗಿದ್ದು, ಆನೆ ಮತ್ತು ಹುಲಿ ದಾಳಿಗೆ ರೈತರು ಬಲಿಯಾಗುತ್ತಿದ್ದಾರೆ.  ಅದರಂತೆ ಇಂದು ಬೆಳಗ್ಗೆ ( ಶುಕ್ರವಾರ) ಹುಲಿ ದಾಳಿಗೆ ರೈತನೊರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಳೆ ಹೆಗ್ಗೂಡಿನಲ್ಲಿ ನಡೆದಿದೆ. ಮೃತರನ್ನು ರೈತ ದಂಡನಾಯಕ (58) ಎಂದು ಗುರುತಿಸಲಾಗಿದೆ. ರೈತ ದಂಡನಾಯಕ ( ಇಂದು) ಶುಕ್ರವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಮೃತ ದಂಡನಾಯಕನ ಹೆಂಡತಿ  ಬೆಳಗ್ಗೆ 9 ಗಂಟೆಗೆ ತನ್ನ ಗಂಡನಿಗೆ ಉಪಹಾರ ತೆಗೆದುಕೊಂಡು ಹೋದ ವೇಳೆ ಹುಲಿ ದಾಳಿ ಮಾಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: POKಯಲ್ಲಿ ಪಾಕ್ ಸರ್ಕಾರದ ವಿರುದ್ಧ ಜೆನ್‌ ಝೀಗಳ ಪ್ರತಿಭಟನೆ – ಉರುಳುತ್ತಾ ಸರ್ಕಾರ?

ಸರಗೂರು ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ಮೂವರು ರೈತರು ಹುಲಿ ದಾಳಿಗೆ ಮೃತಪಟ್ಟಿದ್ದಾರೆ. ಹುಲಿ ದಾಳಿ ಉಪಟಳಕ್ಕೆ ಈ ಭಾಗದ ಜನರು ಭಯಭೀತರಾಗಿದ್ದು, ಜೀವ ಕೈಯಲ್ಲಿಡಿದು ಬದುಕುವಂತಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

8 ತಿಂಗಳ ಹಿಂದೆ ಡಂಡ ನಾಯ್ಕ ಮೇಲೆ ಆನೆ ದಾಳಿ ನಡೆಸಿತ್ತು. ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಹುಲಿ ದಾಳಿಗೆ ದಂಡನಾಯ್ಕ ಬಲಿಯಾಗಿದ್ದಾರೆ. ಪದೇಪದೆ ಹುಲಿ ದಾಳಿ ಹಿನ್ನಲೆ ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದು, ಕೆಲಸಕ್ಕೆ ಹೋಗಲೂ ಸಾದ್ಯವಾಗದ ಪರಿಸ್ಥಿತಿ ಉಂಟಾಗಿದೆ. ಹುಲಿ ದಾಳಿಯಿಂದ ಈಗಾಗಲೇ ಹಲವು ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.  ಪದೇ ಪದೇ ಘಟನೆ ನಡೆದ್ರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Kishor KV