ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ಮುಹೂರ್ತ ಫಿಕ್ಸ್! – ಈ ಪ್ಯಾಲೇಸ್‌ನಲ್ಲಿ ಕಿರಿಕ್ ಬ್ಯೂಟಿ ಅದ್ದೂರಿ ವಿವಾಹ!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಸುತ್ತಿದ್ದಾರೆ.. ಡೇಟಿಂಗ್ ಮಾಡ್ತಿದ್ದಾರೆ ಎಂಬ ಮಾತು ಕೇಳಿಬರುತ್ತಲೇ ಇದೆ. ಕಳೆದ ತಿಂಗಳು ಇವರಿಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆಪ್ತರು-ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಆಗಿದೆ ಎನ್ನಲಾಗಿತ್ತು. ಇದೀಗ ಇವರಿಬ್ಬರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಡೇಟ್ ರಿವೀಲ್ ಆಗಿದೆ.
ಇದನ್ನೂ ಓದಿ: ಇರುವೆಗೆ ಹೆದರಿ ಮಹಿಳೆ ಆತ್ಮಹ*ತ್ಯೆ! – ಮಹಿಳೆ ಬರೆದ ಪತ್ರದಲ್ಲಿತ್ತು ಶಾಕಿಂಗ್ ವಿಚಾರ!
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆದಿದೆ ಎಂಬ ಮಾತು ಕೇಳಿಬರ್ತಿದೆ. ಇಬ್ಬರ ಕೈಯಲ್ಲೂ ವಿಶೇಷ ರಿಂಗ್ ಕಾಣಿಸ್ತಿದೆ. ಆದ್ರೆ ರಶ್ಮಿಕಾ ಇದು ನನಗೆ ತುಂಬಾ ಸ್ಪೆಷಲ್ ರಿಂಗ್ ಅಂತಾ ಮಾತ್ರ ಹೇಳಿಕೊಂಡಿದ್ದಾರೆ ಹೊರತು, ಪ್ರೀತಿ, ಎಂಗೇಜ್‌ಮೆಂಟ್ ಕುರಿತು ಬಾಯ್ಬಿಟ್ಟಿಲ್ಲ. ಇದೀಗ ರಶ್ಮಿಕಾ ವಿಜಯ್ ಮದುವೆ ಡೇಟ್ ಫಿಕ್ಸ್ ಆಗಿದೆ. ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅವರು ಮುಂದಿನ ವರ್ಷ ಫೆಬ್ರವರಿ 26ರಂದು ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಈ ಮದುವೆಗಾಗಿ ಇವರು ರಾಜಸ್ಥಾನದ ಉದಯಪುರ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ವಿವಾಹಕ್ಕೆ ಉದಯಪುರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಕೂಡ ಇದೇ ಆಯ್ಕೆ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ರಶ್ಮಿಕಾ ಮಂದಣ್ಣ ನಟನೆಯ ‘ಥಾಮಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಖುಷಿ ಅಭಿಮಾನಿಗಳಿಗೆ ಇದೆ. ಈಗ ರಶ್ಮಿಕಾ ಮಂದಣ್ಣ ಒಪ್ಪಿಕೊಂಡ ಕೆಲವು ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದಾದ ಬಳಿಕ ರಶ್ಮಿಕಾ ಮಂದಣ್ಣ ಅವರು ವಿವಾಹ ಕಾರ್ಯದಲ್ಲಿ ಬ್ಯುಸಿ ಆಗಲಿದ್ದಾರೆ ಎಂದು ಎನ್ನಲಾಗ್ತಿದೆ. ರಶ್ಮಿಕಾ ಮಂದಣ್ಣ ಜನಪ್ರಿಯತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೆ. ಅವರು ಮದುವೆ ಆದ ಬಳಿಕ ಆಫರ್ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ನೋಡಿರಿ

