ಬೌಲಿಂಗ್ ನಲ್ಲಿ ಆಸೀಸ್ ಬೆವರಿಳಿಸಿದ ಬೌಲರ್ಸ್ – 4ನೇ ಟಿ-20ಐ ಪಂದ್ಯ ಗೆದ್ದ ಭಾರತ

ಬೌಲಿಂಗ್ ನಲ್ಲಿ ಆಸೀಸ್ ಬೆವರಿಳಿಸಿದ ಬೌಲರ್ಸ್ – 4ನೇ ಟಿ-20ಐ ಪಂದ್ಯ ಗೆದ್ದ ಭಾರತ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20ಐ ಸರಣಿ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸದ್ಯ ನಾಲ್ಕು ಪಂದ್ಯಗಳು ಮುಗಿದಿದ್ದು ಈ ಸರಣಿ ಸೋಲು ಗೆಲುವಿನಲ್ಲಿ ಮುಗಿಯುತ್ತೋ ಅಥವಾ ಡ್ರಾನಲ್ಲಿ ಕೊನೆಗೊಳ್ಳುತ್ತಾ ಅನ್ನೋದನ್ನ ಕೊನೇ ಮ್ಯಾಚ್ ಡಿಸೈಡ್ ಮಾಡುತ್ತೆ. ಗೋಲ್ಡ್ ಕೋಸ್ಟ್​ನಲ್ಲಿ ನಡೆದ ನಾಲ್ಕನೇ ಟಿ-20ಐ ಪಂದ್ಯವನ್ನ ಭಾರತ ಗೆದ್ದು ಬೀಗಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡಿರ್ಲಿಲ್ಲ. ಅಂದ್ರೆ ಮೂರನೇ ಪಂದ್ಯಕ್ಕಿದ್ದ ಆಟಗಾರರನ್ನೇ ಕಂಟಿನ್ಯೂ ಮಾಡಿದ್ರು. ಬಟ್ ಆಸ್ಟ್ರೇಲಿಯಾ ತಂಡ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಌಂಡ್ ಈ ಮ್ಯಾಚಲ್ಲೂ ಭಾರತ ಟಾಸ್ ಸೋಲ್ತು. ಬೆನ್ನಿಗಂಟಿದ ಬೇತಾಳದಂತೆ ಕಾಡ್ತಿರೋ ಟಾಸ್ ಸೋಲು ಈ ಮ್ಯಾಚಲ್ಲೂ ಕಾಡಿತ್ತು. ಹೀಗಾಗಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಯ್ತು.

ಇದನ್ನೂ ಓದಿ : 

ಪವರ್ ಪ್ಲೇ ಸೂಪರ್.. ನೆಕ್ಸ್ ಟ್ ತಿಣುಕಾಡಿದ ಬ್ಯಾಟರ್ಸ್!

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತದ ಪರ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ನಡ್ದಿತ್ತು. ಭಾರತದ ಪರ ಸದ್ಯಕ್ಕೆ ಟಿ-20ಐನಲ್ಲಿ ಕನ್ಸಿಸ್ಟೆನ್ಸಿ ಬ್ಯಾಟಿಂಗ್ ಪರ್ಫಾಮೆನ್ಸ್ ಅಂತಾ ಬರ್ತಿರೋದು ಅಭಿಷೇಕ್ ಶರ್ಮಾರಿಂದ ಮಾತ್ರನೇ. ಫಿಫ್ಟೀಸ್, ಹಂಡ್ರೆಡ್ ಬರ್ತಿಲ್ಲ ಅಂದ್ರೂ ಸಿಂಗಲ್ ಡಿಜಿಟ್​ಗಂತೂ ವಿಕೆಟ್ ಕೊಡಲ್ಲ. ಇನ್ನು ನಾಲ್ಕನೇ ಪಂದ್ಯದಲ್ಲಿ ಎಂದಿನಂತೆ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಇಬ್ಬರ ಪಾರ್ಟ್ನರ್ ಶಿಪ್​ನಲ್ಲಿ ಫಿಫ್ಟಿ ಪ್ಲಸ್ ರನ್ಸ್ ಕೂಡ ಬಂತು. ಬಟ್ 28 ರನ್ ಗಳಿಸಿದ್ದ ಅಭಿ ಌಡಂ ಝಂಪಾ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು. ಌಂಡ್ ನೆಕ್ಸ್​ಟ್ ಶಾಕಿಂಗ್ ಎನ್ನುವಂತೆ ಶಿವಂ ದುಬೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರ್ತಾರೆ. ಗಿಲ್ ಌಂಡ್ ದುಬೆ 30+ ಜೊತೆಯಾಟ ಆಡ್ತಾರೆ. ಆದ್ರೆ 22 ರನ್​ಗಳಿಗೆ ದುಬೆ ಪೆವಿಲಿಯನ್ ಸೇರ್ತಾರೆ. ಮೂರನೇ ವಿಕೆಟ್​ಗೆ ಗಿಲ್ ಌಂಡ್ ಸೂರ್ಯ ನಡುವೆ ಮತ್ತೆ 30ಪ್ಲಸ್ ರನ್ಸ್ ಌಡ್ ಆಯ್ತು. ಬಟ್ 46 ರನ್ ಗಳಿಸಿದ್ದ ಗಿಲ್ ಔಟ್ ಆಗಿ ಅರ್ಧಶತಕ ವಂಚಿತರಾಗ್ತಾರೆ. ಌಂಡ್ ನೆಕ್ಸ್​ಟ್ ಯಾವ ಪಾರ್ಟ್ನರ್​ಶಿಪ್ ಕೂಡ ಬಿಲ್ಡ್ ಆಗ್ಲಿಲ್ಲ. ಸೂರ್ಯ 20 ರನ್, ತಿಲಕ್ ವರ್ಮಾ 5, ಜಿತೇಶ್ 3, ವಾಷಿಂಗ್ಟನ್ ಸುಂದರ್ 12 ರನ್ಸ್ ಹೊಡೆದ್ರು. ಇನ್ನು ಅಕ್ಷರ್ ಪಟೇಲ್ 21 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಈ ಮೂಲಕ ಭಾರತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ಸ್ ಕಲೆ ಹಾಕಿ 168 ರನ್​ಗಳ ಟಾರ್ಗೆಟ್ ನೀಡಿತು. ಆಸೀಸ್ ಪರ ಌಡಂ ಝಂಪಾ ಮತ್ತು ನಾಥನ್ ಎಲ್ಲಿಸ್ ಬೌಲಿಂಗ್​ನಲ್ಲಿ ಡಾಮಿನೇಟ್ ಮಾಡಿದ್ದು ತಲಾ ಮೂರು ಮೂರು ವಿಕೆಟ್ಸ್ ಬೇಟೆಯಾಡಿದ್ರು. ಬಟ್ ಬ್ಯಾಟಿಂಗ್​ಗೆ ಬಂದ ಆಸೀಸ್ ಆಟಗಾರರಿಗೆ ಭಾರತೀಯ ಬೌಲರ್ಸ್ ಅಕ್ಷರಶಃ ನೀರು ಕುಡ್ಸಿದ್ರು.

ಇನ್ನೂ 10 ಬಾಲ್ ಗಳು ಇರುವಂತೆಯೇ ಆಸೀಸ್ ಆಲೌಟ್!

168 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಆಸೀಸ್ ಗೆ ಭಾರತೀಯ ಬೌಲರ್ ಗಳು ಬೆಂಡೆತ್ತಿ ಬ್ರೇಕ್ ಹಾಕಿದ್ರು. ಫಸ್ಟ್ ವಿಕೆಟ್ ಗೆ 37 ರನ್ಸ್ ಬಂತು. ನೆಕ್ಸ್ ಟ್ 30 ರನ್ಸ್ ಪಾಟ್ನರ್ ಶಿಪ್ ಬಂತು. ನಂತ್ರ ಯಾರೂ ಸೆಟಲ್ ಆಗ್ಲೇ ಇಲ್ಲ. 18.2 ಓವರ್ ಗಳಲ್ಲಿ 119 ರನ್ ಗಳಿಸಿ ಆಲೌಟ್ ಆದ್ರು. ಹಿಗಾಗಿ ಇನ್ನೂ 10 ಎಸೆತ ಬಾಕಿ ಇರುವಂತೆಯೇ 48 ರನ್ ಗಳಿಂದ ಆಸ್ಟ್ರೇಲಿಯಾ ಸೋಲೊಪ್ಪಿಕೊಳ್ತು.

ಭಾರತಕ್ಕೆ ಏನೆಲ್ಲಾ ಪ್ಲಸ್ ಆಯ್ತು?

  1. ಟಾಸ್ ಸೋತ್ರೂ ಬ್ಯಾಟಿಂಗ್ ನಲ್ಲಿ ಮಿನಿಮಂ ಸ್ಕೋರ್
  2. ಬ್ಯಾಟಿಂಗ್ ನಲ್ಲಿ ಓಕೆ ಅನ್ಸಿದ್ರೂ ಬೌಲಿಂಗ್ ಬೊಂಬಾಟ್
  3. ಮ್ಯಾಟ್ ಶಾರ್ಟ್ ಡಿಆರ್ ಎಸ್ ವಿಕೆಟ್ ಬ್ರೇಕ್ ಥ್ರ್ಯೂ
  4. ಅಕ್ಷರ್ ಪಟೇಲ್ ಆಲ್ ರೌಂಡ್ ಆಟ ( 21 ರನ್, 2/20 )
  5. ಬಿಗ್ ವಿಕೆಟ್ಸ್ ಬೇಟೆಯಾಡಿದ ಶಿವಂ ದುಬೆ
  6. ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್
  7. ಪವರ್ ಪ್ಲೇ ಆದ್ಮೇಲೆ ರನ್ಸ್ ಕೊಡದ ಬೌಲರ್ಸ್
  8. ಪಾರ್ಟ್ನರ್ ಶಿಪ್ ಬಿಲ್ಡ್ ಆಗೋಕೆ ಬಿಡಲಿಲ್ಲ
  9. ಟೀಂ ಇಂಡಿಯಾ ಆಲ್ ರೌಂಡ್ ಪ್ರದರ್ಶನ

ಆಸ್ಟ್ರೇಲಿಯಾ ಸರಣಿ ಗೆಲ್ಲಲ್ಲ.. ಭಾರತ ಸರಣಿ ಸೋಲಲ್ಲ!

ನಾಲ್ಕನೇ ಟಿ-20ಐ ಮ್ಯಾಚ್ ಗೆದ್ದಿರೋದ್ರಿಂದ ಭಾರತ ಸದ್ಯಕ್ಕೆ ಸರಣಿ ಸೋಲೋದನ್ನಂತೂ ತಪ್ಪಿಸಿಕೊಂಡಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ವಾಶ್​ಔಟ್ ಆಗಿತ್ತು. ಌಂಡ್ ಸೆಕೆಂಡ್ ಮ್ಯಾಚಲ್ಲಿ ಆಸ್ಟ್ರೇಲಿಯಾ ಗೆದ್ರೆ ಮೂರನೇ ಮ್ಯಾಚಲ್ಲಿ ಭಾರತ ವಿನ್ ಆಗಿತ್ತು. ಸೋ ಈಗ ನಾಲ್ಕನೇ ಪಂದ್ಯವನ್ನ ಭಾರತವೇ ಗೆದ್ದಿರೋದ್ರಿಂದ 2-1ರ ಲೀಡ್ ಸಾಧಿಸಿದೆ. ಇನ್ನು ಕೊನೇ ಪಂದ್ಯ ಶನಿವಾರ ನಡೆಯಲಿದ್ದು ಈ ಮ್ಯಾಚಲ್ಲಿ ಭಾರತ ವಿನ್ ಆಯ್ತು ಅಂದ್ರೆ ಸರಣಿ ಕೈವಶ ಮಾಡಿಕೊಳ್ಳುತ್ತೆ. ಇಲ್ಲ ಬ್ಯಾಡ್​ಲಕ್ ರಿಸಲ್ಟ್ ಕೈಕೊಡ್ತು ಅಂದ್ರೆ ಅಟ್​ಲೀಸ್ಟ್ ಡ್ರಾನಲ್ಲಿ ಕೊನೆಗೊಳ್ಳುತ್ತೆ. ಸೋ ಅಲ್ಲಿಗೆ ಭಾರತದ ನೋ ಲಾಸ್ ಜರ್ನಿ ಹಾಗೇ ಕಂಟಿನ್ಯೂ ಆಗುತ್ತೆ. ಯಾಕಂದ್ರೆ 2024ರ ಟಿ-20 ವಿಶ್ವಕಪ್ ಬಳಿಕ ಭಾರತ ಟಿ-20ಐ ಸರಣಿ ಸೋತೇ ಇಲ್ಲ. ಕೆಲ ಪಂದ್ಯಗಳಲ್ಲಿ ಸೋಲನ್ನೂ ಕಂಡಿದ್ರೂ ಬ್ಯಾಕ್​ ಟು ಬ್ಯಾಕ್ ಮ್ಯಾಚ್​ಗಳನ್ನ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ಸಲ ಈ ಅಜೇಯ ದಾಖಲೆ ಸೇಫ್ ಆಗಿದೆ. ಒಟ್ನಲ್ಲಿ ಭಾರತ ನಾಲ್ಕನೇ ಮ್ಯಾಚ್ ಗೆದ್ದಿದ್ದು ಫ್ಯಾನ್ಸ್ ಅಂತೂ ರಿಲ್ಯಾಕ್ಸ್ ಆಗಿದ್ದಾರೆ.

Shantha Kumari