ಆಶ್ರಯ ಕೊಟ್ಟ ಮನೆ ಮೇಲೆ ಕನ್ನ ಹಾಕಿದ ದಂಪತಿ! – ಚಿನ್ನಕ್ಕಾಗಿ ಮನೆ ಮಾಲಕಿಯನ್ನ ಕೊಂದ ಪಾಪಿಗಳು!

ಆಶ್ರಯ ಕೊಟ್ಟ ಮನೆ ಮೇಲೆ ಕನ್ನ ಹಾಕಿದ ದಂಪತಿ! – ಚಿನ್ನಕ್ಕಾಗಿ ಮನೆ ಮಾಲಕಿಯನ್ನ ಕೊಂದ ಪಾಪಿಗಳು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಯಾರನ್ನೂ ನಂಬೋ ಹಾಗಿಲ್ಲ. ಇದೀಗ ಇಲ್ಲೊಂದು ಕಡೆ ಚಿನ್ನಕ್ಕಾಗಿ ಮನೆ ಮಾಲಕಿಯನ್ನೇ ಕೊಂದಿರುವ ಘಟನೆ ನಡೆದಿದೆ. ಇದೀಗ ಕೊಲೆ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: 30ನೇ ವರ್ಷದ ಬರ್ತ್‌ಡೇ ಖುಷಿಗೆ ಬೆತ್ತಲಾಗಿ ಫೋಟೋಗೆ ಪೋಸ್ ಕೊಟ್ಟ ಖ್ಯಾತ ಮಾಡೆಲ್!‌

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶ್ರೀಲಕ್ಷ್ಮಿ ಹತ್ಯೆಯಾದ ಮಹಿಳೆ. ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ(26), ಸಾಕ್ಷಿ(23) ಬಂಧಿತ ಆರೋಪಿಗಳು.

ಹತ್ಯೆಯಾದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಪ್ರಸಾದ್ ಮತ್ತು ಸಾಕ್ಷಿ ಬಾಡಿಗೆಗೆ ಇದ್ದರು. ಪ್ರಸಾದ್ ಶ್ರೀಶೈಲ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ ಶ್ರೀಲಕ್ಷ್ಮಿ ಮನೆಯಲ್ಲಿ ದಂಪತಿ ಬಾಡಿಗೆಗೆ ಇದ್ದರು. ನಿನ್ನೆ ಶ್ರೀಲಕ್ಷ್ಮೀ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಈ ದಂಪತಿ ಟಿವಿ ನೋಡಲೆಂದು ಮನೆಗೆ ಬಂದಿದ್ದಾರೆ. ಬಳಿಕ ಆಕೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ. ಸಂಜೆ ಪತಿ ಕೆಲಸ ಮುಗಿಸಿ ಬರುವ ವೇಳೆ ಶ್ರೀಲಕ್ಷ್ಮೀ ಶವವಾಗಿ ಬಿದ್ದಿದ್ದರು. ಆಕೆಯ ಕುತ್ತಿಗೆ, ತುಟಿ ಮತ್ತು ಮುಖದ ಮೇಲೆ ಗಾಯಗಳಾಗಿದ್ದು,  ಆಕೆಯ ಚಿನ್ನದ ಮಂಗಳಸೂತ್ರ ಕಾಣೆಯಾಗಿತ್ತು. ಕೂಡಲೇ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ಶ್ರೀಲಕ್ಷ್ಮಿ ಪತಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸುಳಿವುಗಳ ಮೇರೆಗೆ, ಸಂತ್ರಸ್ತೆ ಮನೆಯಲ್ಲಿ ಬಾಡಿಗೆ ಪಡೆದು ವಾಸಿಸುತ್ತಿದ್ದ ದಂಪತಿಗಳಾದ ಪ್ರಸಾದ್ ಶ್ರೀಶೈಲ್ ಮಕೈ ಅವರ ಪತ್ನಿ ಸಾಕ್ಷಿ ಹನುಮಂತ್ ಹೊದ್ದೂರ್ ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ದಂಪತಿಗಳು ಶ್ರೀಲಕ್ಷ್ಮಿಯನ್ನು ಕೊಂದು ಆಭರಣಗಳೊಂದಿಗೆ ಪರಾರಿಯಾಗಿರುವುದಾಗಿ ಒಪ್ಪಿಕೊಂಡರು.

ಶ್ರೀ ಲಕ್ಷ್ಮಿ ಕೊಲೆ ನಂತರವೂ ಮನೆಯಲ್ಲಿಯೇ ಪ್ರಸಾದ್ ಮತ್ತು ಸಾಕ್ಷಿ ಇದ್ದರು. ತಮಗೇನೂ ಗೊತ್ತಿಲ್ಲದಂತೆ ನಾಟಕ ಮಾಡಿದ್ದರು. ಸ್ಥಳಕ್ಕೆ ಪೊಲೀಸರ ಭೇಟಿಯ ವೇಳೆ ತಮಗೇನೂ ಗೊತ್ತಿಲ್ಲವೆಂದು ಹೇಳಿದ್ದರು. ವಿಚಾರಣೆಯ ವೇಳೆ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ತಾವೇ ಕೊಲೆ ಮಾಡಿ ಚಿನ್ನಾಭರಣ ದೋಚಿರುವುದಾಗಿ ದಂಪತಿ ತಪ್ಪೊಪ್ಪಿಗೆ ನೀಡಿದ್ದಾರೆ.

Shwetha M