ರಾಹುಲ್ ಗಾಂಧಿ ಮತಗಳ್ಳತನದ ಆರೋಪಕ್ಕೆ ಬಿಜೆಪಿ ತೀವ್ರ ತಿರುಗೇಟು

ರಾಹುಲ್ ಗಾಂಧಿ ಮತಗಳ್ಳತನದ ಆರೋಪಕ್ಕೆ ಬಿಜೆಪಿ ತೀವ್ರ ತಿರುಗೇಟು

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬೃಹತ್ ಪ್ರಮಾಣದ ಮತ ವಂಚನೆ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ʻಎಚ್-ಫೈಲ್ಸ್‌ʼ ಬಿಜೆಪಿ ತೀವ್ರ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಸುಳ್ಳುಗಳನ್ನು ಹರಡಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಆರೋಪಿಸಿದರೆ, ಕೇಂದ್ರ ಸಚಿವ ಕಿರಣ್ ರಿಜಿಜು, ʻರಾಹುಲ್ ಅವರ ಆಟಂ ಬಾಂಬ್ ಎಂದಿಗೂ ಸ್ಫೋಟಿಸುವುದೇ ಇಲ್ಲʼ ಎಂದು ವ್ಯಂಗ್ಯವಾಡಿದ್ದಾರೆ.

ʻರಾಹುಲ್ ಗಾಂಧಿ ಅವರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಪಷ್ಟವಾದ ಗುರಿ ಇಲ್ಲದಂತಾಗಿದೆ. ಸುಳ್ಳುಗಳನ್ನು ಹರಡುತ್ತಾ ದೇಶದ ಜನರ ದಾರಿತಪ್ಪಿಸುತ್ತಿದ್ದಾರೆʼ ಎಂದು ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಮತಗಳ್ಳತನದ ಆರೋಪಕ್ಕೆ ಬಿಜೆಪಿ ತೀವ್ರ ತಿರುಗೇಟು

ರಾಹುಲ್‌ ಗಾಂಧಿಅವರ ಅಣುಬಾಂಬು ಯಾಕೆ ಸ್ಫೋಟಗೊಳ್ಳುವುದಿಲ್ಲ?. ರಾಹುಲ್ ಗಾಂಧಿ ಅಣುಬಾಂಬು ಸ್ಫೋಟವಾಗಲಿದೆ ಎನ್ನುತ್ತಾರೆ, ಆದರೆ ಅದು ಯಾಕೆ ಸ್ಫೋಟಗೊಳ್ಳುವುದಿಲ್ಲ? ಅವರು ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಹೈಡ್ರೋಜನ್ ಬಾಂಬ್ ಸ್ಫೋಟವಾಗಲಿದೆ ಎಂದೂ ಹೇಳುತ್ತಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ವ್ಯಂಗ್ಯವಾಡಿದರು.

ಬಿಹಾರ ಮೊದಲ ಹಂತದ ಚುನಾವಣೆಗೂ ಮುನ್ನವೇ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಹೊರಿಸಿದ್ದಾರೆ. ಕರ್ನಾಟಕದ ಆಳಂದ ಮತ್ತು ಮಹದೇವಪುರದಲ್ಲಿ ಮತಗಳ್ಳತನವಾದ ಬಗ್ಗೆ ಪ್ರಸ್ತಾಪಿಸಿದ್ದರು. ಹರಿಯಾಣದಲ್ಲಿಯೂ ದೊಡ್ಡ ಪ್ರಮಾಣದ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. “ಎಚ್-ಫೈಲ್ಸ್” ಎಂದು ಕರೆದ ದಾಖಲೆಗಳನ್ನು ಪ್ರಸ್ತುತಪಡಿಸಿದ ರಾಹುಲ್, 25 ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಪ್ರತಿಪಾದಿಸಿದರು.

ಹರಿಯಾಣದಲ್ಲಿಬ್ರೆಜಿಲ್‌ ರೂಪದರ್ಶಿಯ ಹೆಸರಲ್ಲಿಅಕ್ರಮ ಮತದಾನದ ಬಗ್ಗೆ ರಾಹುಲ್‌ ಆರೋಪಕ್ಕೆ ‘ಇಟಲಿ ಮಹಿಳೆ’ ಹೋಲಿಕೆ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರೆ ರಾಧಿಕಾ ಖೇರಾ, ‘‘ಇಟಾಲಿಯನ್‌ ಮಹಿಳೆ ಕೂಡ ನಮ್ಮ ದೇಶದಲ್ಲಿಮತ ಚಲಾವಣೆ ಮಾಡಿದ್ದರು. ಆ ಮಹಿಳೆಯ ಬಗ್ಗೆ ರಾಹುಲ್‌ ಗಾಂಧಿಯವರಿಗೆ ಗೊತ್ತಿಲ್ಲವೇ?’’ ಎಂದು ಪ್ರಶ್ನಿಸುವ ಮೂಲಕ ರಾಹುಲ್‌ ತಾಯಿ ಸೋನಿಯಾ ಗಾಂಧಿಯವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.

Kishor KV