ಕಿಡ್ನಿ ಸ್ಟೋನ್ ಇದ್ದವರು ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯೋದು ಬೆಸ್ಟ್!

ಬೂದು ಕುಂಬಳಕಾಯಿಯ ಸಾಮಾನ್ಯವಾಗಿ ಹೆಚ್ಚಿನವರ ಪ್ರಿಯವಾದ ತರಕಾರಿಗಳಲ್ಲಿ ಒಂದು. ದಕ್ಷಿಣ ಭಾರತದ ಕೆಲವು ಸಮುದಾಯಗಳಲ್ಲಿ ಬೂದು ಕುಂಬಳಕಾಯಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೆಲ ಕಾರ್ಯಕ್ರಮಗಳಲ್ಲಿ ಬೂದುಕುಂಬಳಕಾಯಿ ಖಾದ್ಯ ಇದ್ದೇ ಇರುತ್ತೆ. ಈ ಒಂದು ತರಕಾರಿಯಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ. ಬೂದು ಕುಂಬಳಕಾಯಿಯ ಜ್ಯೂಸ್ ಅನ್ನ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕಷ್ಟು ಪ್ರಯೋಜನಗಳಿವೆ.
ಇದನ್ನೂ ಓದಿ: ಕಲ್ಲಂಗಡಿ ಹಣ್ಣು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವುದು ಡೇಂಜರ್!
ಬೂದು ಕುಂಬಳಕಾಯಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದನ್ನ ಸೇವಿಸಿದ್ರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೀಗಾಗಿ ಬೂದುಕುಂಬಳ ಕಾಯಿಯಿಂದ ಸಾಕಷ್ಟು ಖಾದ್ಯಗಳನ್ನ ಮಾಡಲಾಗುತ್ತದೆ. ಇದ್ರಲ್ಲಿ ಜ್ಯೂಸ್ ಕೂಡ ಒಂದು. ಬೂದು ಕುಂಬಳಕಾಯಿ ತರಕಾರಿಯ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕರುಳಿನಲ್ಲಿರುವ ಕೊಳೆಯನ್ನು ತೆರವುಗೊಳಿಸುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ತುಂಡುಗಳಾಗಿ ಒಡೆದು ತೆಗೆದುಹಾಕುವ ಶಕ್ತಿ ಇದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದು ಕುಂಬಳಕಾಯಿ ರಸವನ್ನು ಕುಡಿಯುವ ಮೂಲಕ ನಿಮ್ಮ ಆರೋಗ್ಯಕ್ಕೆ ಯಾವ ಪ್ರಯೋಜನಗಳಿವೆ ಎಂದು ತಿಳಿಯೋಣ.
ಬೂದು ಕುಂಬಳಕಾಯಿ ರಸವನ್ನು ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತವೆ. ಇದು ಮೂತ್ರ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಮೂತ್ರದಲ್ಲಿನ ಸುಡುವ ಸಂವೇದನೆಯಿಂದ ಪರಿಹಾರವನ್ನು ನೀಡುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತುಂಡುಗಳಾಗಿ ಒಡೆಯಲು ಸಹ ಸಹಾಯ ಮಾಡುತ್ತದೆ. ಕಿಡ್ನಿ ಯನ್ನು ಡಿಟಾಕ್ಸ್ ಮಾಡುತ್ತದೆ.
ಮಧುಮೇಹ ರೋಗಿಗಳಿಗೆ ಬೂದು ಕುಂಬಳಕಾಯಿ ರಸವು ಒಂದು ಉತ್ತಮ ಆಯ್ಕೆಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಕ್ಕರೆ ರೋಗಿಗಳು ಇದನ್ನು ಪ್ರತಿದಿನ ಸೇವಿಸಬೇಕು. ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೂದು ಕುಂಬಳಕಾಯಿ ತಂಪಾಗಿಸುವ ಪರಿಣಾಮ ಹೊಂದಿದೆ ಮತ್ತು ಅದಕ್ಕಾಗಿಯೇ ಇದು ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ.

ನೋಡಿರಿ

