ದೊಡ್ಮನೆಯಲ್ಲಿ ಗಿಲ್ಲಿ-ಕಾವ್ಯಗೆ ಅಗ್ನಿ ಪರೀಕ್ಷೆ! – ಮನೆಯವರ ಪತ್ರ.. ಫ್ರೆಂಡ್‌ಶಿಪ್ ಮುಂದುವರಿಯುತ್ತಾ?

ಬಿಗ್ ಬಾಸ್ ಮನೆಗೆ ಗಿಲ್ಲಿ ಮತ್ತು ಕಾವ್ಯಾ ಜಂಟಿಯಾಗಿ ಕಾಲಿಟ್ಟಿದ್ರು. ಇವರಿಬ್ಬರೂ ಮೊದಲಿನಿಂದಲೂ ಪರಿಚಿತರು. ಇವರಿಬ್ಬರ ಫ್ರೆಂಡ್‌ಶಿಪ್ ಸಿಕ್ಕಾಪಟ್ಟೆ ವರ್ಕ್ ಆಗಿದೆ. ಅದ್ರಲ್ಲೂ ಗಿಲ್ಲಿಯಂತೂ ಮೊದಲಿನಿಂದಲೂ ಕಾವ್ಯಾ ಮೇಲೆ ಇಂಟರೆಸ್ಟ್ ತೋರಿಸುತ್ತಲೇ ಬಂದಿದ್ದಾರೆ. ಆದರೆ ಕಾವ್ಯಾ ತನಗೆ ಇಷ್ಟವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಒಂದೊಳ್ಳೆ ಸ್ನೇಹ ಇದೆ. ಆದ್ರೆ ಇವರಿಬ್ಬರನ್ನ ಕಂಡ್ರೆ ಮನೆಮಂದಿಗೆ ಒಂಚೂರು ಆಗ್ತಿಲ್ಲ. ಹೀಗಾಗಿ ಅವರಿಬ್ಬರನ್ನ ದೂರ ಮಾಡ್ಬೇಕು ಅಂತಾ ಪ್ರಯತ್ನಿಸ್ತಿದ್ದಾರೆ. ನಿನ್ನೆಯಷ್ಟೇ ರಿಷಾ, ಗಿಲ್ಲಿ ಕಾವ್ಯರನ್ನ ಹೇಗಾದ್ರೂ ಮಾಡಿ ದೂರ ಮಾಡ್ಬೇಕು ಅಂತಾ ಅಶ್ವಿನಿ ಜೊತೆ ಮಾತಾನಾಡಿಕೊಂಡಿದ್ರು. ಇದೀಗ ರಿಷಾ ಆಸೆಯನ್ನ ಬಿಗ್ ಬಾಸ್ ಈಡೇರಿಸಿದಂತೆ ಕಾಣ್ತಿದೆ. ಗಿಲ್ಲಿ, ಕಾವ್ಯ ಫ್ರೆಂಡ್‌ಶಿಪ್‌ಗೆ ಅಗ್ನಿ ಪರೀಕ್ಷೆ ಎದುರಾಗಿದೆ.
ಇದನ್ನೂ ಓದಿ: ಸದ್ಯಕ್ಕೆ ತೆರೆಗೆ ಬರಲ್ಲ ಕಾಂತಾರ ಚಾಪ್ಟರ್ 3! – ಹೊಸ ಪ್ರಯೋಗಕ್ಕೆ ಮುಂದಾದ ರಿಷಬ್ ಶೆಟ್ಟಿ!
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ – ಕಾವ್ಯ ಬಾಂಡಿಂಗ್ ತುಂಬಾ ಚೆನ್ನಾಗಿದೆ. ಇದು ವೀಕ್ಷಕರಿಗೂ ಇಷ್ಟವಾಗಿದೆ. ಆದ್ರೆ ಇವರಿಬ್ಬರ ಬಗ್ಗೆ ಅಶ್ವಿನಿ ಆಂಡ್ ಗ್ಯಾಂಗ್ ಕೆಟ್ಟದಾಗಿ ಕಮೆಂಟ್ ಮಾಡಿದ್ರೂ ಅವರಿಬ್ಬರ ಸ್ನೇಹ ಗಟ್ಟಿಯಾಗಿದೆ. ಆದ್ರೀಗ ಬಿಗ್ ಬಾಸ್ ಕೊಟ್ಟ ಟಾಸ್ಕ್ ಅವರಿಬ್ಬರನ್ನ ಇಕ್ಕಟ್ಟಿನ ಪರಿಸ್ಥಿತಿಗೆ ದೂಡಿದೆ. ಇದೀಗ ಮನೆಯವರ ಪತ್ರದಿಂದಾಗಿ ಅವರಿಬ್ಬರು ದೂರ ಆಗ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ಗಿಲ್ಲಿ-ಕಾವ್ಯ ಒಬ್ಬರನೊಬ್ಬರು ಅರ್ಥ ಮಾಡ್ಕೊಂಡಿದ್ದಾರೆ. ಅನ್ನೋ ಟ್ಯಾಗ್‌ಲೈನ್‌ನೊಂದಿಗೆ ಪ್ರೋಮೋ ರಿಲೀಸ್ ಆಗಿದೆ.
ಬಿಗ್ ಬಾಸ್ ಸ್ಪರ್ಧಿಗಳ ಮನೆಯಿಂದ ಲೆಟರ್ ಬಂದಿದೆ. ಯಾರಿಗೆ ಮನೆಯವರ ಲೆಟರ್ ಸಿಗುತ್ತೋ ಅವರು ನಾಮಿನೇಷನ್‌ನಿಂದ ಪಾರಾಗುತ್ತಾರೆ. ಇದೀಗ ಈ ಟಾಸ್ಕ್‌ನಲ್ಲಿ ಗಿಲ್ಲಿ ಕಾವ್ಯ ಮುಖಾಮುಖಿಯಾಗಿದ್ದಾರೆ. ಗಿಲ್ಲಿಗೆ ಕಾವ್ಯ ಮನೆಯವರು ಬರೆದ ಲೆಟರ್ ಸಿಕ್ಕಿದ್ರೆ, ಕಾವ್ಯಗೆ ಗಿಲ್ಲಿ ಮನೆಯವರು ಲೆಟರ್ ಸಿಕ್ಕಿದೆ. ಬಿಗ್ ಬಾಸ್, ಮೊದಲ ಆಯ್ಕೆ, ನೀವು ನಿಮ್ಮ ಮುಂದೆ ಇರುವ ಪತ್ರವನ್ನ ತೆಗೆದುಕೊಂಡು ಆಚೆ ಬರಬಹುದು. ಎರಡನೇ ಆಯ್ಕೆ ನೀವು ಇಲ್ಲಿಯೇ ಬಿಟ್ಟು ಬರಬಹುದು ಎಂದು ಹೇಳಿದ್ದಾರೆ. ಇದ್ರಿಂದಾಗಿ ಕಾವ್ಯ ಏನ್ ಮಾಡ್ಲಿ ಅಂತಾ ಟೆನ್ಷನ್ ಮಾಡಿಕೊಂಡ್ರೆ, ಗಿಲ್ಲಿ ಕಣ್ಣೀರು ಹಾಕಿದ್ದಾರೆ. ಇದೀಗ ಇಬ್ಬರಲ್ಲಿ ಯಾರು ಲೆಟರ್ ತೆಗೆದುಕೊಂಡು ಹೊರಗೆ ಬರ್ತಾರೆ? ಯಾರು ತೆಗೆದುಕೊಂಡು ಬರಲ್ಲ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ. ಇದೀಗ ಮನೆಯವರ ಲೆಟರ್‌ನಿಂದಾಗಿ ಇಬ್ಬರ ಸ್ನೇಹ ಹಾಳಾಗುತ್ತಾ ಅನ್ನೋ ಅನುಮಾನ ಅನೇಕರನ್ನ ಕಾಡ್ತಿದೆ.

ನೋಡಿರಿ

