ಜೆಮಿಮಾ ಪಾಸ್.. ಶ್ರೇಯಾಂಕಾ ಫೇಲ್ – ರೀಲ್ಸ್ ಮಾಡಿ ಕೆಟ್ರಾ ಟಗರು ಪುಟ್ಟಿ?
ವಿಶ್ವಕಪ್ ಕಿರೀಟ ಕೈ ತಪ್ಪಿದ್ದೇಗೆ?

ಐಸಿಸಿ ವುಮೆನ್ಸ್ ವಿಶ್ವಕಪ್ ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಂ ಟೀಂ ಇಂಡಿಯಾ ಗರ್ಲ್ಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಸಿಂಹಿಣಿಯರ ಸಾಧನೆಗೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಅಂತಿದೆ. ಟ್ರೋಫಿ ಗೆದ್ದ ವೀರನಾರಿಯರಿಗೆ ಬಂಪರ್ ಗಿಫ್ಟ್ಗಳೂ ಸಿಗ್ತಿವೆ. ಗೌರ್ಮೆಂಟ್ ಜಾಬ್ ಆಫರ್, ಕೋಟಿ ಕೋಟಿ ಬಹುಮಾನ, ಉದ್ಯಮಿಗಳಿಂದ ವಜ್ರಾಭರಣ ಹೀಗೆ.. ಬಹುಶಃ ಎಲ್ಲವೂ ಸರಿ ಇದ್ದಿದ್ರೆ ಟ್ರೋಫಿ ವಿನ್ನಿಂಗ್ ಟೀಮ್ನಲ್ಲಿ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಇರ್ಬೇಕಿತ್ತು. ಆದ್ರೆ ಅವ್ರೇ ಚಾನ್ಸ್ ಮಿಸ್ ಮಾಡಿಕೊಂಡ್ರಾ ಅನ್ನೋ ಚರ್ಚೆಗಳು ನಡೀತಿವೆ.
ಇದನ್ನೂ ಓದಿ : ಭಾರತ Vs ಪಾಕ್ ನ್ಯೂಕ್ಲಿಯರ್ ವಾರ್? ಯಾರ ಬತ್ತಳಿಕೆಯಲ್ಲಿ ಹೆಚ್ಚಿದೆ ಅಣ್ವಸ್ತ್ರ?
ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗ್ಬೇಕು ಅಂದ್ರೆ ಅದು ಸುಲಭದ ಮಾತಲ್ಲ. ಇಲ್ಲಿ ಟ್ಯಾಲೆಂಟ್ ಎಷ್ಟು ಮುಖ್ಯನೋ ಅದ್ರ ಜೊತೆಗೆ ಲಾಬಿಗಳು, ಪಾಲಿಟಿಕ್ಸ್ ಎಲ್ಲವೂ ನಡೆಯುತ್ತೆ. ಬಟ್ ಹೊರಜಗತ್ತಿಗೆ ಅದು ಕಾಣಲ್ಲ ಅಷ್ಟೇ. ಆದ್ರೆ ಸಿಕ್ಕ ಅವಕಾಶವನ್ನ ಹೇಗೆ ಬಳಸಿಕೊಳ್ತಾರೆ ಅನ್ನೋದು ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಅದ್ಯಾಕೋ ಏನೋ ಬಹುಬೇಗನೆ ಮಿಂಚಿ ಮರೆಯಾದ್ರಾ ಅನ್ನೋ ಅನುಮಾನಗಳು ಶುರುವಾಗಿವೆ. ಪ್ರಸ್ತುತ ವುಮೆನ್ಸ್ ಟೀಮ್ ಐಸಿಸಿ ವಿಶ್ವಕಪ್ ಗೆದ್ದಿದೆ. ಆದ್ರೆ ವಿನ್ನಿಂಗ್ ಟೀಮ್ನಲ್ಲಿ ನಮ್ಮ ಕನ್ನಡಿಗರು ಯಾರೂ ಇಲ್ವಲ್ಲ ಅನ್ನೋ ಕೊರಗೂ ಇದೆ. ಈ ಅವಕಾಶವನ್ನ ಶ್ರೇಯಾಂಕ ತಮ್ಮ ಕೈಯ್ಯಾರೆ ಮಿಸ್ ಮಾಡಿಕೊಂಡ್ರಾ ಅನ್ನೋ ಅನುಮಾನವೂ ಇದೆ.
ಒಂದೇ ವರ್ಷಕ್ಕೆ ಸೀಮಿತವಾಯ್ತಾ ಟೀಂ ಇಂಡಿಯಾ ಆಟ?
2024ರಲ್ಲಿ ಆರ್ ಸಿಬಿ ವುಮೆನ್ಸ್ ಟೀಂ ಡಬ್ಲ್ಯೂಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರೋಕೆ ಮುಖ್ಯ ಕಾರಣನೇ ಕನ್ನಡತಿ ಶ್ರೇಯಾಂಕಾ ಪಾಟೀಲ್. ಬೌಲಿಂಗ್ನಲ್ಲಿ ಅಲ್ಟಿಮೇಟ್ ಪರ್ಫಾಮೆನ್ಸ್ ನೀಡಿದ್ರು. ಫ್ಯಾನ್ಸ್ ಅಂತೂ ಪ್ರೀತಿಯಿಂದ ಟಗರುಪುಟ್ಟಿ ಅಂತಾನೇ ಹೆಸರಿಟ್ಟಿದ್ರು. ಆದ್ರೆ ಆ ನಂತರದಲ್ಲಿ ಟೀಂ ಇಂಡಿಯಾದಲ್ಲಿ ಅವಕಾಶ ಕೊಟ್ರೂ ಶೈನ್ ಆಗೋಕೆ ಆಗ್ಲಿಲ್ಲ.. 2023ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಶ್ರೇಯಾಂಕಾ ಒಂದೇ ವರ್ಷದಲ್ಲಿ ಮರೆಯಾಗಿದ್ದಾರೆ. 2024ರ ಜೂನ್ 23ರಂದು ಸೌತ್ ಆಫ್ರಿಕಾ ವಿರುದ್ಧ ತಮ್ಮ ಕೊನೇ ಏಕದಿನ ಪಂದ್ಯ ಆಡಿದ್ರು. ಌಂಡ್ 2024ರ ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೇ ಟಿ-20ಐ ಪಂದ್ಯ ಆಡಿದ್ರು. ಆ ನಂತ್ರ ಇಂಜುರಿ ಕಾರಣಕ್ಕೆ ಅವ್ರನ್ನ ತಂಡದಿಂದ ಕೈಬಿಡಲಾಗಿತ್ತು. ಆ ಬಳಿಕ ರಿಕವರ್ ಆದ್ರೂ ಕೂಡ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡೋಕೆ ಆಗ್ಲೇ ಇಲ್ಲ. ಅದ್ರ ಜೊತೆಗೆ ಶ್ರೇಯಾಂಕಾ ಮೇಲೆ ಫ್ಯಾನ್ಸ್ ಕೂಡ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಶ್ರೇಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋದು. ರೀಲ್ಸ್ ಅಂತೆಲ್ಲಾ ವಿಡಿಯೋಗಳನ್ನ ಅಪ್ಲೋಡ್ ಮಾಡೋದು. ಕ್ರಿಕೆಟ್ ಕೆರಿಯರ್ ಕಡೆ ಸೀರಿಯಸ್ ಆಗಿ ಫೋಕಸ್ ಮಾಡಿ ರೀಲ್ಸ್ ಚಟಕ್ಕೆ ಬೀಳ್ಬೇಡಿ ಅಂತೆಲ್ಲಾ ಅಭಿಮಾನಿಗಳು ಬುದ್ಧಿ ಮಾತು ಹೇಳಿದ್ದಾರೆ. ಬಟ್ ಅದನ್ನ ಶ್ರೇಯಾಂಕ ಸೀರಿಯಸ್ ಆಗಿ ತಗೊಂಡಂಗಿಲ್ಲ. ಇನ್ನೊಂದೆಡೆ ಈ ಬಾರಿ ಐಸಿಸಿ ವುಮೆನ್ಸ್ ವಿಶ್ವಕಪ್ ಗೆದ್ದಿರೋ ಭಾರತ ತಂಡದಲ್ಲಿ ಕರ್ನಾಟಕ ನಂಟಿರೋ ಆಟಗಾರ್ತಿ ಇದ್ದಾರೆ. ಅವ್ರೇ ಜೆಮಿಮಾ ರೊಡ್ರಿಗಸ್. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಗ್ಗು ಬಡಿಯೋಕೆ ನೆಲ ಕಚ್ಚಿ ನಿಂತಿದ್ದ ದಿಟ್ಟ ಆಟಗಾರ್ತಿ.
ಜೆಮಿಮಾ ರಾಡ್ರಿಗಸ್ ಗಿದೆ ಕರ್ನಾಟಕ ನಂಟು!
ಮಹಿಳಾ ವಿಶ್ವಕಪ್ನಲ್ಲಿ 7 ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡವನ್ನ ಸೋಲಿಸಲು ಸೆಮಿಫೈನಲ್ ನಲ್ಲಿ ಜೆಮಿಮಾ ಅಜೇಯ ಶತಕ ಗಳಿಸಿ ಮಿಂಚಿದ್ರು. ಪಂದ್ಯದ ಬಳಿಕ ಜೆಮಿಮಾ ಹೆಸರು ದೇಶಾದ್ಯಂತ ಟ್ರೆಂಡ್ ಆಗಿತ್ತು. ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರಿಗೆ ಕರಾವಳಿಯ ನಂಟು ಇದೆ. ಜೆಮಿಮಾ ರೋಡ್ರಿಗಸ್ ಅವರ ತಂದೆ ಇವಾನ್ ರೋಡ್ರಿಗಸ್, ಮಂಗಳೂರಿನವರು. ಆಕೆಯ ತಾಯಿ, ಲ್ಯಾವಿಟಾ ರೋಡ್ರಿಗಸ್ ಉಡುಪಿಯವರಾಗಿದ್ದಾರೆ. ಜೆಮಿಮಾ ಕ್ರಿಕೆಟ್ ಮಾತ್ರವಲ್ಲದೆ ಹಾಕಿಯಲ್ಲಿಯೂ ಛಾಪು ಮೂಡಿಸಿದ್ದಾರೆ. ಶಾಲಾ ದಿನಗಳಲ್ಲಿ ಹಾಕಿ ಟೂರ್ನಿಯಲ್ಲಿಯೂ ಆಡಿದ್ದರು. ಆದರೆ ಅಂತಿಮವಾಗಿ ಕ್ರಿಕೆಟ್ ಆಯ್ಕೆ ಮಾಡಿಕೊಂಡು ಇದೀಗ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇನ್ನು ಜೆಮಿಮಾ ಮಲ್ಟಿ ಟ್ಯಾಲೆಂಟೆಡ್ ಗರ್ಲ್. ಬ್ಯಾಟಿಂಗ್, ಫೀಲ್ಡಿಂಗ್, ಸಿಂಗಿಂಗ್, ಡಾನ್ಸಿಂಗ್, ಗಿಟಾರಿಸ್ಟ್. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಎಂಗೇಜ್ ಇರ್ತಾರೆ. ಬಟ್ ಕೆರಿಯರ್ ಕಡೆಗೂ ಫೋಕಸ್ ಮಾಡೋದ್ರಿಂದ ಸದ್ಯ ಸಕ್ಸಸ್ ದಾರಿಯಲ್ಲಿದ್ದಾರೆ. ಇನ್ನಾದ್ರೂ ಶ್ರೇಯಾಂಕ ಸೋಶಿಯಲ್ ಮೀಡಿಯಾ ಫೀವರ್ನಿಂದ ಆಚೆ ಬಂದು ಕೆರಿಯರ್ ಕಡೆ ಫೋಕಸ್ ಮಾಡಿದ್ರೆ ಫ್ಯೂಚರ್ ಬ್ರೈಟ್ ಆಗಿರುತ್ತೆ. ಅವ್ರು ರೀಲ್ಸ್ ಮಾಡೋದು ಬೇಡ ಅಚೀವ್ಮೆಂಟ್ ಮಾಡಿದ್ರೆ ಅವ್ರ ಫೋಟೋ, ವಿಡಿಯೋಗಳಲ್ಲಿ ರೀಲ್ಸ್ ಮಾಡೋಕೆ ಕೋಟ್ಯಂತರ ಫ್ಯಾನ್ಸ್ ಕಾಯ್ತಾ ಇರ್ತಾರೆ.

ನೋಡಿರಿ

