ಅಮೆರಿಕದಲ್ಲಿ ದೊಡ್ಡ ವಿಮಾನ ದುರಂತ – 3 ಸಾ*ವು, 11ಕ್ಕೂ ಹೆಚ್ಚು ಜನಕ್ಕೆ ಗಾಯ

ಅಮೆರಿಕದಲ್ಲಿ ದೊಡ್ಡ ವಿಮಾನ ದುರಂತ – 3 ಸಾ*ವು, 11ಕ್ಕೂ ಹೆಚ್ಚು ಜನಕ್ಕೆ ಗಾಯ

ಅಮೆರಿಕದ ಕೆಂಟುಕಿಯ ಲೂಯಿಸ್ ವಿಲ್ಲೆಯಲ್ಲಿರುವ ವಿಮಾನ ನಿಲ್ದಾಣದಿಂದ ಹೊರಡುವಾಗ ಯುಪಿಎಸ್ ಸರಕು ವಿಮಾನವೊಂದು ಮಂಗಳವಾರ ಅಪಘಾತಕ್ಕೀಡಾಗಿ  ಸ್ಫೋಟಗೊಂಡಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ  ಮತ್ತು 11 ಮಂದಿ ಗಾಯಗೊಂಡಿದ್ದಾರೆ.  ಲೂಯಿಸ್ ವಿಲ್ಲೆಯ ಮುಹಮ್ಮದ್ ಅಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುಗೆ ಹೊರಡುತ್ತಿದ್ದಾಗ ಸಂಜೆ 5:15 ರ ಸುಮಾರಿಗೆ ವಿಮಾನ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಗೆ ಬರ್ತ್‌ಡೇ ಸಂಭ್ರಮ – 37ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ಗೆ ಶುಭಾಶಯಗಳ ಮಹಾಪೂರ

ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು,  ಕನಿಷ್ಠ 11 ಜನರಿಗೆ ಗಾಯಗಳಾಗಿವೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ” ಎಂದು ಗವರ್ನರ್ ಆಂಡಿ ಬೆಶಿಯರ್  ತಿಳಿಸಿದ್ದಾರೆ. ವಿಮಾನದ ಎಡ ರೆಕ್ಕೆಯಲ್ಲಿ ಬೆಂಕಿಯ ಜ್ವಾಲೆ ಮತ್ತು ಹೊಗೆ ಕಾಣಿಸಿಕೊಂಡಿದೆ.  ವಿಮಾನವು ನೆಲದಿಂದ ಸ್ವಲ್ಪ ಮೇಲಕ್ಕೆ ಹಾರುತ್ತಿದ್ದಂತೆ ಬೆಂಕಿ ದೊಡ್ಡ ಪ್ರಮಾಣದಲ್ಲಿ ಆವರಿಸಿಕೊಂಡಿದೆ.  ನಂತ್ರ ಅಲ್ಲೇ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರನ್ ವೇಯ ಕೊನೆಯಲ್ಲಿರುವ ಕಟ್ಟಡ ಛಾವಣಿ ಚೂರುಚೂರಾಗಿದೆ.

 1991ರಲ್ಲಿ ತಯಾರಿಸಿದ ಮೆಕ್ ಡೊನೆಲ್ ಡೌಗ್ಲಾಸ್ ಎಂಡಿ -11 ವಿಮಾನ ಇದ್ದಾಗಿದ್ದು,  ಯುಪಿಎಸ್ ನ ಅತಿದೊಡ್ಡ ಪ್ಯಾಕೇಜ್ ನಿರ್ವಹಣಾ ಸೌಲಭ್ಯವು ಲೂಯಿಸ್ ವಿಲ್ಲೆಯಲ್ಲಿದೆ. ಹಬ್ ಸಾವಿರಾರು ಕಾರ್ಮಿಕರನ್ನು ನೇಮಿಸಿಕೊಂಡಿದೆ. 300 ದೈನಂದಿನ ವಿಮಾನಗಳನ್ನು ಹೊಂದಿದೆ.

Kishor KV