4ನೇ T-20I.. ಸಕ್ಸಸ್ ಸೂತ್ರಗಳೇನು – ಓಪನರ್ ಗಿಲ್ ಚೇಂಜ್ ಆದ್ರೆ ಬೆಸ್ಟ್?
ಭಾರತದಲ್ಲಿಲ್ವಾ ಫಿನಿಶರ್ ಬ್ಯಾಟರ್?

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಟಿ-20ಐ ಸರಣಿ ಸದ್ಯ ರೋಚಕ ಘಟ್ಟದಲ್ಲಿದೆ. ಗುರುವಾರ ನಾಲ್ಕನೇ ಪಂದ್ಯ ನಡೆಯಲಿದ್ದು, ಈ ಪಂದ್ಯ ಉಭಯ ತಂಡಗಳಿಗೂ ಮಸ್ಟ್ ವಿನ್ ಮ್ಯಾಚ್ ಆಗುತ್ತೆ. ಯಾಕಂದ್ರೆ ಇಲ್ಲಿ ಗೆದ್ದವ್ರಿಗೆ ಮಾತ್ರನೇ ಸರಣಿ ಗೆಲ್ಲೋ ಅವಕಾಶ ಸಿಗುತ್ತೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20ಐ ಸರಣಿ ಸದ್ಯ ಟೈ ಆಗಿದೆ. ಐದು ಪಂದ್ಯಗಳ ಸಿರೀಸ್ನಲ್ಲಿ ಮೂರು ಮ್ಯಾಚ್ ಮುಗಿದಿದ್ದು ಮೊದಲ ಪಂದ್ಯ ವಾಶ್ ಔಟ್ ಆಯ್ತು. ಎರಡನೇ ಮ್ಯಾಚಲ್ಲಿ ಕಾಂಗರೂಪಡೆ ಗೆದ್ರೆ ಮೂರನೇ ಮ್ಯಾಚ್ನಲ್ಲಿ ಇಂಡಿಯಾ ವಿನ್ ಆಗಿತ್ತು. ಇನ್ನು ಗುರುವಾರ ನಾಲ್ಕನೇ ಟಿ-20ಐ ಪಂದ್ಯ ಇದ್ದು ಈ ಮ್ಯಾಚ್ ಎರಡೂ ತಂಡಗಳಿಗೂ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ ಇಲ್ಲಿ ಗೆದ್ದವ್ರಿಗೆ ಮಾತ್ರನೇ ಸರಣಿ ಕೈವಶ ಮಾಡಿಕೊಳ್ಳೋ ಚಾನ್ಸ್ ಇರುತ್ತೆ. ಅಥವಾ ಡ್ರಾನಲ್ಲೇ ಕೊನೆಗೊಳಿಸೋ ಅವಕಾಶ ಸಿಗುತ್ತೆ. ಸೋ ಸೋಲನ್ನಂತೂ ತಪ್ಪಿಸಿಕೊಳ್ತಾರೆ. ಅಕಸ್ಮಾತ್ ಸೋತ್ರೆ ಸರಣಿ ಕಳ್ಕೊಳ್ಳೋ ಆತಂಕ ಅಂತೂ ಇದ್ದೇ ಇದೆ. ಈ ಪಂದ್ಯ ಗೆಲ್ಲೋಕೆ ಭಾರತ ಸಕ್ಸಸ್ ಸೂತ್ರಗಳನ್ನ ಮಾಡ್ಕೊಂಡೇ ಫೀಲ್ಡಿಗಿಳೀಬೇಕಾಗುತ್ತೆ. ಅದ್ರಲ್ಲೂ ಪ್ಲೇಯಿಂಗ್ 11 ಈಸ್ ಮೋಸ್ಟ್ ಇಂಪಾರ್ಟೆಂಟ್.
ಇದನ್ನೂ ಓದಿ : ಸೋತ ಮೇಲೆ BCCIಗೆ ಬುದ್ಧಿ ಬಂತಾ? – ಬೆಂಚ್ ಕಾದವರಿಂದ್ಲೇ ಗೆದ್ದ ಭಾರತ
ಭಾರತ ಗೆಲುವಿನ ಸೂತ್ರ!
- 3ನೇ ಪಂದ್ಯದಂತೆಯೇ ಪ್ಲೇಯಿಂಗ್ 11 ಕಣಕ್ಕೆ
- ಗಿಲ್ ರನ್ನ ಡ್ರಾಪ್ ಮಾಡಿ ಸಂಜುಗೆ ಓಪನರ್
- ಜಿತೇಶ್ ಶರ್ಮಾ ಮಿಡಲ್ ಆರ್ಡರ್ ಫಿನಿಶರ್
- ರಾಣಾ ಬದಲಿಗೆ ಅರ್ಶದೀಪ್ ಬೆಸ್ಟ್ ಬೌಲರ್
- ಟಾಪ್ ಆರ್ಡರ್ ಬ್ಯಾಟರ್ ಗಳಿಂದ ಸ್ಕೋರ್
- ಸ್ಲಾಟ್ ನಲ್ಲಿ ಪದೇಪದೆ ಬದಲಾವಣೆ ಬೇಡ
- ಟಾಸ್ ಸೋಲು & ಗೆಲುವಿನ ತಂತ್ರಗಾರಿಕೆ
- ಆಸೀಸ್ ತಂಡದಲ್ಲಿ ಪ್ಲೇಯಿಂಗ್ 11 ಪ್ಲಸ್
- ಕಳೆದ ಪಂದ್ಯದ ಗೆಲುವಿನ ಕಾನ್ಫಿಡೆನ್ಸ್
- ಟಿ-20ಐನಲ್ಲಿ ಸರಣಿ ಸೋಲದ ರೆಕಾರ್ಡ್
ಹೀಗೆ ಈ ಎಲ್ಲಾ ಲೆಕ್ಕಾಚಾರಗಳನ್ನ ಗಮನದಲ್ಲಿ ಇಟ್ಟುಕೊಂಡೇ ಟೀಂ ಇಂಡಿಯಾ ನಾಲ್ಕನೇ ಪಂದ್ಯಕ್ಕೆ ಕಣಕ್ಕಿಳೀಬೇಕಾಗುತ್ತೆ. ಯಾಕಂದ್ರೆ ಈ ಪಂದ್ಯ ಎರಡೂ ತಂಡಗಳ ಆಟಗಾರರಿಗೂ ಸರಣಿ ಗೆಲ್ಲೋಕೆ ನಿರ್ಣಾಯಕವಾಗಿದೆ. ಇದೆಲ್ಲದ್ರ ನಡುವೆ ಭಾರತ ತಂಡದ ಸ್ಟಾರ್ ರಿಸ್ಟ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ತವರಿಗೆ ವಾಪಸ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ತಯಾರಿ ನಡೆಸಲಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 14 ರಂದು ನಡೆಯಲಿದೆ. ಟೆಸ್ಟ್ ಸರಣಿಗಾಗಿ ಕುಲ್ದೀಪ್ ತಯಾರಿ ನಡೆಸುವ ಉದ್ದೇಶದಿಂದ ಕುಲ್ದೀಪ್ ತವರಿಗೆ ಬಂದಿದ್ದಾರೆ. ಬಹುಶಃ ಆಸೀಸ್ ಸರಣಿ ನಡುವೆಯೇ ವಿಂಡೀಸ್ ಸರಣಿಗೆ ಟೆಸ್ಟ್ ಟೀಂ ಅನೌನ್ಸ್ ಆಗ್ಬೋದು.

ನೋಡಿರಿ

