ಡಿಸೆಂಬರ್ 5ರ ವರೆಗೂ ಗುರು ಹಿಮ್ಮುಖ ಚಲನೆ – ಯಾವ ರಾಶಿಗೆಲ್ಲಾ ಲಾಭ ?

ಡಿಸೆಂಬರ್ 5ರ ವರೆಗೂ ಗುರು ಹಿಮ್ಮುಖ ಚಲನೆ – ಯಾವ ರಾಶಿಗೆಲ್ಲಾ ಲಾಭ ?

ಗುರುವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಈ ವರ್ಷ ಗುರುವು ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸಿದ್ದಾನೆ. ಇದರಲ್ಲಿ ಈ ವರ್ಷದ ಆರಂಭದಲ್ಲಿ ಮಿಥುನ ರಾಶಿಯಲ್ಲಿ ಪ್ರವೇಶಿಸಿ ಪ್ರಯಾಣಿಸಿದ ಗುರುವು ಅಕ್ಟೋಬರ್ 18 ರಂದು ಕರ್ಕ ರಾಶಿಯನ್ನು ಪ್ರವೇಶಿಸಿದನು.  ಈ ಕರ್ಕ ರಾಶಿಯ ಅಧಿಪತಿ ಚಂದ್ರ. ಕರ್ಕ ರಾಶಿಯು ಗುರುವಿನ ಪ್ರಮುಖ ರಾಶಿ. ಈಗ ಗುರು ಕರ್ಕ ರಾಶಿಯನ್ನು ಪ್ರವೇಶಿಸುವುದರಿಂದ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಇದೇ ನವೆಂಬರ್ 11ರಂದು ಗುರು ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಆದ್ರೆ ಗುರುವು ಕರ್ಕದಲ್ಲಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿ ಜನರ ಮೇಲೆಯೂ ಇದು ಪರಿಣಾಮ ಬೀರಲಿದೆ. ಗುರುವಿನ ಹಿಮ್ಮುಖ ಚಲನೆಯು ಹಲವರಿಗೆ ಹಲವು ರೀತಿಯ ಶುಭವನ್ನು ತರಲಿದೆ. ಡಿಸೆಂಬರ್ 5ರವರೆಗೂ ಗುರು ಹಿಮ್ಮುಖ ಚಲನೆಯಲ್ಲೇ ಇರಲಿದ್ದಾನೆ. ಅದಾದ ಬಳಿಕ ಮಾರ್ಚ್ 11ರಲ್ಲಿ ಮಿಥುನ ರಾಶಿಯಲ್ಲಿ ಹಿಮ್ಮುಖನಾಗುತ್ತಾನೆ. ಈ ರೀತಿ ಗುರು ಹಿಮ್ಮುಖ ಚಲನೆಯಲ್ಲಿದ್ದಾಗ ಯಾರಿಗೆಲ್ಲಾ ಶುಭವಾಗಲಿದೆ ಅನ್ನೋದನ್ನು ತಿಳಿಯೋಣ.

ಮಕರ ರಾಶಿ 

ಮಕರ ರಾಶಿಯ 7 ನೇ ಮನೆಯಲ್ಲಿ ಗುರು ಹಿಮ್ಮುಖನಾಗುತ್ತಾನೆ. ಇದು ನಿಮ್ಮ ಜೀವನದಲ್ಲಿ ಸುಖ ತರುವ ಸಮಯ. ಅವಿವಾಹಿತರಿಗೆ ಇಂದು ಅದ್ಭುತ ದಿನಗಳನ್ನು ತರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ನೀವು ಅಂದುಕೊಂಡಂತಹ ವಿಚಾರಗಳು ನಡೆಯಲಿವೆ. ಆಪ್ತರಿಗೆ ನೀಡಿದ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ವೈಯಕ್ತಿಕ ವಿಚಾರಕ್ಕಾಗಿ ದೊಡ್ಡ ವಸ್ತು ಅಥವಾ ದುಬಾರಿ ವಸ್ತು ಖರೀದಿಯ ಸಂಭವವಿದೆ. ಪ್ರಗತಿಗೆ ಅನೇಕ ಹೊಸ ಅವಕಾಶಗಳಿವೆ. ಉತ್ತಮ ಆರ್ಥಿಕ ಲಾಭದ ಸಾಧ್ಯತೆಯಿದೆ. ಗುರುವಿನ ದೃಷ್ಟಿ 1, 11 ಮತ್ತು 3 ನೇ ಮನೆಗಳ ಮೇಲೆ ಬೀಳುವುದರಿಂದ, ಆದಾಯದಲ್ಲಿ ಉತ್ತಮ ಹೆಚ್ಚಳವಾಗುತ್ತದೆ. ದೀರ್ಘಾವಧಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅಡೆತಡೆಯಾಗಿದ್ದ ಕೆಲಸಗಳು ಸಹ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿ ಗುರು ಭಗವಾನ್ ಕನ್ಯಾ ರಾಶಿಯ 11 ನೇ ಮನೆಯಲ್ಲಿರುತ್ತಾನೆ. ಇದರಿಂದಾಗಿ ಈ ರಾಶಿ ಜನರಿಗೆ ದೀರ್ಘಕಾಲೀನ ಆಸೆಗಳು ಈಡೇರುತ್ತವೆ. ಜೀವನದಲ್ಲಿ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳೂ ಇರುತ್ತವೆ. ನಿಮ್ಮ ತಾಯಿಯೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶವಿರುತ್ತದೆ. ಬಹುಕಾಲದ ವಾಹನ ಖರೀದಿಯ ನಿಮ್ಮ ಆಸೆಯೊಂದು ಈಡೇರಲಿದೆ. ವೃತ್ತಿ ಜೀವನದಲ್ಲಿ ನಿಮಗೆ ಬಡ್ತಿ, ವರ್ಗಾವಣೆ ವಿಚಾರದಲ್ಲಿ ಖುಷಿ ಇರಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮಮ ಬಯಕೆ ಈಡೇರಲಿದೆ. ಅದ್ರಲ್ಲೂ ಬ್ಯಾಂಕ್‌ನಿಂದ ಸಾಲ ಪಡೆಯುವ ವಿಚಾರದಲ್ಲಿ ಶುಭವಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ ಗುರುವಿನ ಹಿಮ್ಮುಖ ಚಲನೆಯಿಂದಾಗಿ ವೃಷಭ ರಾಶಿಯ 3 ನೇ ಮನೆಯಲ್ ಚಲಿಸಲಿದ್ದಾನೆ. ಇದರಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಗುರುವಿನ ಪ್ರಭಾವದಿಂದಾಗಿ ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗುತ್ತದೆ. ನೀವು ದೇವಾಲಯ, ಯಾಥ್ರಾ ಸ್ಥಳಗಳಿಗೆ ಭೇಟಿ ನೀಡಬಹುದು. ಗುರುವಿನ ದೃಷ್ಟಿ 7ನೇ ಮನೆಯ ಮೇಲೆ ಬೀಳುವುದರಿಂದ ವಿವಾಹದ ಅವಕಾಶಗಳು ಹೆಚ್ಚಾಗುತ್ತವೆ. ಕೆಲಸದ ಸ್ಥಳದಲ್ಲಿ ಇರುವ ಒತ್ತಡಗಳು ನಿವಾರಣೆಯಾಗುತ್ತದೆ. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಅಭಿಪ್ರಾಯ ವ್ಯತ್ಯಾಸಗಳು ಕೊನೆಗೊಳ್ಳುತ್ತವೆ.

Kishor KV