ಪಂಜಾಬ್ ಕ್ರಿಕೆಟ್ ಮಂಡಳಿಯಿಂದ ಹರ್ಮನ್‌ಪ್ರೀತ್, ಅಮನ್‌ಜೋತ್‌ಗೆ 11 ಲಕ್ಷ ರೂ. ಬಹುಮಾನ ಘೋಷಣೆ

ಪಂಜಾಬ್ ಕ್ರಿಕೆಟ್ ಮಂಡಳಿಯಿಂದ ಹರ್ಮನ್‌ಪ್ರೀತ್, ಅಮನ್‌ಜೋತ್‌ಗೆ 11 ಲಕ್ಷ ರೂ. ಬಹುಮಾನ ಘೋಷಣೆ

ಚೊಚ್ಚಲ ಏಕದಿನ ವಿಶ್ವಕಪ್‌ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ , ಆಲ್‌ರೌಂಡರ್ ಅಮನ್‌ಜೋತ್ ಕೌರ್ಮ ತ್ತು ಫೀಲ್ಡಿಂಗ್ ಕೋಚ್ ಮುನೀಶ್ ಬಾಲಿ ಅವರಿಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ನಗದು ಬಹುಮಾನಗಳನ್ನು ಘೋಷಿಸಿದೆ. ಹರ್ಮನ್‌ಪ್ರೀತ್ ಮತ್ತು ಅಮನ್‌ಜೋತ್‌ಗೆ ತಲಾ 11 ಲಕ್ಷ ರೂ. ಮತ್ತು ತಂಡದ ಯಶಸ್ಸಿಗೆ ನೀಡಿದ ಕೊಡುಗೆಗಾಗಿ ಮುನೀಶ್ ಬಾಲಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ಪಿಸಿಎ ದೃಢಪಡಿಸಿದೆ. ಮಾತ್ರವಲ್ಲದೆ ಈ ಮೂವರಿಗೆ ಶೀಘ್ರದಲ್ಲೇ ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗುವುದು ಪಿಸಿಎ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಭದ್ರತಾ ಪಡೆ ಭಯೋತ್ಪಾದಕರ ನಡುವೆ ಫೈರಿಂಗ್ – ನಾಲ್ವರು ಕುಕಿ ಉಗ್ರರು ಫಿನಿಷ್

ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಬಿಸಿಸಿಐ 51 ಕೋಟಿ ರು. ನಗದು ಬಹುಮಾನ ನೀಡಲಿದೆ. ಇದು ಎಲ್ಲಾ ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೂ ಸಿಗಲಿದೆ. ಕಳೆದ ವರ್ಷ ಭಾರತ ಪುರುಷರ ತಂಡ ಟಿ20 ವಿಶ್ವಕಪ್‌ ಗೆದ್ದಾಗ ಆಟಗಾರರಿಗೆ ಬಿಸಿಸಿಐ ₹125 ಕೋಟಿ ಹಣ ಬಹುಮಾನವಾಗಿ ನೀಡಿತ್ತು. ವನಿತೆಯರಿಗೂ ಅಷ್ಟೇ ಪ್ರಮಾಣದಲ್ಲಿ ನೀಡಬಹುದು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಬಿಸಿಸಿಐ 51 ಕೋಟಿ ರು.ಗಷ್ಟೇ ಸೀಮಿತಗೊಳಿಸಿದೆ.

ಯುವ ವೇಗಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರ 1 ಕೋಟಿ ರು. ನಗದನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ಸರ್ಕಾರ ವೇಗಿ ರೇಣುಕಾ ಸಿಂಗ್‌ಗೆ ₹1 ಕೋಟಿ ನಗದು ಬಹುಮಾನ ಪ್ರಕಟಿಸಿದೆ.

Kishor KV