ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಎಲಿಮಿನೇಷನ್‌ ಫಿಕ್ಸ್!‌ – ಅಧಿಕೃತ ಸಂದೇಶ ಕೊಟ್ಟ ಬಿಗ್‌ಬಾಸ್!

ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಎಲಿಮಿನೇಷನ್‌ ಫಿಕ್ಸ್!‌ – ಅಧಿಕೃತ ಸಂದೇಶ ಕೊಟ್ಟ ಬಿಗ್‌ಬಾಸ್!

ಬಿಗ್‌ ಬಾಸ್‌ ಮನೆ ಈ ಬಾರಿ ಜಗಳದಿಂದಲೇ ಸದ್ದು ಮಾಡ್ತಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಬಾರಿ ಹೈಡ್ರಾಮಾ ನಡೆದಿತ್ತು. ರಿಷಾ ಬಟ್ಟೆಯನ್ನ ಬಾತ್‌ರೂಮ್‌ನಲ್ಲಿ ಹಾಕಿದ್ದಕ್ಕೆ, ಆಕೆ ಗಿಲ್ಲಿ ಮೇಲೆ ಕೈ ಮಾಡಿದ್ಲು. ಈ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ಇಷ್ಟೆಲ್ಲಾ ಆದ್ರೂ ರಿಷಾ ಮೇಲೆ ಬಿಗ್‌ಬಾಸ್‌ ಕ್ರಮಕೈಗೊಂಡಿಲ್ಲ ಯಾಕೆ? ರಿಷಾಳನ್ನ ಮನೆಗೆ ಯಾಕೆ ಕಳಹಿಸಿಲ್ಲ. ಒಬ್ಬರಿಗೆ ಒಂದು ನ್ಯಾಯ. ರಿಷಾಗೆ ಇನ್ನೊಂದು ನ್ಯಾಯಾನಾ ಅಂತಾ ವೀಕ್ಷಕರು ಪ್ರಶ್ನೆ ಮಾಡಿದ್ರು. ಈ ಬೆನ್ನಲ್ಲೇ ಬಿಗ್‌ಬಾಸ್‌ ವೀಕ್ಷಕರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಿಕನ್‌ ಫ್ರೈ ವಿಚಾರಕ್ಕೆ ಮದುವೆ ಮನೆಯಲ್ಲಿ ಹೊಡೆದಾಟ – ವಿವಾಹಕ್ಕೆ ಬಂದವರು ಆಸ್ಪತ್ರೆ ಸೇರಿದ್ರು!

ಕಳೆದ ಸೀಸನ್​ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಈ ಸೀಸನ್‌ನಲ್ಲಿ ರಿಷಾ ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂಬ ಚರ್ಚೆ ನಡೆದಿತ್ತು. ಆದರೆ ಬಿಗ್‌ ಬಾಸ್‌ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಎಪಿಸೋಡ್‌ನಲ್ಲಿ ಒಂದು ಸಣ್ಣ ಸುಳಿವು ನೀಡಿದೆ.

ನಿನ್ನೆಯ ಸಂಚಿಕೆಯ ಕೊನೆಯಲ್ಲಿ, ಮನೆಯ ಸದಸ್ಯರು ಬಿಗ್ ಬಾಸ್​ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿದೆ. ಹೀಗಾಗಿ ರಿಷಾ ಅವರ ಕುರಿತು ವೀಕೆಂಡ್‌ ಪಂಚಾಯ್ತಿಯಲ್ಲಿ ಚರ್ಚೆ ಆಗೋದು ಫಿಕ್ಸ್‌ ಆದಂತಿದೆ. ಇದೀಗ ರಿಷಾಗೆ ಬುದ್ದಿ ಮಾತು ಹೇಳಿ ಮನೆಯಲ್ಲೇ ಉಳಿಸಿಕೊಳ್ತಾರಾ? ಅಥವಾ ಎಲಿಮಿನೇಷನ್‌ ನಡೆಸ್ತಾರಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ.

Shwetha M