ಸೂರಜ್ ಮತ್ತು ರಾಶಿಕಾ ಸ್ನೇಹಿತರು ಮಾತ್ರ – ಪ್ರೀತಿಗೆ ಫುಲ್‌ಸ್ಟಾಪ್ ಬಿತ್ತಾ?

ಸೂರಜ್ ಮತ್ತು ರಾಶಿಕಾ ಸ್ನೇಹಿತರು ಮಾತ್ರ – ಪ್ರೀತಿಗೆ ಫುಲ್‌ಸ್ಟಾಪ್ ಬಿತ್ತಾ?

ಬಿಗ್‌ಬಾಸ್ ಮನೆಯಲ್ಲಿ ಲವ್ ಸ್ಟೋರಿ ಮತ್ತೆ ಬ್ರೇಕಪ್ ಅಪ್ ಆಗಿದೆ. ನೀನು ನಿನ್ನ ಪಾಡಿಗೆ ಇರು, ನಾನು ನನ್ನ ಪಾಡಿಗೆ ಇರುತ್ತೇನೆ ಎಂದು ರಾಶಿಕಾ ತನ್ನ ಗೆಳೆಯ ಸೂರಜ್‌ಗೆ ಹೇಳಿದ್ದಾರೆ. ನಾನು ನೀನು ಕೈ ಕೈ ಹಿಡಿದು ಮಾತಾಡುವುದು ಬೇಡ. ನಮ್ಮದು ಜಸ್ಟ್ ಫ್ರೆಂಡ್‌ಶಿಪ್ ಎಂದು ರಾಶಿಕಾ ಸೂರಜ್‌ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಬಿಗ್‌ ಬಾಸ್‌ನಿಂದ ಮೂವರು ಹೊರಗೆ! – ರಾತ್ರೋ ರಾತ್ರಿ ಅಶ್ವಿನಿ, ರಘು, ಮಾಳು ದೊಡ್ಮನೆಯಿಂದ ಔಟ್?‌

ಸೂರಜ್ ಹಾಗೂ ರಾಶಿಕಾ ಮಧ್ಯೆ ಈಗ ಏನಿಲ್ಲ, ಏನೇನೂ ಇಲ್ಲ. ಈ ಹಿಂದೆ ಸೂರಜ್ ಕೈ ಹಿಡಿದುಕೊಂಡು ಪ್ರೀತಿ ಹೇಗೆ ಹುಟ್ಟುತ್ತೆ ಅಂತ ಹೇಳೋಕಾಗಲ್ಲ ಎಂದು ಹೇಳಿದ್ದ ರಾಶಿಕಾ, ಈಗ ಸೂರಜ್ ಜೊತೆ ನಾವಿಬ್ಬರು ಬರೀ ಸ್ನೇಹಿತರು ಮಾತ್ರ ಅಂತಾ ಹೇಳಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಹೇಳಿದ ಮಾತನ್ನು ರಾಶಿಕಾ ಗಂಭೀರವಾಗಿ ಪರಿಗಣಿಸಿದ್ದಾರೆ.

ಸೂರಜ್ ಅವರು ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ಬಂದ ದಿನವೇ ರಾಶಿಕಾಗೆ ರೋಸ್ ಕೊಟ್ಟರು. ಅಲ್ಲಿಂದ ಇಬ್ಬರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಇಬ್ಬರೂ ಕೈ ಕೈ ಹಿಡಿದು ಸುತ್ತಾಡಲು ಆರಂಭಿಸಿದರು. ಬಿಗ್‌ಬಾಸ್ ಮನೆಯಲ್ಲಿ ಯಾರೇ ಕಿತ್ತಾಡಿಕೊಳ್ಳಲಿ, ಜಗಳ ಮಾಡುತ್ತಿರಲಿ ಈ ಜೋಡಿ ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿತ್ತು. ಸುದೀಪ್ ಕೂಡ ವೇದಿಕೆ ಮೇಲೆ ಈ ವಿಚಾರವನ್ನು ಸೂಕ್ಷ್ಮವಾಗಿ ಹೇಳಿದ್ದರು. ಈ ವಿಚಾರದ ಬಗ್ಗೆ ರಾಶಿಕಾ ಗಂಭೀರವಾಗಿ ಸ್ವೀಕರಿಸಿದ್ದಾರೆ. ನಾವು ಜಸ್ಟ್ ಫ್ರೆಂಡ್ಸ್. ಇದಕ್ಕಿಂತ ಮೇಲೆ ಏನೂ ಇಲ್ಲ ಎಂದು ಸೂರಜ್ ಬಳಿ ಬಂದು ರಾಶಿಕಾ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸೂರಜ್ ಕೂಡ ತಲೆ ಆಡಿಸಿದ್ದಾರೆ. ಕೈ ಕೈ ಹಿಡ್ಕೊಳೋದು ಬೇಡ. ನಮ್ಮಿಬ್ಬರ ಮಧ್ಯೆ ಬೇರೆ ಸ್ಟೋರಿ ಇದೆ ಎಂದ್ರೆ ನಾನು ಒಪ್ಪಿಕೊಳ್ಳಲ್ಲ. ಫ್ರೆಂಡ್​ಶಿಪ್​ನಲ್ಲೂ ಹುಡುಗ-ಹುಡುಗಿ ಕ್ಲೋಸ್ ಆಗಿರ್ತಾರೆ. ಅದು ತಪ್ಪಲ್ಲ ಎಂದು ರಾಶಿಕಾ ಮಾತನಾಡಿದರು. ‘ನಮ್ಮಿಬ್ಬರ ಮಧ್ಯೆ ಇರೋದು ಗೆಳೆತನ ಮಾತ್ರ. ಇನ್ನುಮುಂದೆ  ಜಾಸ್ತಿ ಮಾತನಾಡೋದು ಬೇಡ. ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ ಎಂದು ರಾಶಿಕಾ ಹೇಳಿದರು. ಈ ವಿಚಾರ ಸೂರಜ್​ಗೆ ಬೇಸರ ಮೂಡಿಸಿತು. ನಾಳೆಯಿಂದ ಹೊಸ ದಿನ ಎಂದು ಹೇಳಿ ಸೂರಜ್ ಅಲ್ಲಿಂದ ನಡೆದುಬಿಟ್ಟರು.

Sulekha