ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಮಾತ್ರ ಅಧಿಕಾರ! – ಡಿಕೆ ಶಿವಕುಮಾರ್‌ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಗುರೂಜಿ!

ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಮಾತ್ರ ಅಧಿಕಾರ! – ಡಿಕೆ ಶಿವಕುಮಾರ್‌ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಗುರೂಜಿ!

ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಕ್ರಾಂತಿ ಜೋರಾಗಿ ಸದ್ದು ಮಾಡ್ತಿದೆ. ಡಿಸಿಎಂ ಸಿಎಂ ಆಗ್ಬೇಕು ಅಂತ ಒಂದು ಬಣ ಹೇಳ್ತಿದ್ರೆ, ಇನ್ನೊಂದು ಬಣ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎನ್ನುತ್ತಿದೆ. ಇದೀಗ ನವೆಂಬರ್‌ 26 ರ ನಂತ್ರ ಡಿ.ಕೆ ಶಿವಕುಮಾರ್‌  ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ ಅಂತ ಖ್ಯಾತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ನಿಂದ ಮೂವರು ಹೊರಗೆ! – ರಾತ್ರೋ ರಾತ್ರಿ ಅಶ್ವಿನಿ, ರಘು, ಮಾಳು ದೊಡ್ಮನೆಯಿಂದ ಔಟ್?‌

ಡಿಕೆಶಿ ಸಿಎಂ ಆಗುವ ಕುರಿತು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ  ವೆಂಕಟೇಶ ಗುರೂಜಿ ಭವಿಷ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್‌  ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ. ಆದ್ರೆ ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು ಅಂತ ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ಈ ಯೋಗ ಎಲ್ಲರಿಗೂ ಇರಲ್ಲ. 2031ರ ವರೆಗೆ ರಾಜನಂತೆ ಇರ್ತಾರೆ. ಹಾಗಾಗಿ ಡಿಕೆಶಿ ಮುಂದಿನ ಸಿಎಂ ಆಗೇ ಆಗ್ತಾರೆ. ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಆಗೋದನ್ನ ಯಾರಿಂದಲೂ ತಪ್ಪಿಸಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Shwetha M