ಟಾಟಾ ಬೈ ಬೈ ಹೆಡ್ & ಜೋಶ್ – AUSನಿಂದ ಡೇಂಜರಸ್ ಸ್ಟಾರ್ಸ್ ಔಟ್
T-20I ಸರಣಿ ಗೆಲ್ಲುತ್ತಾ ಭಾರತ?

ಟಾಟಾ ಬೈ ಬೈ ಹೆಡ್ & ಜೋಶ್ – AUSನಿಂದ ಡೇಂಜರಸ್ ಸ್ಟಾರ್ಸ್ ಔಟ್T-20I ಸರಣಿ ಗೆಲ್ಲುತ್ತಾ ಭಾರತ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ-20ಐ ಸರಣಿ ಸದ್ಯ ಸಮಬಲದಲ್ಲಿದೆ. ಅಂದ್ರೆ ಅವ್ರೊಂದು ಇವ್ರೊಂದು ಪಂದ್ಯ ಗೆದ್ದು ಟೈ ಆಗಿದೆ. ನಾಲ್ಕು ಮತ್ತು ಐದನೇ ಪಂದ್ಯಗಳು ಬಾಕಿ ಉಳಿದಿದ್ದು ಯಾರೇ ಆದ್ರೂ ಸರಣಿ ಕೈವಶಕ್ಕೆ ಎರಡೂ ಪಂದ್ಯಗಳನ್ನ ಗೆಲ್ಲಬೇಕು. ಟೈ ಆಗ್ಬೇಕು ಅಂದ್ರೆ ಒಂದೊಂದು ಪಂದ್ಯ ವಿನ್ ಆಗ್ಬೇಕು. ಇಂಟ್ರೆಸ್ಟಿಂಗ್ ಅಂದ್ರೆ ಮುಂದಿನ ಎರಡೂ ಪಂದ್ಯಗಳಲ್ಲೂ ಭಾರತಕ್ಕೆ ಅಡ್ವಾಂಟೇಜಸ್ ಆಗೋ ಡವಲಪ್​ಮೆಂಟ್ಸ್ ಆಗಿದೆ. ಆಸೀಸ್ ತಂಡದ ಇಬ್ಬರು ಸ್ಟಾರ್ ಆಟಗಾರರು ತಂಡದಿಂದಲೇ ಹೊರಬಿದ್ದಿದ್ದಾರೆ.

ಇದನ್ನೂ ಓದಿ : 52 ವರ್ಷ.. 52 ರನ್.. ವಿಶ್ವಕಪ್ ಗೆದ್ದು ಭಾರತ ಚರಿತ್ರೆ – ಸೋತು ಗೆದ್ದ ಆಫ್ರಿಕಾಗೂ ಸಲಾಂ

ಫಸ್ಟ್ ಮ್ಯಾಚ್ ಮಳೆಗೆ ವಾಶ್ ಔಟ್ ಆದ್ಮೇಲೆ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಂಪ್ಲೀಟ್ ಡಾಮಿನೇಟ್ ಮಾಡಿತ್ತು. ಒನ್ ಸೈಡೆಡ್ ಆಗಿ ಗೆದ್ದು ಬೀಗಿತ್ತು. ಬಟ್ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್ ಬ್ಯಾಕ್ ಮಾಡಿದೆ. ಬಿಗ್ ಟಾರ್ಗೆಟ್​ನ ಚೇಸ್ ಮಾಡಿ ಕಾನ್ಫಿಡೆನ್ಸ್ ಲೆವೆಲ್​​ನ ಬೂಸ್ಟ್ ಮಾಡಿಕೊಂಡಿದೆ. ಇದೇ ಮೈಂಡ್​ಸೆಟ್​ನಲ್ಲೇ ನಾಲ್ಕು ಮತ್ತು ಐದನೇ ಪಂದ್ಯವನ್ನೂ ಗೆಲ್ಲೋ ಟಾರ್ಗೆಟ್​ನಲ್ಲಿದ್ದಾರೆ. ಅದ್ರಲ್ಲೂ ಟಿ-20 ವಿಶ್ವಕಪ್​ನ ಹಾಲಿ ಚಾಂಪಿಯನ್​ಗಳ ಅಜೇಯ ವಿಜಯಯಾತ್ರೆಯನ್ನ ಕಂಟಿನ್ಯೂ ಮಾಡೋಕೆ ಬಿಗ್ ಅಡ್ವಾಂಟೇಜ್ ಕೂಡ ಇದೆ. ಅದ್ರಲ್ಲಿ ನಂಬರ್ 1 ಜೋಶ್ ಹೇಜಲ್ ವುಡ್ ಆಬ್ಸೆನ್ಸ್.

ಜೋಶ್ ಹೇಜಲ್ ವುಡ್ ಇಲ್ಲದ್ದೇ ಭಾರತಕ್ಕೆ ಪ್ಲಸ್!

ಕ್ರಿಕೆಟ್ ಜಗತ್ತಿನಲ್ಲೀಗ ದಿ ಮೋಸ್ಟ್ ವ್ಯಾಲ್ಯುಯೇಬಲ್ ಆಲ್ ಫಾರ್ಮೆಟ್ ಬೌಲರ್ ಅಂದ್ರೆ ಅದು ಜೋಶ್ ಹೇಜಲ್​ವುಡ್. ವೈಟ್ ಬಾಲ್ ಹಾಗೇ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಆಸ್ಟ್ರೇಲಿಯಾ ಪಾಲಿನ ರಿಯಲ್ ಹೀರೋ. ಹಾಗೇ ಭಾರತ ಎರಡನೇ ಟಿ-20ಐ ಪಂದ್ಯ ಸೋಲೋಕೆ ಕಾರಣನೂ ಇದೇ ಹೇಜಲ್​ವುಡ್. ಬಟ್ ಮೂರನೇ ಪಂದ್ಯದಿಂದ ಹೇಜಲ್​ವುಡ್ ಹೊರಗುಳಿದಿದ್ರು. ಇದರ ಲಾಭ ಪಡೆದಿದ್ದ ಭಾರತ ಬಿಗ್ ಟಾರ್ಗೆಟ್​ನೂ ಚೇಸ್ ಮಾಡಿ ವಿನ್ ಆಗಿತ್ತು. ಇದೀಗ ನಾಲ್ಕು ಮತ್ತೆ ಐದನೇ ಪಂದ್ಯದಿಂದಲೂ ಹೇಜಲ್​ವುಡ್ ಹೊರಗಿರ್ತಾರೆ. ಬಲಗೈ ವೇಗಿ ಹೇಜಲ್​ವುಡ್ ಟೀಮ್​ನಲ್ಲಿದ್ರೆ ಪವರ್ ಪ್ಲೇನಲ್ಲೇ ಪಂದ್ಯದ ದಿಕ್ಕನ್ನ ಬದಲಿಸಿಬಿಡ್ತಾರೆ. ತಮ್ಮ ಅಕ್ಯುರೇಟ್​ ಲೈನ್ ಌಂಡ್ ಲೆಂಗ್ತ್ ಬೌಲಿಂಗ್ ಮೂಲಕವೇ ಟಾಪ್ ಆರ್ಡರ್ ಬ್ಯಾಟಿಂಗ್​ನ ವಿಕೆಟ್ ಎಗರಿಸ್ತಾರೆ. ಎರಡನೇ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ ಜಸ್ಟ್ 13 ರನ್ ನೀಡಿ 3 ವಿಕೆಟ್ ಬೇಟೆಯಾಡಿದ್ರು. ಆದ್ರೀಗ ನವೆಂಬರ್ 21 ರಂದು ಪರ್ತ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಗಾಗಿ ಸ್ವಲ್ಪ ಬ್ರೇಕ್ ತಗೊಂಡು ಆ ನಂತ್ರ ರೆಡ್ ಬಾಲ್ ಕ್ರಿಕೆಟ್​ಗೆ ಸಿದ್ಧತೆ ನಡೆಸ್ತಾರೆ. ಸೋ ಹೇಜಲ್​ವುಡ್ ಇಲ್ಲದೇ ಇರೋದು ಭಾರತಕ್ಕೆ ವರದಾನವಾಗಲಿದೆ. ಹಾಗೇ ಟ್ರಾವಿಸ್ ಹೆಡ್ ಆಬ್ಸೆನ್ಸ್ ಕೂಡ ಪ್ಲಸ್ ಆಗಲಿದೆ.

ರೆಡ್ ಬಾಲ್ ಕ್ರಿಕೆಟ್ ಗೆ ಮರಳಲು ಹೆಡ್ ಡ್ರಾಪ್

ಮುಂಬರುವ ಆ್ಯಷಸ್ ಸರಣಿಗೆ ಸಿದ್ಧತೆಗಳ ಭಾಗವಾಗಿ ಭಾರತ ವಿರುದ್ಧದ ಉಳಿದ ಎರಡು ಟಿ-20ಐ ಪಂದ್ಯಗಳಿಗೆ ಆಸ್ಟ್ರೇಲಿಯಾದ ಟಿ20 ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಕೈಬಿಡಲಾಗಿದೆ. 31 ವರ್ಷದ ಎಡಗೈ ಬ್ಯಾಟ್ಸ್‌ಮನ್ ಟಿ20 ಬದಲಿಗೆ ರೆಡ್-ಬಾಲ್ ಅಂದ್ರೆ ಟೆಸ್ಟ್ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ. ನವೆಂಬರ್ 10 ರಿಂದ ಪ್ರಾರಂಭವಾಗುವ ತಾಸ್ಮೇನಿಯಾ ವಿರುದ್ಧದ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆಗೆ ದಕ್ಷಿಣ ಆಸ್ಟ್ರೇಲಿಯಾ ಪರ ಆಡಲಿದ್ದಾರೆ.  ನವೆಂಬರ್ 21 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಆ್ಯಷಸ್ ಟೆಸ್ಟ್‌ಗೆ ಪ್ರಾಕ್ಟೀಸ್ ಆಗುತ್ತೆ.  ಆದ್ರೆ ಇತ್ತೀಚೆಗೆ ಹೆಡ್ ವೈಟ್ ಬಾಲ್ ಸಿರೀಸ್​ನಲ್ಲಿ ಕಳಪೆ ಪ್ರದರ್ಶನ ನಿಡ್ತಿದ್ದಾರೆ. ಇತ್ತೀಚಿನ T20I ಮತ್ತು ODIಗಳ ಎಂಟು ಇನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಅಂದ್ರೆ ಆಲ್ಮೋಸ್ಟ್ ಸಿಂಗಲ್​ ಡಿಜಿಟ್​ಗೆ ಆಟ ಮುಗಿಸಿದ್ದಾರೆ. ಹೀಗಾಗಿ ರೆಡ್ ಬಾಲ್ ಫಾರ್ಮೆಟ್​ಗೆ ಸೆಟಲ್ ಆಗಲು ಮುಂದಿನ ಪಂದ್ಯಗಳಿಂದ ಕೈಬಿಡಲಾಗಿದೆ. ಸೋ ಇಬ್ಬರು ಸ್ಟಾರ್ ಆಟಗಾರರ ಆಬ್ಸೆನ್ಸ್ ಭಾರತಕ್ಕೆ ಪ್ಲಸ್ ಆಗುತ್ತೆ. ಅದ್ರಲ್ಲೂ ಜೋಶ್ ಹೇಜಲ್​ವುಡ್ ಇಲ್ಲದೆ ಇರೋದೇ ಬಿಗ್ ಅಡ್ವಾಂಟೇಜ್.

Shantha Kumari