ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬೇಕಾ? – ಮಂಗಳವಾರ ಈ ಕೆಲಸ ಮಾಡಿ

ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬೇಕಾ?  – ಮಂಗಳವಾರ ಈ ಕೆಲಸ ಮಾಡಿ

  ಮಂಗಳವಾರದ ದಿನದಂದು ನಾವು ಆಂಜನೇಯ ಸ್ವಾಮಿಗೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಇದು ನಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತೆ.. ಹಾಗಿದ್ರೆ ಮಂಗಳವಾರ , ಶನಿವಾರ ಯಾವ ಕಲಸ ಮಾಡಬೇಕು  ಅನ್ನೋದ್ದನ್ನ ನೋಡೋಣ.

ಹಿಂದೂ ಧರ್ಮದಲ್ಲಿ ವಾರದ ಮಂಗಳವಾರದ ದಿನದಂದು ಮತ್ತು ಶನಿವಾರದ ದಿನದಂದು ಶನಿ ದೇವನ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಈ ಎರಡು ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಮತ್ತು ಆಂಜನೇಯ ಸ್ವಾಮಿಯ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಕಷ್ಟಗಳೆಲ್ಲಾ ಕಳೆಯುವುದು. ಶನಿ ದೇವನಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು. ಹಾಗಾಗಿ, ವಾರದ ಈ ಎರಡು ದಿನದಂದು ಆಂಜನೇಯ ಸ್ವಾಮಿ ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಜೀವನದಲ್ಲಿ ಎದುರಾಗುವ ಸವಾಲುಗಳಿಂದ ಪರಿಹಾರವನ್ನು ಪಡೆದುಕೊಳ್ಳಲು ಬಯಸಿದರೆ ಶನಿವಾರ ಹಾಗೂ ಮಂಗಳವಾರ ಈ ಕೆಲಸಗಳನ್ನು ಮಾಡಬೇಕು.

 ಎಲೆಯನ್ನು ಅರ್ಪಿಸಿ

ಈ ದಿನದಂದು ಸ್ನಾನದ ನಂತರ, ಒಂದು ಅರಳಿ ಮರದ ಎಲೆಯನ್ನು ಆರಿಸಿ ಶುದ್ಧ ನೀರಿನಿಂದ ತೊಳೆಯಿರಿ. ಆಂಜನೇಯ ಸ್ವಾಮಿಯ ಮುಂದೆ ಎಲೆಯನ್ನು ಇರಿಸಿ, ಅದರ ಮೇಲೆ ಕೇಸರಿ ಬಳಸಿ “ರಾಮ” ಎಂದು ಬರೆದು ಆಂಜನೇಯ ಸ್ವಾಮಿಯ ಪಾದಗಳಿಗೆ ಅರ್ಪಿಸಿ. ನಂತರ ಅದರಲ್ಲಿ ಒಂದೆರೆಡು ಎಲೆಗಳನ್ನು ನಿಮ್ಮ ಪರ್ಸ್, ಬ್ಯಾಗ್‌, ಪಾಕೆಟ್‌ಗಳಲ್ಲಿ ಇಟ್ಟುಕೊಳ್ಳಿ. ಈ ಅಭ್ಯಾಸವು ಅದೃಷ್ಟವನ್ನು ತರುತ್ತದೆ ಮತ್ತು ವರ್ಷಪೂರ್ತಿ ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುತ್ತದೆ ಎಂದು ನಂಬಲಾಗಿದೆ.

ರಾಮನಾಮ ಜಪಿಸಿ

ಶನಿವಾರ ಅಥವಾ ಮಂಗಳವಾರ ಮುಂಜಾನೆ ಎದ್ದಾಕ್ಷಣ ಮೊದಲು ಸ್ನಾನ ಮಾಡಿ ಶುದ್ಧರಾಗಿ. ನಂತರ ಅರಳಿ ಮರವಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ. ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ ಮತ್ತು ಪೂರ್ವಕ್ಕೆ ಮುಖ ಮಾಡಿ, ತುಳಸಿ ಹಾರವನ್ನು ಬಳಸಿ ಜೈ ಶ್ರೀ ರಾಮ ಎಂದು ಜಪಿಸಿ. ಈ ಮಂತ್ರವನ್ನು ಪಠಣ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಕಾರಾತ್ಮಕತೆ ಬರುತ್ತದೆ ಎನ್ನುವ ನಂಬಿಕೆಯಿದೆ.

ನಾಣ್ಯ

ಶನಿ ದೋಷದ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಕಪ್ಪು ಮಡಕೆಯನ್ನು ತೆಗೆದುಕೊಳ್ಳಿ ಅದರಲ್ಲಿ ಕಲ್ಲಿದ್ದಲು ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿ ಹರಿಯುವ ನದಿಯಲ್ಲಿ ಬಿಡಿ. ನಂತರ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ “ಜೈ ಶ್ರೀ ರಾಮ” ಎಂದು ಜಪಿಸಿ. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಭಗವಂತನಿಗೆ ಮಲ್ಲಿಗೆ ಎಣ್ಣೆ, ಸಿಂಧೂರವನ್ನು ಅರ್ಪಿಸಿ ಇಷ್ಟಾರ್ಥಗಳು ಈಡೇರುವಂತೆ ಬೇಡಿಕೊಳ್ಳಿ. ಇದು ನಿಮಗೆ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ತರುತ್ತದೆ.

Kishor KV