ಸೋತ ಮೇಲೆ BCCIಗೆ ಬುದ್ಧಿ ಬಂತಾ? – ಬೆಂಚ್ ಕಾದವರಿಂದ್ಲೇ ಗೆದ್ದ ಭಾರತ
4ನೇ T-20I ಫೈಟ್.. ಸೇಮ್ ಟೀಂ?

ಸೋತ ಮೇಲೆ BCCIಗೆ ಬುದ್ಧಿ ಬಂತಾ? – ಬೆಂಚ್ ಕಾದವರಿಂದ್ಲೇ ಗೆದ್ದ ಭಾರತ4ನೇ T-20I ಫೈಟ್.. ಸೇಮ್ ಟೀಂ?

ಆಸ್ಟ್ರೇಲಿಯಾ ವಿರುದ್ಧದ ಟಿ-20ಐ ಸಿರೀಸ್​ನಲ್ಲಿರೋ ಟೀಂ ಇಂಡಿಯಾ ಮೆನ್ಸ್ ಟೀಂ ಗ್ರೇಟ್ ಕಮ್ ಬ್ಯಾಕ್ ಮಾಡಿದೆ. ಭಾನುವಾರ ಹೊಬಾರ್ಟ್​ನಲ್ಲಿ ನಡೆದ ಮೂರನೇ ಮ್ಯಾಚ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಸಮಬಲ ಸಾಧಿಸುವಲ್ಲಿ ಸಕ್ಸಸ್ ಆಗಿದೆ. ಬಟ್ ಈ ಪಂದ್ಯದ ಗೆಲುವಿಗೆ ಮುಖ್ಯ ಕಾರಣವೇ ಪ್ಲೇಯಿಂಗ್ 11ನಲ್ಲಾದ ಆ ಮೂರು ಬದಲಾವಣೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ-20ಐ ಸರಣಿಯಲ್ಲಿ ಸದ್ಯ ಎರಡೂ ತಂಡಗಳು ಒಂದೊಂದು ಪಂದ್ಯಗಳನ್ನ ಗೆದ್ದು ಸರಣಿ ಸಮಬಲ ಸಾಧಿಸಿವೆ. ಮೊದಲ ಮ್ಯಾಚ್ ಮಳೆಯಿಂದಾಗಿ ವಾಶ್ ಔಟ್ ಆಗಿತ್ತು. ಌಂಡ್ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಭಾರತ ಆಲ್ ರೌಂಡ್ ಪ್ರದರ್ಶನ ನೀಡಿ ಗೆದ್ದು ಬೀಗಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು 4ನೇ ಪಂದ್ಯ ನವೆಂಬರ್ 6ರಂದು ಗೋಲ್ಡ್ ಕೋಸ್ಟ್ ಮೈದಾನದಲ್ಲಿ ನಡೆಯಲಿದೆ. ಈ ಮ್ಯಾಚ್​ನಲ್ಲಿ ಯಾರೇ ಗೆದ್ರೂ ಗೇಮ್ ಟರ್ನಿಂಗ್ ಪಾಯಿಂಟ್ ಸಿಗಲಿದೆ.

ಇದನ್ನೂ ಓದಿ : ಭಾರತಕ್ಕೆ ಸಂಡೇ ಡಬಲ್ ಧಮಾಕ – ವಿಶ್ವಕಪ್ ಗೆದ್ದು ಸಿಂಹಿಣಿಯರ ಚರಿತ್ರೆ

ಟಾಸ್ ಗೆದ್ದು ಫೀಲ್ಡಿಂಗ್ ಗಿಳಿದ ಭಾರತ ಅದ್ಭುತ ಗೆಲುವು!

ಇನ್ನು ಮೊದಲ ಎರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ಸೂರ್ಯ ಮೂರನೇ ಮ್ಯಾಚ್​ನಲ್ಲಿ ಟಾಸ್ ಗೆದ್ದು ಫಸ್ಟ್ ಫೀಲ್ಡಿಂಗ್ ಚೂಸ್ ಮಾಡಿಕೊಂಡ್ರು ಓಪನರ್ಸ್ ಕೈಕೊಟ್ರೂ ಟಿಮ್ ಡೇವಿಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಮಾರಕ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ರು. ಟಿಮ್ ಡೇವಿಡ್ 38 ಎಸೆತಗಳಲ್ಲಿ 74 ರನ್ ಬಾರಿಸಿದರೆ, ಮಾರ್ಕಸ್ ಸ್ಟೊಯಿನಿಸ್ 39 ಎಸೆತಗಳಲ್ಲಿ 64 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಅಬ್ಬರದಿಂದಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 186 ರನ್ ಗಳಿಸಿತು. ಟೀಂ ಇಂಡಿಯಾ ಪರ ಯಾರೊಬ್ರೂ ಫಿಫ್ಟಿ ಬಾರಿಸದೇ ಇದ್ರೂ ಬ್ಯಾಟಿಂಗ್​ನಲ್ಲಿ ಎಲ್ರೂ ತಮ್ಮ ಕೊಡುಗೆ ನೀಡಿದ್ರು. ವಾಷಿಂಗ್ ಟನ್ ಸುಂದರ್ 49 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ರು. ಹೀಗಾಗಿ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ಗಳಿಂದ ಭಾರತ ತಂಡ ಗೆಲುವಿನ ದಡ ಮುಟ್ಟಿತು. ಈ ಮೂಲಕ ಭಾರತ ತಂಡ ಹೋಬಾರ್ಟ್ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಌಕ್ಚುಲಿ ಆರಂಭದಲ್ಲಿ ಆಸೀಸ್ ಟಾರ್ಗೆಟ್ ನೋಡ್ದಾಗ ಚೇಸ್ ಮಾಡೋದು ಕಷ್ಟ ಅನ್ಸಿದ್ರೂ ಭಾರತ ಗೆಲ್ಲೋಕೆ ಮುಖ್ಯ ಕಾರಣವೇ ಪ್ಲೇಯಿಂಗ್ 11 ನಲ್ಲಾದ ಈ ಮೂರು ಬದಲಾವಣೆ! ಹಾಗೇ ಮೂವರ ಎಂಟ್ರಿ!

3 ಬದಲಾವಣೆ.. ಗೆಲುವಿನ ಕೊಡುಗೆ!
  1. ಅರ್ಶದೀಪ್ ಸಿಂಗ್ ಗೆ ಪ್ಲೇಯಿಂಗ್ 11 ಅವಕಾಶ
  2. ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾಗೆ ಚಾನ್ಸ್
  3. ಕುಲ್ದೀಪ್ ಯಾದವ್ ಡ್ರಾಪ್, ಸುಂದರ್ ಇನ್

ಹೀಗೇ ಈ ಮೂರು ಆಟಗಾರರು ತಂಡ ಸೇರಿದ್ದೇ ಪ್ಲಸ್ ಆಗಿದೆ. ಮೂವರಿಂದ್ಲೂ ಬೆಸ್ಟ್ ಪರ್ಫಾಮೆನ್ಸ್ ಬಂದಿದೆ. ಹೀಗಾಗಿ ನವೆಂಬರ್ 6ರಂದು ನಡೆಯಲಿರೋ ನಾಲ್ಕನೇ ಪಂದ್ಯಕ್ಕೂ ಬೆಸ್ಟ್ ಪ್ಲೇಯಿಂಗ್ 11 ಚೂಸ್ ಮಾಡ್ಬೇಕಾಗಿದೆ. ಯಾಕಂದ್ರೆ ಸರಣಿಯಲ್ಲಿ ಮೂರು ಮ್ಯಾಚ್ ಆಗಿದ್ದು ಇಬ್ಬರೂ ಒಂದೊಂದು ಪಂದ್ಯಗಳನ್ನ ಗೆದ್ದಿದ್ದಾರೆ. ಯಾವುದೇ ತಂಡ ಸರಣಿ ಕೈವಶ ಮಾಡಿಕೊಳ್ಬೇಕು ಅಂದ್ರೆ ಉಳಿದ ಎರಡೂ ಪಂದ್ಯಗಳನ್ನೂ ಗೆಲ್ಬೇಕು. ಅಥವಾ ಅವ್ರೊಂದು ಇವ್ರೊಂದು ಗೆದ್ರೆ ಸರಣಿ ಸಮಬಲ ಆಗುತ್ತೆ. 2024ರ ಟಿ-20 ವಿಶ್ವಕಪ್ ಆದ್ಮೇಲೆ ಭಾರತ ಒಂದೂ ಟ-20ಐ ಸರಣಿ ಸೋತೇ ಇಲ್ಲ. ಸೋ ಈಗ ಅದೇ ಸ್ಟ್ಯಾಂಡರ್ಡ್ & ರೆಕಾರ್ಡ್ಸ್ ಉಳಿಸಿಕೊಳ್ಬೇಕು ಅಂದ್ಎರ ಮುಂದಿನ ಎರಡೂ ಪಂದ್ಯಗಳಲ್ಲೂ ಡು ಆರ್ ಡೈನಂತೆಯೇ ಪ್ರದರ್ಶನ ನೀಡ್ಬೇಕು.

Shantha Kumari