21 ಕೋಟಿ ರೂ. ಮೌಲ್ಯದ ಕೋಣ ಸಾ*ವು – ವಿಷ ಹಾಕಿ ಕೊಂದ್ರಾ?

21 ಕೋಟಿ ರೂ. ಮೌಲ್ಯದ ಕೋಣ ಸಾ*ವು  – ವಿಷ ಹಾಕಿ ಕೊಂದ್ರಾ?

ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ   ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಆಗಿ ಸಾವನ್ನಪ್ಪಿದ್ದು, ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್‌ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು. ಸದ್ಯ ಅದರ ಹಠಾತ್‌ ಮರಣ ಪ್ರಾಣಿ ಪ್ರಿಯರಿಗೆ ಆಘಾತ ತಂದಿತ್ತಿದೆ. ಕೋಣ ನೆಲಕ್ಕೆ ಒರಗಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಂಪುಟ ಪುನಾರಚನೆಗಾಗಿ ನ.15ಕ್ಕೆ ಸಿಎಂ ದೆಹಲಿಗೆ! – ರಾಹುಲ್, ಖರ್ಗೆ ಜೊತೆ ಮಾತ್ನಾಡ್ತಿನಿ ಅಂದಿದ್ಯಾಕೆ ಸಿದ್ದರಾಮಯ್ಯ?

”ಈ ಕೋಣಕ್ಕಾಗಿ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿತ್ತು. ಕೋಣದ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿತು” ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

 ತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅದರ ದೇಹದ ತೂಕ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿಲ್ಲ. ಅದನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೊವೊಂದರಲ್ಲಿ ನೂರಾರು ಮಂದಿ ಮೃತ ಕೋಣದ ಸುತ್ತ ನೆರೆದಿರುವುದು ಕಂಡು ಬಂದಿದೆ. ಕೆಲವರು ಕೋಣಕ್ಕೆ ವಿಷ ಪ್ರಶಾನವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕೋಣದ ಸಾವಿಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಬೇಕೆಂದೇ ಕೊಲೆ ಮಾಡಲಾಗಿದೆ ಎಂದು ಕೆಲವರು ಕಿಡಿ ಕಾರಿದ್ದಾರೆ. ಕೋಣದ ಗಾತ್ರ ಹೆಚ್ಚಲು ಅದಕ್ಕೆ ಕೊಬ್ಬಿನ ಚುಚ್ಚು ಮದ್ದು ನೀಡಲಾಗುತ್ತಿತ್ತು. ಓವರ್‌ ಡೋಸ್‌ನಿಂದ ಅದು ಅಸುನೀಗಿದೆ ಎಂದು ಹಲವರು ಆರೋಪಿಸಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

Kishor KV