ಗೌತಮ್‌ ಭೂಮಿ ಒಂದಾಗೋ ಹೊತ್ತಲ್ಲೇ ಶಾಕ್‌! – ಕೇಡಿ ಜೈದೇವ್‌ ಜೊತೆ ಕೈ ಜೋಡಿಸಿದ ಎಂಎಲ್​ಎ

ಗೌತಮ್‌ ಭೂಮಿ ಒಂದಾಗೋ ಹೊತ್ತಲ್ಲೇ ಶಾಕ್‌! – ಕೇಡಿ ಜೈದೇವ್‌ ಜೊತೆ ಕೈ ಜೋಡಿಸಿದ ಎಂಎಲ್​ಎ

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಳ್ತಿದೆ. ಶಕುಂತಾ ಕುತಂತ್ರದಿಂದಾಗಿ ಭೂಮಿಕಾ ಮನೆ ಬಿಟ್ಟು ಹೋಗಿದ್ಲು. ಮುದ್ದಿನ ಮಡದಿಗಾಗಿ ಗೌತಮ್‌ ಕೂಡ ಇರೋ ಆಸ್ತಿ, ಐಶ್ವರ್ಯಗಳನ್ನ ಬಿಟ್ಟು ಡ್ರೈವರ್‌ ಆಗಿದ್ದ. ಆದ್ರೀಗ ಗೌತಮ್‌ ಭೂಮಿ ಒಂದಾಗೋ ಕಾಲ ಹತ್ತಿರವಾಗಿದೆ. ಒಂದೇ ವಠಾರದಲ್ಲಿರೋ ಈ ದಂಪತಿ ಈಗ ಮಕ್ಕಳಿಂದಾಗಿ ಹತ್ತಿರವಾಗಿದ್ದಾರೆ. ಹೀಗಿರುವಾಗಲೇ ಒಂದು ದೊಡ್ಡ ಬೆಳವಣಿಗೆ ನಡೆದಿದೆ. ಜಯದೇವ್ ಕಿತಾಪತಿ ಶುರು ಮಾಡಿದ್ದಾನೆ.

ಇದನ್ನೂ ಓದಿ: ಬಟ್ಟೆ ಎಸೆದ ಗಿಲ್ಲಿಗೆ ಹೊಡೆದ ರಿಷಾ! – ಗಿಲ್ಲಿನಟ ಮೇಲೆ ಕೈ ಮಾಡಿದ ನಟಿ ದೊಡ್ಮನೆಯಿಂದ ಔಟ್?‌

ಗೌತಮ್​, ಶಕುಂತಲಾಳ ಮಲ ಮಗ. ಜಯದೇವ್​ಗೆ ಮಲ ಅಣ್ಣ. ಶಕುಂತಲಾ ಹಾಗೂ ಅವಳ ಮಗ ಜಯದೇವ್ ಒಟ್ಟಾಗಿ ಗೌತಮ್ ವಿರುದ್ಧ ಹಗೆ ತೀರಿಸುತ್ತಾ ಬರುತ್ತಿದ್ದಾರೆ. ಈ ಮೊದಲು ಗೌತಮ್ ಪತ್ನಿ ಭೂಮಿಕಾ ಕುಶಾಲನಗರದಲ್ಲಿ ಇದ್ದಾಗ ಎಂಎಲ್​ಎ ಜೊತೆ ಕಿರಿಕ್ ಆಗಿತ್ತು. ಈ ಕಿರಿಕ್​ನ ಸರಿಪಡಿಸಿಕೊಳ್ಳಲು ಸಾಧ್ಯವಾಗದೆ ಭೂಮಿಕಾ ಅಲ್ಲಿಂದ ಬಿಟ್ಟು ಬಂದಿದ್ದಳು. ಆ ಸಮಯದಲ್ಲಿ ಗೌತಮ್ ನೇರವಾಗಿ ಹೋಗಿ ಎಂಎಲ್​ಗೆ ಅವಾಜ್ ಹಾಕಿ ಬಂದಿದ್ದ. ಈ ಅವಮಾನವನ್ನು ಎಂಎಲ್​ಎ ಮರೆತಿಲ್ಲ. ಈ ಕಾರಣದಿಂದಲೇ ಅವನು ಸೇಡು ತೀರಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾನೆ. ಈಗ ಜಯದೇವ ಇದಕ್ಕೆ ಕೈ ಜೋಡಿಸಿದ್ದಾನೆ. ಆತನು ಗೌತಮ್ ಎಲ್ಲಿದ್ದಾನೆ ಎಂಬುದನ್ನು ಹಡುಕಿಸುತ್ತಿದ್ದಾನೆ. ಈ ಮಧ್ಯೆ ಮತ್ತೊಂದು ಬೆಳವಣಿಗೆ ನಡೆದಿದೆ.

ಭೂಮಿಕಾ ಹಾಗೂ ಎಂಎಲ್​ಎ ಮಧ್ಯೆ ಕಿರಿಕ್ ಆಗಿದ್ದು, ಭೂಮಿಕಾ ಅಲ್ಲಿಂದ ಬಿಟ್ಟು ಹೋಗಿದ್ದು ಎಲ್ಲಾ ವಿಚಾರ ಜಯದೇವ್ ಕಿವಿಗೆ ಬಿದ್ದಿದೆ. ಈ ಕಾರಣದಿಂದಲೇ ಜಯದೇವ್ ನೇರವಾಗಿ ಹೋಗಿ ಎಂಎಲ್​ಎ ಜೊತೆ ಕೈ ಜೋಡಿಸಿದ್ದಾನೆ. ಈ ವಿಚಾರವನ್ನು ಜಯದೇವ್ ಮಾವ ಲಕ್ಷ್ಮೀಕಾಂತ ಶೀಘ್ರವೇ ಗೌತಮ್​​ಗೆ ತಲುಪಿಸೋ ಸಾಧ್ಯತೆ ಇದೆ. ಮುಂದೆ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈಗಾಗಲೇ ಗೌತಮ್ ಹಾಗೂ ಭೂಮಿಕಾ ಮಧ್ಯೆ ಪ್ರೀತಿ ಬೆಳೆಯುತ್ತಿದೆ. ಈ ಸಮಯದಲ್ಲಿ ಯಾರಾದರೂ ಇವರ ಮಧ್ಯೆ ಬಂದರೆ ಅವರನ್ನು ಗೌತಮ್ ಸುಮ್ಮನೆ ಬಿಡೋದಿಲ್ಲ. ಈಗಾಗಲೇ ದಯೆ ತೋರಿ ಜಯದೇವ್​ನ ಬಿಟ್ಟಿದ್ದ ಗೌತಮ್. ಆದರೆ, ಇನ್ನುಮುಂದೆ ಅವನು ಆ ರೀತಿ ಮಾಡೋದು ಅನುಮಾನ. ಕುತಂತ್ರಿಗಳಿಗೆ ಸರಿಯಾಗಿ ಪಾಠ ಕಲಿಸೋದು ಫಿಕ್ಸ್‌ ಆಗಿದೆ.

Shwetha M