ಬಟ್ಟೆ ಎಸೆದ ಗಿಲ್ಲಿಗೆ ಹೊಡೆದ ರಿಷಾ! – ಗಿಲ್ಲಿನಟ ಮೇಲೆ ಕೈ ಮಾಡಿದ ನಟಿ ದೊಡ್ಮನೆಯಿಂದ ಔಟ್?‌

ಬಟ್ಟೆ ಎಸೆದ ಗಿಲ್ಲಿಗೆ ಹೊಡೆದ ರಿಷಾ! – ಗಿಲ್ಲಿನಟ ಮೇಲೆ ಕೈ ಮಾಡಿದ ನಟಿ ದೊಡ್ಮನೆಯಿಂದ ಔಟ್?‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಬರೀ ಜಗಳ, ಕಿತ್ತಾಟದಿಂದಲೇ ಸದ್ದು ಮಾಡ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಸ್ಪರ್ಧಿಗಳು ದೊಡ್ಡದಾಗಿ ಜಗಳವಾಡುತ್ತಿದ್ದಾರೆ. ಇದೀಗ ಕ್ಷುಲ್ಲಕ ಕಾರಣಕ್ಕೆ ದೊಡ್ಮನೆಯಲ್ಲಿ ಜಗಳ ನಡೆದಿದ್ದು, ಗಿಲ್ಲಿನಟನ ಮೇಲೆ ರಿಷಾ ಕೈ ಮಾಡಿದ್ದಾರೆ. ಬಟ್ಟೆ ವಿಚಾರಕ್ಕೆ ರೊಚ್ಚಿಗೆದ್ದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ.

ಇದನ್ನೂ ಓದಿ: 52 ವರ್ಷಗಳ ವಿಶ್ವಕಪ್ ಬರ ನೀಗಿಸಿಕೊಂಡ ಭಾರತ! – ಭಾರತ ವನಿತೆಯರಿಗೆ ಚೊಚ್ಚಲ ವಿಶ್ವಕಪ್‌ ಕಿರೀಟ!

ದೊಡ್ಮನೆಗೆ ಬಂದಾಗಿನಿಂದಲೂ ರಿಷಾ ಗಿಲ್ಲಿಯನ್ನ ಟಾರ್ಗೆಟ್‌ ಮಾಡ್ತಿದ್ದಾರೆ. ಈ ಮುಂಚೆ ಕೂಡ ಕಳಪೆ ವಿಚಾರಕ್ಕಾಗಿ ಗಿಲ್ಲಿಯನ್ನ ರಿಷಾ ಟಾರ್ಗೆಟ್‌ ಮಾಡಿದ್ರು. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ಗಿಲ್ಲಿ ನಿನಗೆ ಈ ವಾರ ಎಲ್ಲರೂ ಕಳಪೆ ನೀಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ಇದೀಗ ಬಕೆಟ್‌ನಿಂದ ಶುರುವಾದ ಜಗಳ ಇನ್ನೊಂದು ಹಂತಕ್ಕೆ ಹೋಗಿದೆ. ಗಿಲ್ಲಿನಟನಿಗೆ ಹೊಡೆದಿದ್ದಾರೆ ರಿಷಾ.

ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದಾರೆ. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆದಿದ್ದಾರೆ. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದಾರೆ. ರಕ್ಷಿತಾ ಅವರು ಎಷ್ಟೇ ತಡೆಯಲು ಪ್ರಯತ್ನಿಸಿದರೂ ರಿಷಾ ಕೋಪ ಮಾತ್ರ ತಣ್ಣಗಾಗಿಲ್ಲ. ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್​ಕೇಸ್​ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್​ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಆದರೆ ತಕ್ಷಣಕ್ಕೆ ಬಿಗ್‌ ಬಾಸ್‌ ಈಗ ರಿಷಾ ಅವರ ಮೇಲೆ ಯಾವುದೇ ಆಕ್ಷನ್‌ ತೆಗೆದುಕೊಂಡಿಲ್ಲ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂದು ಇದೀಗ ವೀಕ್ಷಕರು ಕಮೆಂಟ್‌ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಸಣ್ಣ ತಮಾಷೆಗೆ ಇಷ್ಟೆಲ್ಲ ರಂಪಾಟ ಮಾಡೋ ಅಗತ್ಯ ಇರಲಿಲ್ಲ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು. ಹೀಗಾಗಿ ವೀಕೆಂಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿ ರಿಷಾ ಅವರು ಎಲಿಮಿನೇಟ್‌ ಆಗ್ತಾರಾ? ಎನ್ನುವ ಪ್ರಶ್ನೆ ವೀಕ್ಷಕರದ್ದು.

Shwetha M