ಬಾಬಾವಂಗಾ ಬಂಗಾರದ ಭವಿಷ್ಯ – 2026ರಲ್ಲಿ ಗೋಲ್ಡ್‌ಗೆ ಡಬಲ್ ರೇಟ್
ಚಿನ್ನ ಜೇಬಿಗೆ ಹಾಕುತ್ತೆ ಕನ್ನ

ಬಾಬಾವಂಗಾ ಭವಿಷ್ಯದ ಬಗ್ಗೆ ಇತ್ತಿಚ್ಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ.. ಯಾಂಕಂದ್ರೆ ಅವರು ಹೇಳಿರೋ ಭವಿಷ್ಯ ನೂರಕ್ಕೆ 70 ರಿಂದ 80 ಪರ್ಸೆಂಟ್ ನಿಜವಾಗಿದೆ. ಇವರು ಕೇವಲ ಒಂದು ಊರಿನ ಬಗ್ಗೆನೋ ಒಂದು ದೇಶದ ಬಗ್ಗೆನೋ ಭವಿಷ್ಯ ಹೇಳಿಲ್ಲ. ಇಡೀ ವಿಶ್ವದ ಬಗ್ಗೆ.. ಪ್ರಪಂಚದಲ್ಲಿ ಆಗುವ ಬೆಳವಣಿಗಳ ಬಗ್ಗೆ ಹೇಳಿದ್ದಾರೆ. ಅದ್ರಲ್ಲೂ ಯಾವ ವರ್ಷ ಏನೆಲ್ಲಾ ಆಗುತ್ತೆ? ಯಾವ ತಿಂಗಳು ಏನೆಲ್ಲಾ ಆಗುತ್ತೆ ಅನ್ನೋದ್ದನ್ನ ಇವರು ಬರೆದಿಟ್ಟಿದ್ದಾರೆ. ಅವರ ಭವಿಷ್ಯದ ಬಗ್ಗೆ ಚರ್ಚೆ ಆಗುತ್ತಿರುವಾಗಲೇ ಈಗ ಅವರ ಚಿನ್ನದ ಬಗ್ಗೆ ಹೇಳಿರೋ ಭವಿಷ್ಯ ಸಕಷ್ಟು ಹಲ್‌ಚಲ್ ಎಬ್ಬಿಸಿದೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಹೊಸ ಇತಿಹಾಸ – ಕರ್ನಾಟಕದಲ್ಲಿ 250 ಕೋಟಿ ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ!
ಸದ್ಯ ಸಖತ್ ಟ್ರೆಂಡಿನಲ್ಲಿರೋ ಸುದ್ದಿ ಅಂದ್ರೆ ಅದು ಚಿನ್ನದ ರೇಟ್ ಬಗ್ಗೆ. ಈ ಹಳದಿ ಲೋಹವನ್ನ ಸಾಮಾನ್ಯ ಜನ ಮುಟ್ಟದಂತೆ ಆಗಿದೆ. ಯಾಕಂದ್ರೆ ಬೆಲೆ ದಿನ ನಿತ್ಯ ಹೆಚ್ಚುತ್ತಲೇ ಇದೆ.. ಹೀಗಾಗಿಯೇ ಬಡವರು ಮಧ್ಯಮ ವರ್ಗದ ಜನ ಚಿನ್ನವನ್ನ ಖರೀದಿ ಮಾಡೋ ಆಸೆಯನ್ನೇ ಬಿಟ್ಟಿದ್ದಾರೆ. ಮದುವೆಗಳಿಗೆ ಚಿನ್ನ ಖರೀದಿ ಮಾಡೋದು ತುಂಬಾ ಕಷ್ಟ ಆಗಿದೆ. ಕಳೆದ ಕೆಲವು ದಿನಗಳಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಏರಿಕೆ ಆಗ್ತಿದೆ. ಆದ್ರೆ ದೀಪಾವಳಿಯ ನಂತರ ಭಾರತದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಏರುತ್ತಿರುವ ಬೆಲೆಗಳಿಗೆ ಹೋಲಿಸಿದರೆ ಇಳಿಕೆ ಪ್ರಮಾಣ ಕಡಿಮೆ. 2025 ಇನ್ನೂ ಮುಗಿಯಲು 2 ತಿಂಗಳೂ ಇದ್ದು, 2026 ರಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳ ಮೇಲೆ ಎಲ್ಲರೂ ಗಮನಹರಿಸಿದ್ದಾರೆ. ಅದ್ರಲ್ಲೂ 2026 ರ ಚಿನ್ನದ ಬೆಲೆ ಬಗ್ಗೆ ಬಾಬಾ ವಂಗಾ ಭವಿಷ್ಯ ಕೇಳಿ ಎಲ್ಲಾ ಶಾಕ್ ಆಗಿದ್ದಾರೆ.
ಹೌದು.. ಬಾಬಾ ವಂಗಾ 2026 ರಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟಾಗಬಹುದು, ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಹೀಗಾಗಿ ಚಿನ್ನದ ಬೆಲೆ ಹೆಚ್ಚಾಗುತ್ತೆ ಅನ್ನೋ ಭವಿಷ್ಯವನ್ನ ನುಡಿದಿದ್ದಾರೆ. ಬಾಬಾ ವಂಗಾ ಅವರ ಭವಿಷ್ಯವಾಣಿಯು ನಿಜವಾದರೆ ಚಿನ್ನದ ಬೆಲೆ ಹೊಸ ದಾಖಲೆಗಳನ್ನು ತಲುಪಬಹುದು ಪಕ್ಕಾ.. .
ಜಾಗತಿಕ ಬಿಕ್ಕಟ್ಟು ಸಂಭವಿಸಿದ್ರೆ ಚಿನ್ನದ ಬೆಲೆ ಶೇಕಡಾ 25 ರಿಂದ 40 ರಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ. ಅಂದ್ರೆ ಮುಂದಿನ ದೀಪಾವಳಿಗೆ ಚಿನ್ನದ ಬೆಲೆಗಳು 1,62,500 ರಿಂದ 1,82,000 ರೂ.ಗಳ ನಡುವೆ ಇರಬಹುದು, ಇದು ಚಿನ್ನದ ಬೆಲೆಗಳಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದೆ.
ಬಾಬಾ ವಂಗಾ ಅವರ ಭವಿಷ್ಯವಾಣಿಯು ನಿಜವಾದರೆ.. ರೇಟ್ ಕಮ್ಮಿ ಇದ್ದಾಗ ಚಿನ್ನವನ್ನು ಖರೀದಿಸುವವರು ಕೋಟ್ಯಾಧಿಪತಿಗಳಾಬಹುದು.. ಹಾಗಂತ ಬಾಬಾ ವಾಂಗಾ ಹೇಳಿದ್ದಾರೆ ಚಿನ್ನದ ರೇಟ್ ಜಾಸ್ತಿ ಆಗುತ್ತೆ ಅಂತ ಮನೆ-ಮಠ ಮಾರಿ ಚಿನ್ನದ ಮೇಲೆ ದುಡ್ಡು ಹಾಕುವ ಮುನ್ನ ಸ್ವಲ್ಪ ಯೋಚನೆ ಮಾಡಿ.. ಯಾಕಂದ್ರೆ ತಜ್ಞರ ಪ್ರಕಾರ ಕೇವಲ ಭವಿಷ್ಯವಾಣಿಗಳನ್ನೇ ನಂಬಿಕೊಂಡು ಹೂಡಿಕೆ ಮಾಡೋದು ದೊಡ್ಡ ರಿಸ್ಕ್. ಈ ವಿಷ್ಯದಲ್ಲಿ ಹೂಡಿಕೆದಾರರು ತುಂಬಾ ಹುಷಾರಾಗಿ, ತಲೆ ಉಪಯೋಗಿಸಿ ನಿರ್ಧಾರ ತಗೋಬೇಕಾಗುತ್ತೆ. ನಿಮ್ಮ ಹತ್ರ ಹೆಚ್ಚುವರಿ ಹಣ ಇದ್ದು ಅದ್ರಲ್ಲಿ ಚಿನ್ನ ಖರೀದಿ ಮಾಡಿದ್ರೆ ಓಕೆ. ಅದು ಬಿಟ್ಟು ನಿಮ್ಮ ಹತ್ರ ದುಡ್ಡಿಲ್ಲದೇ ಯಾರೋ ಹತ್ರ ಸಾಲ ಮಾಡಿ ಚಿನ್ನ ಖರೀದಿ ಮಾಡಿ, ಅದು ಡಬಲ್ ಆದಾಗ ಮಾರೋಣ ಅಂತ ಪ್ಲ್ಯಾನ್ ಮಾಡಿದ್ರೆ ಸ್ವಲ್ಪ ಹುಷಾರ್. ಯಾಕಂದ್ರೆ ಸಾಲ ಮಾಡಿ ಅದ್ದಕ್ಕೆ ಬಡ್ಡಿ ಕಟ್ಟುತ್ತಾ ಇರ್ತೀರಾ, ಒಂದು ವೇಳೆ ಚಿನ್ನದ ರೇಟ್ ಬಿದ್ದು ಹೋದ್ರೆ ಅದೇ ಚಿನ್ನ ಕನ್ನ ಆಗುತ್ತೆ.. ಹೀಗಾಗಿ ನೀವು ತುಂಬಾ ಯೋಚನೆ ಮಾಡಿ ಪ್ಲ್ಯಾನ್ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು..

ನೋಡಿರಿ

