ರಾಮನಗರದಲ್ಲಿ ರೇವ್ ಪಾರ್ಟಿ – ಮತ್ತಿನಲ್ಲಿದ್ದ ಯುವತಿ , ಯುವಕರು ಅರೆಸ್ಟ್

ಬೆಂಗಳೂರು ದಕ್ಷಿಣ ಜಿಲ್ಲೆಯ ಅಡವಿ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ನಡೆಸಿದ್ದಾರೆ. ಬೆಂಗಳೂರಿನ ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ, 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.
ಪಾರ್ಟಿ ನಡೆಸುತ್ತಿದ್ದವೆರಲ್ಲ ಬೆಂಗಳೂರು ಮೂಲದವರು ಎಂದು ಹೇಳಲಾಗಿದ್ದು, 150ಕ್ಕೂ ಹೆಚ್ಚು ಜನರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಒಟ್ಟು 130 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ.. ನಾಗರಹೊಳೆ, ಬಂಡೀಪುರ ಸಫಾರಿಯಲ್ಲಿ ಮಹತ್ವದ ಬದಲಾವಣೆ!
ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, 35 ಯುವತಿಯರು ಸೇರಿದಂತೆ ಒಟ್ಟು 130 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ರೇವ್ ಪಾರ್ಟಿಯಲ್ಲಿ ಬಹುತೇಕ ಕಾಲೇಜು ಯುವಕ ಯುವತಿಯರು ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಎಲ್ಲರನ್ನೂ ಬಂಧಿಸಿ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಮಾಧ್ಯಮ ಮತ್ತು ಇತರರು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ತಡೆದಿದ್ದಾರೆ.

ನೋಡಿರಿ

