ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದವರಿಗೆ ಗುಡ್ನ್ಯೂಸ್! – ಪರಿಷ್ಕೃತ ನಕ್ಷೆ ಪಡೆಯಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

ಕರ್ನಾಟಕದಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಟನೆ ಮಾಡಿ ಕಟ್ಟಿದ ಕಟ್ಟಡಗಳಿಗೆ ಸರ್ಕಾರ ವಿನಾಯಿತಿ ಘೋಷಿಸಿದೆ. ರಾಜ್ಯ ಸರ್ಕಾರ ದಂಡ ಕಟ್ಟಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ ನೀಡಿದೆ.
ಇದನ್ನೂ ಓದಿ: ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ರೊಮ್ಯಾಂಟಿಕ್ ಮೂಡ್ನಲ್ಲಿ ಗಿಲ್ಲಿ-ಕಾವ್ಯ!
ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಯಾಗಿದೆ. ಶೇಕಡಾ 15 ರ ಮಿತಿಯೊಳಗೆ ನಿಯಮ ಉಲ್ಲಂಘಟನೆ ಮಾಡಿದ ಕಟ್ಟಡಗಳಿಗೆ ಮಾತ್ರ ಇದು ಅನ್ವಯ ಆಗಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕೆ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 1000 ರೂ ದಂಡ. ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 1500 ರೂ ದಂಡ ನಿಗದಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 1200 – ವಾಣಿಜ್ಯ ಕಟ್ಟಡಕ್ಕೆ 1800 ರೂ ದಂಡ ಇರಲಿದೆ.
ನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 1500 – ವಾಣಿಜ್ಯ ಕಟ್ಟಡಕ್ಕೆ 2250 ರೂ ದಂಡ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 2000 ರೂ ದಂಡ ನಿಗದಿ. ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 300 ರೂ ದಂಡ ನಿಗದಿಪಡಿಸಿ ಆದೇಶ. ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಗೂ ದಂಡ ನಿಗದಿ. ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ 5000 ರೂ ದಂಡ ನಿಗದಿ. ಆದರೆ ನಗರಸಭೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ ಪಾರ್ಕಿಂಗ್ ಗೆ ದಂಡ ನಿಗದಿಯಿಲ್ಲ.

ನೋಡಿರಿ

