ರಾಶಿಕಾ, ಅಶ್ವಿನಿ ಪ್ಲ್ಯಾನ್ ಠುಸ್! – ಈ ವಾರದ ಕಳಪೆ ಧ್ರುವಂತ್!

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಇದೀಗ ಮೂರನೇ ವಾರದ ಕಳಪೆ ಪಟ್ಟ ಗಿಲ್ಲಿನಟನಿಗೆ ಕೊಡ್ಬೇಕು ಅಂತಾ ಅಶ್ವಿನಿ ಹಾಗೂ ರಾಶಿಕಾ ಪ್ಲ್ಯಾನ್ ಮಾಡಿದ್ರು. ಆದ್ರೀಗ ಇವರಿಬ್ಬರ ಪ್ಲ್ಯಾನ್ ಉಲ್ಟಾ ಆಗಿದೆ. ಈ ವಾರದ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ.
ಇದನ್ನೂ ಓದಿ: ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ರೊಮ್ಯಾಂಟಿಕ್ ಮೂಡ್ನಲ್ಲಿ ಗಿಲ್ಲಿ-ಕಾವ್ಯ!
ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಕಾಲೇಜ್ ಆಗಿ ಬದಲಾಗಿತ್ತು. ಇದರಲ್ಲಿ ಧ್ರುವಂತ್ ಎಲ್ಲೂ ಕಾಣಿಸಿಕೊಂಡಿಲ್ಲ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಅಲ್ಲದೆ ವಾರದ ಆರಂಭದಲ್ಲೇ ಬಿಗ್ ಬಾಸ್ ಕಾಲೇಜ್ನಿಂದ ಚಂದ್ರಪ್ರಭ ಜೊತೆಗೆ ಇವರೂ ಡಿಬಾರ್ ಆದರು. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೋಮೋ ಒಂದು ಬಿಡುಗಡೆ ಮಾಡಿದೆ.
ಪ್ರೋಮೋದಲ್ಲಿ ಮನೆಯಲ್ಲಿನ ಹೆಚ್ಚಿನ ಸ್ಪರ್ಧಿಗಳು ಕಳಪೆಗೆ ಧ್ರುವಂತ್ ಹೆಸರು ತೆಗೆದುಕೊಂಡಿದ್ದಾರೆ. ಕಳಪೆ ಧ್ರುವ್ ಎಂದು ಅನೇಕರು ಹೇಳಿದ್ದಾರೆ. ಕಾರಣ ಏನಂದ್ರೆ, ಕಳೆದ ವಾರ ಇವರಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿತ್ತು. ಆದರೆ, ಧ್ರುವ್ ಅದನ್ನು ನನಗೆ ಬೇಡ ಅಂತ ರಿಟರ್ನ್ ಮಾಡಿದ್ದರು. ಹೀಗಾಗಿ ಅವರು ನಮ್ಮ ನಿರ್ಧಾರಕ್ಕೆ ಅವರು ಬೆಲೆ ಕೊಡಲಿಲ್ಲ ಎಂದು ಕಾವ್ಯಾ ಮತ್ತು ಚಂದ್ರಪ್ರಭ ಹೇಳಿದ್ದಾರೆ. ಮತ್ತೊಂದಡೆ ರಿಷಾ ಅವರು, ಧ್ರುವಂತ್ ತುಂಬಾ ಎಲ್ಲ ವಿಷಯಗಳಲ್ಲೂ ಮಾತಾಡ್ತಾರೆ. ಮನೆ ಕೆಲಸ ಮನೆ ಕೆಲಸ ಅಂತಾರೆ ಆದ್ರೆ ಈ ವಾರದಲ್ಲಿ ಅವರು ಯಾವ ಡಿಪಾರ್ಟ್ಮೆಂಟ್ನಲ್ಲಿ ಇದ್ರು ಅಂತ ನನ್ಗೆ ಅಂತೂ ಗೊತ್ತಾಗಿಲ್ಲ ಎಂದಿದ್ದಾರೆ. ಅವರು ಡಿಬಾರ್ ಆದ ಬಳಿಕ ಡಿಫೆಂಡ್ ಮಾಡಿಲ್ಲ ಎಂದು ಸೂರಜ್ ಹೇಳಿದರೆ ಅವರು ಎಮಿಡಿಯೆಟ್ ಆಗಿ ಸೋಲು ಒಪ್ಪಿಕೊಂಡರು ಎಂದು ಕ್ಯಾಪ್ಟನ್ ರಘು ಹೇಳಿದರು. ಜೈಲಿನ ಒಳಗೆ ಹೋದ ಬಳಿಕ ಧ್ರುವಂತ್ ಅವರು, ನನಗೆ ರೀಸನ್ಸ್ ತುಂಬಾ ಇಷ್ಟ ಆಯಿತು ಎಂದು ಹೇಳಿದ್ದಾರೆ.

ನೋಡಿರಿ

